ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಎನ್ ಡಿ ಎ ಮೈತ್ರಿ ಯಿಂದ ಬಿರುಸಿನ ಪ್ರಚಾರ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.21:- ಕರ್ನಾಟಕ ವಿಧಾನ ಪರಿಷತ್ ಚುನಾವಣೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿಯಾಗಿರುವ ಕೆ ವಿವೇಕಾನಂದರವರು ನಗರದ ಮಹಾರಾಣಿ ಕಾಲೇಜು, ಮಹಾರಾಜ, ಯುವರಾಜ, ಡಿ.ಬನುಮಯ್ಯ, ವಿದ್ಯಾವರ್ಧಕ, ಸೋಮಾನಿ ಬಾಸುದೇವ್ ಕಾಲೇಜು ಸೇರಿದಂತೆ ಇನ್ನಿತರ ಕಾಲೇಜುಗಳಿಗೆ ಭೇಟಿ ನೀಡಿ ಕಾಲೇಜಿನ ಅಧ್ಯಾಪಕರು ಹಾಗೂ ಶಿಕ್ಷಕರಲ್ಲಿ ನನಗೆ ಮೊದಲ ಪ್ರಾಶಸ್ತ್ರ್ಯ ಮತ ನೀಡುವ ಮೂಲಕ ಹೆಚ್ಚಿನ ಮತಗಳಿಂದ ಜಯಗಳಿಸಿಕೊಡಬೇಕೆಂದು ಮನವಿ ಮಾಡಿದರು.
ಬಳಿಕ ಮಾತನಾಡಿದ ಅಭ್ಯರ್ಥಿ ವಿವೇಕಾನಂದ ರವರು ಶಿಕ್ಷಕರ ಕುಂದುಕೊರತೆಗಳನ್ನ ಆಲಿಸಿ ಮಹತ್ತರವಾದ ಬದಲಾವಣೆ ತರಲು ಶಿಕ್ಷಕರ ಪ್ರತಿನಿಧಿಯಾಗಿ ಸರ್ಕಾರದ ಮಟ್ಟದಲ್ಲಿ ಧ್ವನಿಯೆತ್ತಲು ಸಿದ್ದನಿದ್ದೇನೆ, ಸರ್ಕಾರದಿಂದ ಶಿಕ್ಷಕರಿಗೆ ಸಿಗಬೇಕಾದ ಮಾನ್ಯತೆಗಳು ಬೇಡಿಕೆಗಳನ್ನ ನಿವಾರಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತೇನೆ, ಎನ್.ಡಿ.ಎ ಮೈತ್ರಿ ಬೆಂಬಲಿತ ಅಭ್ಯರ್ಥಿಯಾಗಿರುವ ನನಗೆ ಈಗಾಗಲೇ ಹಲವಾರು ಶಾಲಾ ಕಾಲೇಜು ಶಿಕ್ಷಕರ ಒಕ್ಕೂಟ ಸಂಘಗಳು ಕರೆ ಮಾಡಿ ಬೆಂಬಲ ವ್ಯಕ್ತಪಡಿಸುತ್ತಿದ್ದು, ಶಿಕ್ಷಕರ ಬಳಿ ಮತಯಾಚನೆಗೆ ತೆರಳಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಕೃಷ್ಣಕುಮಾರ್, ಬಾಲಸುಬ್ರಮಣ್ಯ, ಪ್ರದೀಪ್ ಕುಮಾರ್, ನಟರಾಜ್, ಹಾಗೂ ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷರಾದ ಹೇಮಾ ನಂದೀಶ್ ಹಾಗೂ ಇನ್ನಿತರ ಶಿಕ್ಷಕರು ಮತಯಾಚನೆಯಲ್ಲಿ ಭಾಗಿಯಾಗಿದ್ದರು