ಇದು ನಿಮ್ಮವಾಣಿವಾಹನಗಳಿಗೆ ಪಾರ್ಕಿಂಗ್ ಶುಲ್ಕ ಮಾಡಿ
ಮಾನ್ಯರೇ,
ದಿನದಿಂದ ದಿನಕ್ಕೆ ಬಳ್ಳಾರಿಯಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಮತ್ತು ಕಾರುಗಳ ಸಂಖ್ಯೆಗಳ ಸಂಖ್ಯೆ ಏರುತ್ತಲೇ ಇವೆ.ರಸ್ತೆಗಳು ಕಿರಿದಾಗಿ ವಾಹನಗಳ ನಿಲುಗಡೆಗೆ ತೊಂದರೆ ಅನುಭವಿಸುವಂತೆ ಆಗಿದೆ. ಅದರಲ್ಲೂ ನಮ್ಮ
ಬಳ್ಳಾರಿಯ ಬೆಂಗಳೂರು ರಸ್ತೆಯಲ್ಲಿ ಅತಿ ಹೆಚ್ಚು ವಿವಿಧ ವ್ಯಾಪಾರ  ಮಳಿಗೆಗಳು ಇರುವುದರಿಂದ, ಅಲ್ಲೇ ಸಣ್ಣ ಕಾಯಿಪಲ್ಲೆ ಮಾರ್ಕೆಟ್,ಹಣ್ಣಿನ ಅಂಗಡಿ, ಬಟ್ಟಿ ಅಂಗಡಿ,ಹೂವಿನ ಅಂಗಡಿಗಳು… ಇರುವುದರಿಂದ ಮತ್ತು ಬೆಳ್ಳಿ ಬಂಗಾರದ ಅಂಗಡಿ ಒಂದೇ ಎರಡೇ ವಿವಿಧ ದಿನ ನಿತ್ಯ ಮನೆಗೆ ಬಳಸುವ ಗೃಹ ಉಪಯೋಗಿ ವಸ್ತುಗಳ ಅಂಗಡಿಗಳು ಹೆಚ್ಚಾಗಿ    ಇರುವುದರಿಂದ,ಗ್ರಾಹಕರು ಖರೀದಿಗೆಂದು ಬರುವುದರಿಂದ ಈ ರಸ್ತೆ ತುಂಬಿ ತುಳುಕುತ್ತದೆ.ದಿನ ನಿತ್ಯ ಸುತ್ತ ಮುತ್ತ ಹಳ್ಳಿಗಳಿಂದ ಬರುವ ಗ್ರಾಹಕರು ಮತ್ತು ಸ್ಥಳೀಯ ಗ್ರಾಹಕರು ತಮಗೆ ಬೇಕಾದ ಸಾಮಾನುಗಳನ್ನು ಕೊಳ್ಳುವ ಅಂಗಡಿ ಮುಂದೆ ತಮ್ಮ ವಾಹನವನ್ನು ನಿಲುಗಡೆಗೆ ಮಾಡಿ ವ್ಯಾಪಾರ ಮಾಡ ಬೇಕೆಂದರೆ ವಾಹನ ನಿಲ್ಲಿಸುವ ಜಾಗಕ್ಕೆ ಹರ ಸಾಹಸ ಮಾಡ ಬೇಕಾದ ಪರಿಸ್ಥಿತಿ ಬಂದಿದೆ.ವಾಹನವನ್ನು ಬಹಳ ದೂರ ಹೋಗಿ ನಿಲ್ಲಿಸುವ ಪರಿಸ್ಥಿತಿ ಬಂದಿದೆ. ಹಬ್ಬದ ದಿನಗಳಲ್ಲಿ ಪರಿಸ್ಥಿತಿ ಹೇಳುವ ಹಾಗಿಲ್ಲ ,ಇನ್ನು  ಸಾಮಾನ್ಯ ದಿನದಲ್ಲೂ ವಾಹನ ನಿಲುಗಡೆ ತೊಂದರೆ ಅನುಭವಿಸಿ ಬೇಕಾಗಿದೆ.ಎಂಬತ್ತರ ದಶಕದಲ್ಲಿ  ಬರೀ ಸೈಕಲ್ ಬಳಕೆ ಹೆಚ್ಚಾಗಿದ್ದ ಕಾಲ.ಆಗ ಸೈಕಲ್ ಬಳಸಿದ್ದರಿಂದ ಪಾರ್ಕಿಂಗ್ ವ್ಯವಸ್ಥೆ ಸುಲಭವಾಗಿತ್ತು. ಈಗೀಗಗಂತು ಹೊಸ ಹೊಸ ದ್ವಿಚಕ್ರ ವಾಹನ ಮತ್ತು ಕಾರುಗಳುಗಳ ಬಳಕೆ ಹೆಚ್ಚಾಗಿವೆ.ಅದರಲ್ಲೂ ಅಂಗಡಿಯಲ್ಲಿ ಕೆಲಸ ಮಾಡು ನೌಕರರು ಮತ್ತು ಅಂಗಡಿಯ ಯಜಮಾನರ ಅವರ  ವಾಹನಗಳನ್ನು ಅವರ ಅಂಗಡಿಯ ಮುಂದೆ ನಿಲ್ಲಿಸಿರುತ್ತಾರೆ.ಅವರ ಅಂಗಡಿಯ ವಾಹನಗಳು ಅಲುಗಾಡದ ಪರಿಸ್ಥಿತಿಯಲ್ಲಿ ನಿಂತಿರುತ್ತವೆ.ವ್ಯಾಪಾರಕ್ಕೆಂದು ಬರುವ ಗ್ರಾಹಕರು ತಮ್ಮ ವಾಹನ ಎಲ್ಲಿ ನಿಲ್ಲಿಸಿ ಬೇಕೆಂಬುದೇ  ಯಕ್ಷ ಪ್ರಶ್ನೆ ಯಾಗಿ ಕಾಡುತ್ತಿದೆ.ಈಗಂತು ಕಾರುಗಳ ಪಾರ್ಕಿಂಗ್ ವ್ಯವಸ್ಥೆ ಬೇರೆ ಆಗಿದೆ.
ಬೆಂಗಳೂರು ರಸ್ತೆಯಲ್ಲಿ ನಮಗೆ ಬೇಕಾದ ಅಂಗಡಿ ಹೋಗಿ ತಟ್ಟನೆ ಸಮಾನು ತರವುದೇ ಬೇಡ ಎಂದೆನಿಸಿದೆ, ಕಾರಣ ಪಾರ್ಕಿಂಗ್ ವ್ಯವಸ್ಥೆಯ ಸ್ಥಿತಿ.ದಯಮಾಡಿ ಸಂಬಂಧ ಪಟ್ಟ ಇಲಾಖೆ ಇತ್ತ ಕಡೆ ಗಮನ ಹರಿಸಿ, ವಿವಿಧ  ವಾಹನಗಳಿಗೆ ಒಂದು ಗಂಟೆಗೆ ಇಂತಿಷ್ಟು ಪಾರ್ಕಿಂಗ್ ಶುಲ್ಕ ಎಂದು ನಿಗದಿ ಮಾಡಿದರೆ, ವ್ಯಾಪಾರಕ್ಕೆಂದು ಬರುವ ಗ್ರಾಹಕರಿಗೆ ಅನುಕೂಲವಾಗಬಹುದು.ಬೇರೆಯವರಿಗೂ ವಾಹನ ನಿಲ್ಲಿಸಲಿಕ್ಕೆ ಅನುಕೂಲವಾಗುತ್ತದೆ.ಇನ್ನು  ಮುಂದಿನ ದಿನಗಳಲ್ಲಿ ಸುಲಭವಾಗಿ ವಾಹನಗಳನ್ನು ನಿಲ್ಲಿಸಲಿಕ್ಕೆ ಅನುಕೂಲವಾಗಬಹುದೆಂದು ನಂಬಿದ್ದೇನೆ.
ಧನ್ವಂತರಿ.ಮಾನ್ವಿ
ಬಳ್ಳಾರಿ.