ಬಸವೇಶ್ವರ ಜಯಂತಿ: ಪ್ರತಿಭಾ ಪುರಸ್ಕಾರ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.21:- ಜನಚೈತನ್ಯ ಫೌಂಡೇಶನ್ ಆಶ್ರಯದಲ್ಲಿ ಪುರಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಸವೇಶ್ವರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಜರುಗಿತು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ತಳವರ್ಗದ ಜನತೆಯ ಉತ್ತೇಜನಕ್ಕೆ ಪೆÇ್ರೀತ್ಸಾಹ ಮಾಡುವಂತಹ ಕಾರ್ಯಕ್ರಮಗಳನ್ನು ರೂಪಿಸುವುದು ಮಹತ್ತರವಾದ ಕೆಲಸ. ಪೌರಕಾರ್ಮಿಕರ ಮಕ್ಕಳು ಒಂದು ರೀತಿಯಲ್ಲಿ ಬೆಂಕಿಯಲ್ಲಿ ಅರಳಿದ ಹೂವುಗಳು. ಏಕೆಂದರೆ ಪೆÇೀಷಕರು ಕಾಯಕದಲ್ಲಿ ತಲ್ಲೀನರಾಗಿದ್ದರೂ ಶಿಕ್ಷಣ ಪಡೆದು ಇಂದು ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ಅಂಬೇಡ್ಕರ್ ಪಟ್ಟಂತಹ ಕಷ್ಟಗಳನ್ನು ಇವತ್ತಿನ ಮಕ್ಕಳು ಪಡುತ್ತಿಲ್ಲ. ಹೀಗಾಗಿ ಅವರು ತಳವರ್ಗದ ಜನತೆಯ ಉದ್ಧಾರಕ್ಕಾಗಿ ಅಂಬೇಡ್ಕರ್ ಅವರು ಹಕ್ಕುಗಳು, ಅವಕಾಶಗಳನ್ನು ಕಲ್ಪಿಸಿದ್ದಾರೆ.
ಆ ನಿಟ್ಟಿನಲ್ಲಿ ಒಳ್ಳೆಯ ಗುರಿಗಳನ್ನು ಇಟ್ಟುಕೊಂಡು ನಡೆಯಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮನುಷ್ಯನಿಗೆ ಹಲವಾರು ಕೆಟ್ಟ ಮತ್ತು ಒಳ್ಳೆಯ ಆಲೋಚನೆಗಳು ಬರುತ್ತವೆ. ಆದರೆ, ಒಳ್ಳೆಯ ಆಲೋಚನೆಗಳು ನಮ್ಮನ್ನು ಸಮಾಜದ ಎತ್ತರ ಸ್ಥಾನಕ್ಕೆ ಕೊಂಡೊಯ್ಯುತ್ತವೆ. ಯಾರು ನೋವು ಮತ್ತು ಬೆಂಕಿಯಲ್ಲಿ ಬೇಯುತ್ತಾರೆ ಅವರು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಾರೆ. ವಿದ್ಯಾಭ್ಯಾಸದ ಸಾಧನೆ ಜತೆಗೆ ಮಾನವೀಯತೆ ಅಳವಡಿಸಿಕೊಂಡು ಸಾಗಿದಾಗ ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತೀರಿ ಎಂದು ಪ್ರತಿಭಾ ಪುರಸ್ಕೃತರಿಗೆ ತಿಳಿಸಿದರು.
ರಂಗಕರ್ಮಿ ಜನಾರ್ಧನ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮದ ನಡುವೆ ಮಹಾನ್ ಚೇತನಗಳಾದ ಬುದ್ಧ ಬಸವ ಅಂಬೇಡ್ಕರ್ ಅವರನ್ನು ನೆನೆಯುವ ಕೆಲಸ ಶ್ಲಾಘನೀಯವಾದದ್ದು. ಮಾನವೀಯ ಮೌಲ್ಯಗಳನ್ನು ಬಿತ್ತಿದ ಮಹನೀಯರ ಹಾದಿಯಲ್ಲಿ ನಡೆಯಬೇಕಿದೆ.
ಇವತ್ತಿನ ಮಕ್ಕಳು ಬುದ್ಧ ಬಸವ ಅಂಬೇಡ್ಕರ್ ತತ್ವಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಬಹುಸಂಸ್ಕೃತಿಯ ಭಾರತದಲ್ಲಿ ಮನು ಸಂಸ್ಕೃತಿ ಹರಡುವ ಹುನ್ನಾರ ನಡೆಯುತ್ತಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ಸಂವಿಧಾನ ನೀಡಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಜಾಗೃತರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಂತಕ ಪೆÇ್ರ.ಗೋವಿಂದಯ್ಯ, ಮಾಜಿ ಮೇಯರ್ ನಾರಾಯಣ್, ಫೌಂಡೇಶನ್ ಅಧ್ಯಕ್ಷ ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.