`ಬಿಸಿಲ ಹೂ’ ಕೃತಿ ಬಿಡುಗಡೆ
ಧಾರವಾಡ,ಮೇ.21:ಕವಿಯಲ್ಲಿ ವಿಮರ್ಶಕನಿರಬೇಕು. ವಿಮರ್ಶಕನಲ್ಲಿ ಕವಿ ಮನೋಭಾವಇರಬೇಕು.ಕವಿಯುಕೂಡ ವಿಮರ್ಶಕನೇಆಗಿರುತ್ತಾನೆಎಂದುಧಾರವಾಡ ಕ.ವಿ.ವಿಯಎಮೆರಿಟಸ್ ಪ್ರಾಧ್ಯಾಪಕರು, ವಿಮರ್ಶಕ ಪ್ರೊ. ಸಿ. ಆರ್. ಯರವಿನತೆಲಿಮಠಎಂದರು. ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಶತಾಯುಷಿ ದಿ.ಸಂಗಮ್ಮಇಮ್ರಾಪೂರದತ್ತಿ ನಿಮಿತ್ತತಾಯಿ ಸ್ಮರಣೆಯೊಂದಿಗೆ ಆಯೋಜಿಸಿದ್ದ ಪ್ರೊ.ಸೋಮಶೇಖರಇಮ್ರಾಪೂರಅವರ ಸಮಗ್ರಕಾವ್ಯ ಸಂಪುಟಬಿಸಿಲ ಹೂ’ ಕೃತಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಕಲಿಯುವ ಸಂದರ್ಭದಲ್ಲಿಯೇ ಕವನ ಸಂಕಲನವನ್ನು ಬಿಡುಗಡೆ ಮಾಡಿದಇಮ್ರಾಪೂರಅವರಲ್ಲಿ ಬಾಲ್ಯದಲ್ಲಿಯೇಕಾವ್ಯರಚನಾ ಶಕ್ತಿ ತುಂಬಿತ್ತು.ಕಷ್ಟದಜೀವನ, ಬದುಕಿನ ಕಹಿ ಘಟನೆಗಳು ಅವರಿಗೆಕಾವ್ಯರಚನೆಗೆ ಪ್ರೇರಣೆ ನೀಡಿದವು.ರಸ, ವಿರಸ, ಸರಸದ ಚಿತ್ರಣಗಳನ್ನು ಇಮ್ರಾಪೂರಅವರ ಕಾವ್ಯಗಳಲ್ಲಿ ಕಾಣುತ್ತೇವೆ. ಅವರ ವ್ಯಕ್ತಿಚಿತ್ರದ ಕವನಗಳನ್ನು ಅವಲೋಕಿಸಿದಾಗ ಕಲ್ಲಿನಲ್ಲಿಕೆತ್ತಿದ ಪಾರದರ್ಶಕ ಮೂರ್ತಿಯಂತೆಕೆತ್ತಿಕೊಟ್ಟಿದ್ದಾರೆ. ಅವರಕಾವ್ಯದಲ್ಲಿ ನಾದ ಮಾಧುರ್ಯವಿದೆ.ಸಾಮಾಜಿಕ ಪ್ರಜ್ಞೆಇದೆಎಂದರು.
ಮುಖ್ಯಅತಿಥಿಯಾಗಿ ಮೈಸೂರಿನ ಕವಿ, ವಿಶ್ರಾಂತ ಪ್ರಾಧ್ಯಾಪಕಡಾ.ಅರವಿಂದ ಮಾಲಗತ್ತಿ ಮಾತನಾಡಿ, ನನಗೆ ಸಾಹಿತ್ಯಿಕ ದೀಕ್ಷೆಯನ್ನುಕೊಟ್ಟಿದ್ದುಧಾರವಾಡ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘ.ಇವೆರಡೂ ನನ್ನ ಬೆನ್ನಿಗೆ ನಿಂತು ಬೆನ್ನುತಟ್ಟಿ ನನ್ನನ್ನು ಬೆಳೆಸಿವೆ ಎಂದಅವರು ಮುಂದುವರೆದು ಮಾತನಾಡುತ್ತಾ, ಇಮ್ರಾಪೂರಅವರು ಸೀಮಾತೀತ ಕವಿ. `ಆ ಬಾಲೆ’ ಕವನದಿಂದ ಪ್ರಾರಂಭವಾದ ಸಾಹಿತ್ಯ ಕೃಷಿ ಎಲ್ಲಾ ಪಂತಗಳ ಕ್ರಿಯೆ, ಪ್ರಕ್ರಿಯೆಗಳನ್ನು ದಾಟಿ ಬಂದಿರುವಂಥದ್ದು.ಸಮನ್ವಯ ಕವಿ ಎಂಬ ಹೆಸರಿಗೆ ಪಾತ್ರರಾದವರು.ಆಧುನಿಕ ಸಂಗತಿಗಳು ಅವರಕಾವ್ಯದಲ್ಲಿಅಡಕವಾಗಿವೆ. ತಂತ್ರಜ್ಞಾನ ಭಾರತದಜೊತೆಒಡನಾಡುತ್ತಿರುವುದಕ್ಕೆಅವರ ಕಾವ್ಯಗಳು ಸಾಕ್ಷಿಯಾಗಿವೆ. ಕಾವ್ಯದ ಸೆಲೆ ಬತ್ತಿಲ್ಲಎನ್ನುವುದುಅವರ ಕಾವ್ಯಗಳಿಂದ ಗೋಚರವಾಗುತ್ತದೆ.ಅಡಿಗರ ನಂತರ ನವೋತ್ತರ ಕವಿ ಯಾರು?ಎಂಬ ಪ್ರಶ್ನೆ ಬಂದಾಗ ಬೇಂದ್ರೆ, ಇಮ್ರಾಪೂರಅವರ ಹೆಸರು ಕೇಳಿ ಬಂದದ್ದುಂಟು.ಇಮ್ರಾಪೂರಅವರುದಾಂಪತ್ಯಜೀವನದಅರಸುಕವಿಯಾಗಿದ್ದಾರೆ.ಅನುಭವವನ್ನು ಮೀರಿದ ಅನುಭಾವಗಳನ್ನು ಅವರಕಾವ್ಯ ಒಳಗೊಂಡಿದೆ.ಬೇಂದ್ರೆಯವರುಒಂದು ಮರದ ಸೌಂದರ್ಯವನ್ನೂಅದ್ಭುತವಾಗಿಕಣ್ಣಿಗೆಕಟ್ಟುವ ಹಾಗೆ ವರ್ಣಿಸಿದರೆ, ಇಮ್ರಾಪೂರರು ಮರದೊಂದಿಗೆ ಮರದ ಬೇರುಗಳನ್ನೂ ಒಳಗೊಂಡು ವರ್ಣಿಸುವ ಕವಿ.ಸಿದ್ಧಲಿಂಗಯ್ಯನವರ ಬೈಗುಳಗಳಿಂದ ಕಾವ್ಯಗಳನ್ನು ನೋಡುತ್ತೇವೆ. ಅದಕ್ಕೂ ಮಿಗಿಲಾಗಿ ಭಿನ್ನವಾದರೀತಿಯಲ್ಲಿ ಬೈಗುಳಗಳ ಮುಖಾಂತರಕಾವ್ಯವನ್ನುಕಟ್ಟಿಕೊಟ್ಟಿದ್ದುಇಮ್ರಾಪೂರರು.ಅವರ ಕಾವ್ಯಗಳು ಉಪಮೆ-ಪ್ರತಿಮೆಗಳು ಜಾನಪದ ಸತ್ವನ್ನು ಒಳಗೊಂಡಿರುವಂತಹವು.ಬಂಡಾಯದ ಶಕ್ತಿಯನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದಉಪಾಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಧ್ವನಿಪೂರ್ಣ ಶೀರ್ಷಿಕೆ, ಪ್ರತಿಯೊಬ್ಬಕವಿಯೂ ಹೂವಿನಂತ ಮನಸ್ಸುಳ್ಳವನು.ಬದುಕಿನ ಸೌಂದರ್ಯವನ್ನು ಕವಿ ಕಾವ್ಯದ ಮೂಲಕ ಕಟ್ಟಿಕೊಡುತ್ತಾನೆ.ಸ್ತ್ರೀ ಪರವಾದ ಪ್ರಜ್ಞೆಕವಿಯಲ್ಲಿದೆಎಂದರು.
ವೇದಿಕೆ ಮೇಲೆ ಪ್ರೊ.ಸೋಮಶೇಖರಇಮ್ರಾಪೂರ, ಪ್ರೊ.ಶಾಂತಾಇಮ್ರಾಪೂರಇದ್ದರು.
ಪ್ರಾರಂಭದಲ್ಲಿ ಶ್ರೀಮತಿ ಸುಜಾತಗುರವ ಸುಗಮ ಸಂಗೀತ ಪ್ರಸ್ತುತಪಡಿಸಿದರು. ಹಾರ್ಮೋನಿಯಂ ಪರಶುರಾಮಕಟ್ಟಿಸಂಗಾವಿ ಹಾಗೂ ಅಲ್ಲಮಪ್ರಭು ಕಡಕೋಳ ತಬಲಾ ಸಾಥ್ ನೀಡಿದರು.
ವೀರಣ್ಣಒಡ್ಡೀನ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಮಹೇಶ ಧ. ಹೊರಕೇರಿ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ನಿಂಗಣ್ಣಕುಂಟಿ, ಬಿ.ಎಸ್. ಶಿರೋಳ, ಮಧುದೇಸಾಯಿ, ಜಿ.ಬಿ. ಹೊಂಬಳ, ವೀಣಾ ಸಂಕನಗೌಡರ, ಡಾ. ಆನಂದ ಪಾಟೀಲ, ಪ್ರೊ.ಮಹೇಶ ತಿಪಶೆಟ್ಟಿ, ಡಾ.ಆರ್.ಬಿ. ಬಸವರಡ್ಡಿ, ಸಿ.ಯು.ಬೆಳ್ಳಕ್ಕಿ, ಕೊಟಬಾಗಿ, ಡಾ.ನಿಜಲಿಂಗಪ್ಪ ಮಟ್ಟಿಹಾಳ, ಮಲ್ಲಿಕಾರ್ಜುನ ಹಿರೇಮಠ, ಅನ್ಬನ್, ಮಹಾಂತೇಶ ನರೇಗಲ್, ಪಾರ್ವತಿ ಹಾಲಭಾವಿ ಸೇರಿದಂತೆ ಮುಂತಾದವರಿದ್ದರು.