ರಾಜ್ಯದಲ್ಲಿ   ಶಿಕ್ಷಣದ ಸ್ಥಿತಿ ಅಧೋಗತಿಗೆ :ರವಿಕುಮಾರ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.21:  ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಬಂದ ಮೇಲೆ  ಶಿಕ್ಷಣದ ಸ್ಥಿತಿ ಅಧೋಗತಿಗೆ ತಲುಪಿದೆಂದು ವಿಧಾನ‌ಪರಿಷತ್ತಿನ‌ ಸಚೇತಕ ಎನ್. ರವಿಕುಮಾರ್ ಆರೋಪಿಸಿದ್ದಾರೆ.
ನಗರದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳ ಜೊತೆ ಮಾತನಾಡಿದ ಅವರು.  ಸಿದ್ದರಾಮಯ್ಯ ಅವರು, ಮಧು ಬಂಗಾರಪ್ಪ ಅವರನ್ನ ಶಿಕ್ಷಣ ಸಚಿವರನ್ನಾಗಿ ಮಾಡಿದ್ದಾರೆ. ಕನಿಷ್ಟ ಪಕ್ಷ ಕಟಿಂಗ್ ಮಾಡಿಸುವ ಸಂಸ್ಕೃತಿಯನ್ನು ಅರಿಯದ ಇಂತಹ ಶಿಕ್ಷಣ ಸಚಿವನನ್ನು ಪಡೆಯೊದಕ್ಕೆ ನಮ್ಮ ಮಕ್ಕಳು, ನಮ್ಮ ರಾಜ್ಯ ಏನ್ ಕರ್ಮಾ ಮಾಡಿತ್ತೋ ಎಂದಿದ್ದಾರೆ.
ಕಳೆದ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 83 ಪರ್ಸೆಂಟ್ ಫಲಿತಾಂಶ ಬಂದಿತ್ತು. ಈ ಬಾರಿ ಕೇವಲ 53 ಪರ್ಸೆಂಟ್ ಫಲಿತಾಂಶ ಬಂದಿದೆ, ಫಲಿತಾಂಶ ಈ ಪ್ರಮಾಣದಲ್ಲಿ ಕುಸಿದಿದ್ದರಿಂದ ಶೇ 20 ಅಂಕ ಗ್ರೇಸ್ ನೀಡಿ ಫಲಿತಾಂಶವನ್ನು ಶೇ 71 ಕ್ಕೆ ಮಾಡಿದೆ.ಇಷ್ಟೊಂದು ಫಲಿತಾಂಶ ಕುಸಿಯಲು ಕಾರಣ ಶಿಕ್ಷಣದ ಬಗ್ಗೆ ಕಾಳಜಿ ಇಲ್ಲದ  ಸರ್ಕಾರ ಇದಾಗಿದೆ. ಇದಕ್ಕೆ ಯಾರು  ಹೊಣೆ, ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದಿದ್ದಾರೆ.
ಶಿಕ್ಷಣದ ಗುಣ ಮಟ್ಟ ಅತ್ಯಂತ ಕಳೆಪೆಯಾಗಿದೆ, ಇದಕ್ಕೆ ಸಿದ್ದರಾಮಯ್ಯ ಸರ್ಕಾರ ಹಾಗು ಮಂತ್ರಿಗಳು ಹೊಣೆ. ಶಿಕ್ಷಣ ಸಚಿವ ಮಧು ಬಂಗಾರಪ್ಪಾ ಅವರಿಗೆ ಯಾವ ಮೆರಿಟ್ ನೋಡಿ ಶಿಕ್ಷಣ ಖಾತೆ ಕೊಟ್ಟಿದ್ದಾರೆ, ದೇವರೇ ಕಾಪಾಡಬೇಕು.
ಕಾಂಗ್ರೆಸ್ ನವರು ಕಲ್ಯಾಣ ಕರ್ನಾಟಕ್ಕೆ ನ್ಯಾಯ ಒದಗಿಸ್ತೇವೆ ಎಂದಿದ್ದಾರೆ. ಆದ್ರೆ ಈ ಭಾಗದಲ್ಲಿ  17796 ಶಿಕ್ಷಕರ ಕೊರತೆ ಇದೆ,  ಶಿಕ್ಷಕರ ವರ್ಗಾವಣೆ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಮಾಡ್ತಾ ಇದೆ. ಸರ್ಕಾರಕ್ಕೆ ಜನರೇ ಉತ್ತರ ಕೊಡ್ತಾರೆಂದಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಎಂಎಲ್ ಸಿ ಚುನಾವಣೆ ಅಭ್ಯರ್ಥಿ ಅಮರನಾಥ ಪಾಟೀಲ್, ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು ಮೊದಲಾದವರು ಇದ್ದರು.