ಮುನೇಶ್ವರ ದೇವಾಲಯದಲ್ಲಿ ಅನ್ನದಾಸೋಹ
ಮಾಲೂರು ಮೇ೨೧: ತಾಲೂಕಿನ ಲಕ್ಕೂರು ಹೋಬಳಿಯ ಇಂದುಮಂಗಲ ಗ್ರಾಮದಲ್ಲಿ ಶ್ರೀ ಮುನೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನೆ ಕಾರ್ಯಕ್ರಮ ವಿವಿಧ ಪೂಜಾ ಕೈಕರೆಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನದಾನೋತ್ಸವ ಏರ್ಪಡಿಸಲಾಗಿತ್ತು.
ತಾಲೂಕಿನ ಇಂದುಮಂಗಲ ಗ್ರಾಮದ ಬಳಿ ಶ್ರೀ ಮುನೇಶ್ವರಸ್ವಾಮಿ ಪ್ರತಿಷ್ಠಾಪನೆ ಕಾರ್ಯಕ್ರಮ ವಿವಿಧ ರೀತಿಯ ಪೂಜಾ ಕೈಕಾರಿಗಳೊಂದಿಗೆ ಪ್ರಾರಂಭವಾಗಿ ಶ್ರೀ ಮುನೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಹಾಗೂ ಮುನೇಶ್ವರ ಸ್ವಾಮಿಯ ದೇವರ ಪ್ರತಿಷ್ಠಾಪನೆ ಕಾರ್ಯ ನಡೆಯಿತು
ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತಾದಿಗಳು ಮುನೇಶ್ವರ ಸ್ವಾಮಿಯ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು ಅನ್ನದಾನೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ನಾರಾಯಣಪ್ಪ, ಈರಪ್ಪ, ಸೊಣ್ಣಳ್ಳೆಪ್ಪ, ಕೃಷ್ಣಪ್ಪ, ರಾಮಾಂಜಿ, ಅಂಬರೀಶ್, ಮಾದೇಶ, ಗ್ರಾಮಸ್ಥರಾದ ನಾಗರಾಜ್, ನಾರಾಯಣಪ್ಪ, ನಾರಾಯಣಸ್ವಾಮಿ, ಇನ್ನಿತರರು ಪ್ರತಿಷ್ಟಪಾನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.