ಪ್ರಾಚೀನ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆ: ಡಾ. ಮಲ್ಲಿಕಾರ್ಜುನ ಮೇತ್ರಿ
ಸಂಜೆವಾಣಿ ವಾರ್ತೆ,
ವಿಜಯಪುರ, ಮೇ.21: ಯುವ ಜನರು ನಮ್ಮ ಹಿಂದಿನ ಗತಕಾಲದ ವೈಭವವನ್ನು ಅರಿಯುವ ದೃಷ್ಟಿಕೋನ ಹೊಂದಿರಬೇಕು, ಪ್ರಾಚೀನ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದು ಸಿಕ್ಯಾಬ್ ಎಆರ್‍ಎಸ್‍ಐ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ ಮೇತ್ರಿ ಹೇಳಿದರು.
ಭಾರತೀಯ ಪುರಾತತ್ವ ಸರ್ವೇಕ್ಷಣ, ಧಾರವಾಡ ವಲಯದ ವತಿಯಿಂದ ಗೋಳಗುಮ್ಮಟದ ಆವರಣದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಇತ್ತೀಚೆಗೆÉ ಹಮ್ಮಿಕೊಂಡ ‘ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರu’Éಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲಾರ ಎಂಬ ಮಾತಿದೆ. ಅದರಂತೆ ತಮ್ಮ ಊರಿನಲ್ಲಿ ಮಹತ್ವಪೂರ್ಣ ದಾಖಲೆಗಳು ಹಾಳಾಗುತ್ತಿದ್ದರೆ, ಅವುಗಳನ್ನು ವಸ್ತು ಸಂಗ್ರಹಾಲಯದಲ್ಲಿ ತಂದು ಕೊಟ್ಟರೆ ತಮ್ಮ ಊರಿನ ವಿಳಾಸ, ತಂದು ಕೊಟ್ಟವರ ಹೆಸರು ಹಾಕುವುದರ ಜೊತೆಗೆ ಅದರ ಸಂರಕ್ಷಣೆಯನ್ನು ಜವಾಬ್ದಾರಿಯನ್ನು ಮಾಡುತ್ತಾರೆ. ಹೀಗಾಗಿ ಯಾವುದೇ ಐತಿಹಾಸಿಕ ಮಹತ್ವವುಳ್ಳ ಪ್ರಾಚ್ಯಾವೇಶಗಳನ್ನು ನಾಶವಾಗದಂತೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಸಹಾಯಕ ಪುರಾತತ್ವ ಅಧಿಕಾರಿ ಎನ್. ಪ್ರಸನ್ನಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತವು ಅನೇಕ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಅವುಗಳು ಮುಂದಿನ ಜನಾಂಗಕ್ಕೆ ಸ್ಪೂರ್ತಿದಾಯಕ ಚರಿತ್ರೆ, ಕಥೆಗಳು ಹೇಳುತ್ತವೆ. ಅವುಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು ಹಾಗೂ ನಮ್ಮ ಮುಂದಿನ ಜನಾಂಗದವರಿಗೆ ತಲುಪಿಸುವ ಕೆಲಸ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ವಿ.ಬಿ. ದರಬಾರ ಪಿ.ಯು. ಕಾಲೇಜಿನ ಇತಿಹಾಸ ವಿಭಾಗದ ಅನಿಲ್‍ಕುಮಾರ್ ಥೊಬ್ಬಿ ಮಾತನಾಡಿ, ವಸ್ತು ಸಂಗ್ರಹಾಲಯಗಳು ಜನಸಾಮಾನ್ಯರಲ್ಲಿ ನಮ್ಮ ಸಾಂಸ್ಕೃತಿಕ ಸಂಪತ್ತಿನ ಅರಿವನ್ನು ಮೂಡಿಸುವಲ್ಲಿ ಬಹು ಮಹತ್ವವಾದ ಕೆಲಸವನ್ನು ಮಾಡುತ್ತವೆ ಎಂದು ಹೇಳಿದರು.
ಅಂತರರಾಷ್ಟೀಯ ವಸ್ತು ಸಂಗ್ರಹಾಲಯದ ದಿನಾಚರಣೆಯ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸ, ಪ್ರಬಂಧ ಸ್ಪರ್ಧೆ, ಚಿತ್ರಕಲೆ (ಡ್ರಾಯಿಂಗ್) ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಎಲ್ಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಬಹುಮಾನ ಮತ್ತು ಇಲಾಖೆಯ ಸರ್ಟಿಫೀಕೆಟ್ ವಿತರಿಸಲಾಯಿತು.
ಆರ್.ಎಂ. ಕರ್ಜಗಿ, ವಿಷ್ಣುತ್ ಗೌಡ, ಗಾರ್ಡನ್ ಸಿಬ್ಬಂದಿವರ್ಗ, ಪ್ರವಾಸಿಮಿತ್ರರು, ವಿ.ಬಿ. ದರಾಬಾರ ಹೈಸ್ಕೂಲ್‍ನ, ಬಿ.ಸಿ.ಎಂ. ವಿದ್ಯಾರ್ಥಿನಿಯರ ವಸತಿಗೃಹದ ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಉಪನ್ಯಾಸಕರು ಭಾಗವಹಿಸಿದ್ದರು.