ನಿವೃತ್ತ ಶಿಕ್ಷಕ ರಾಜೇಂದ್ರರವರಿಂದ ಬಾಲಕನ ಚಿಕಿತ್ಸೆಗೆ ನೆರವು
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.21- ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಾಲಕನಿಗೆ ಚಿಕಿತ್ಸೆಗೆ ನೆರವಾಗುವುದರ ಮೂಲಕ ನಿವೃತ್ತ ಶಿಕ್ಷಕರೊಬ್ಬರು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ವಿಶಿಷ್ಠವಾಗಿ ಆಚರಿಸಿಕೊಂಡಿದ್ದಾರೆ.
ಹೌದು, ನಂಜನಗೂಡುತಾಲ್ಲೂಕು, ಕೂಗಲೂರುಗ್ರಾಮದ ಹಿಂದುಳಿದ ವರ್ಗದ ಬಡಕುಟುಂಬದ ಮಲ್ಲನಾಯಕ ಮತ್ತುರಾಜಮ್ಮ ದಂಪತಿಗಳ ಮಗ ಸಚಿದಾನಂದ ಕೇವಲ 14 ನೇ ವಯಸ್ಸಿಗೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಇದಕ್ಕಾಗಿ ವಾರಕ್ಕೆ ಮೂರುದಿನಗಳ ಕಾಲ ಡಯಾಲಿಸಿಸ್‍ಗೆ ಒಳಪಡುತ್ತಿದ್ದನು. ಬಾಲಕನ ಚಿಕಿತ್ಸೆಗೆಅವರತಂದೆ ತಾಯಿಗಳು ತುಂಬಾತೊಂದರೆ ಪಡುತ್ತಿದ್ದಾರೆ. ಈ ಬಗ್ಗೆ ಬಾಲಕನ ಚಿಕಿತ್ಸೆಗೆ ನೆರವಾಗುವಂತೆ ಕೆಲವರು ವಾಟ್ಸ್‍ಪ್ ಗ್ರೂಪ್‍ಗಳಲ್ಲಿ ಹಾಕಿದ್ದರು. ಇದನ್ನು ಗಮನಿಸಿದ ನಿವೃತ್ತಮುಖ್ಯಶಿಕ್ಷಕ ವಿ. ರಾಜೇಂದ್ರ ಹೆಬ್ಬಸೂರು ದಂಪತಿಗಳು ಬಾಲಕನ ಚಿಕಿತ್ಸೆಗೆ ನೆರವಾಗಲು ಮುಂದೆ ಬಂದು, ತಮ್ಮ ಸಹೋದ್ಯೋಗಿವಿ. ಅನ್ನಪೂರ್ಣರವರೊಡನೆ ಸೇರಿ ಬಾಲಕನ ಚಿಕಿತ್ಸೆಗೆ 10 ಸಾವಿರ ರೂ.ಗಳ ಧನ ಸಹಾಯ ನೀಡುವ ಮೂಲಕ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ವಿಶಿಷ್ಠವಾಗಿ ಆಚರಿಸಿಕೊಂಡು ಸಂತಸ ಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದವಿ.ರಾಜೇಂದ್ರ ಹೆಬ್ಬಸೂರುರವರು ನಾವು ಪ್ರತಿ ವರ್ಷ ವಿವಾಹ ವಾರ್ಷಿಕೋತ್ಸವದ ದಿನ ಬಡ ಮಕ್ಕಳಿಗೆ ಪುಸ್ತಕ, ಪೆನ್ನುಗಳನ್ನು ನೀಡುವುದು ಹಾಗೂ ವಿಶೇಷ ಚೇತನ ಮಕ್ಕಳಿಗೆ ನೆರವಾಗುವುದು ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದೆವು. ಈ ಬಾರಿ ನಾವು ಮೊಬೈಲ್‍ನ ವಾಟ್ಸಪ್‍ಗ್ರೂಪ್‍ನಲ್ಲಿ ಬಾಲಕನ ಚಿಕಿತ್ಸೆಗೆ ನೆರವಾಗುವಂತೆ ಪೋಸ್ಟ್‍ಗಳನ್ನು ನೋಡಿದಾಗ ನಾವು ಕೂಡಲೇ ಬಾಲಕನ ಪೋಷಕರನ್ನು ಸಂಪರ್ಕಿಸಿಚಿಕಿತ್ಸೆಗೆ ನೆರವಾಗುವುದಾಗಿ ತಿಳಿಸಿ ನಮ್ಮ ಸಹೋದ್ಯೋಗಿ ವಿ. ಅನ್ನಪೂರ್ಣರವರು ಸಹಯೋಗದೊಂದಿಗೆ ಬಾಲಕನ ಚಿಕಿತ್ಸೆಗೆ 10 ಸಾವಿರರೂ. ಸಹಾಯಧನ ನೀಡಲಾಯಿತುಎಂದು ತಿಳಿಸಿದರು. ಹಾಗೂ ಬಾಲಕನು ಶೀಘ್ರ ಗುಣಮುಖನಾಗಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಬಾಲಕನ ಪೋಷಕರು ಹಾಗೂ ಟಿ.ಎಸ್. ನಾಗಿನಿರವರುಇದ್ದರು.