ಗಾಣಿಗರು ಸತ್ಯ, ಧರ್ಮ, ಕರ್ತವ್ಯನಿಷ್ಠೆಗೆ ಹೆಸರಾದವರು : ಮಾಜಿ ಶಾಸಕ ಜಿ.ಎಸ್.ನ್ಯಾಮಗೌಡ
ಸಂಜೆವಾಣಿ ವಾರ್ತೆ
ವಿಜಯಪುರ,ಮೇ.21 : ನಮ್ಮ ಗಾಣಿಗ ಸಮಾಜದವರು ಆಡಳಿತ, ರಾಜಕಾರಣ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿದ್ದರೂ ಅವರು ಸತ್ಯ, ಧರ್ಮಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿ, ಭ್ರಷ್ಟಾಚಾರದಿಂದ ದೂರವಿದ್ದು ಕರ್ತವ್ಯನಿಷ್ಠೆಗೆ ಹೆಸರಾದವರು ಎಂದು ಹಿರಿಯ ಮಾಜಿ ಶಾಸಕ ಜಿ.ಎಸ್. ನ್ಯಾಮಗೌಡ ಅಭಿಮತ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲಾ ಗಾಣಿಗ ಸಮಾಜ ಸಂಘದಿಂದ ನಗರದ ವನಶ್ರೀ ಮಠದ ಸಭಾಗಂಣದಲ್ಲಿ ಆಯೋಜಿಸಿದ್ದ ಗುರುವಂದನಾ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ನಮ್ಮ ಗಾಣಿಗ ಸಮಾಜ ಮಹಾನ್ ಸತ್ಪುರುಷರನ್ನು, ಸಾಧಕರನ್ನು ನಾಡಿಗೆ ಕೊಡುಗೆಯಾಗಿ ಕೊಟ್ಟಿದೆ. ಇಂತಹ ಸಮಾಜದಲ್ಲಿ ಜನಿಸಿ ಇಂದು ಯುಪಿಎಸ್ಸಿ ಪರೀಕ್ಷೆಯಲ್ಲಿ ಯಾರ್ಂಕ್ ಪಡೆದ ಸಂತೋಷ ಶಿರಾಡೋಣ ಹಾಗೂ ಎಸ ಎಸ್ ಎಲ್ ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಯಾರ್ಂಕ್ ಪಡೆದ ಅಂಕಿತ ಕೊಣ್ಣೂರು ಸಮಾಜದ ಹೆಮ್ಮೆಯ ಮಕ್ಕಳು. ದೇಶದಲ್ಲಿ ನ್ಯಾಯಾಂಗ ಗಟ್ಟಿಯಾಗಿರುವ ಕಾರಣ ಪ್ರಜಾಪ್ರಭುತ್ವ ವ್ಯವಸ್ಥೆ ಸುಸ್ಥಿತಿಯಲ್ಲಿದೆ. ರಾಜಕಾರಣದಲ್ಲಿ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ, ಹೋಗುತ್ತವೆ. ರಾಜಕೀಯದಲ್ಲಿ ಏರಿಳಿತಗಳು, ಬದಲಾವಣೆಗಳು ಸಹಜ. ಆದರೆ ಸಂತೋಷ ಶಿರಾಡೋಣ ಅವರು ಇದ್ಯಾವುದಕ್ಕೂ ಲಕ್ಷ್ಯ ಕೊಡದೇ ಕಾಯಾರ್ಂಗದ ಒಂದು ಭಾಗವಾಗಿ ಕಾನೂನು ಕಾರ್ಯಗತ ಮಾಡುವ ನಿಟ್ಟಿನಲ್ಲಿ ಕರ್ತವ್ಯನಿಷ್ಠರಾಗಿ ಗಟ್ಟಿತನದಿಂದ ಕೆಲಸ ಮಾಡಿ ದಕ್ಷ ಅಧಿಕಾರಿಯಾಗಿ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು.
ಇನ್ನು ಸರ್ಕಾರಿ ಶಾಲೆಯಲ್ಲಿ ಓದಿ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಯಾರ್ಂಕ್ ಪಡೆದ ಅಂಕಿತ ಕೊಣ್ಣೂರ ಐಎಎಸ್ ಅಧಿಕಾರಿಯಾಗಬೇಕೆಂಬ ಗುರಿ ಸಾಕಾರಗೊಳಿಸುವಲ್ಲಿ ಆಕೆಯೊಂದಿಗೆ ಸಮಾಜ ಎಂದಿಗೂ ಶಕ್ತಿಯಾಗಿ ನಿಲ್ಲಲಿದ್ದು, ಅವರು ಯಶಸ್ಸಿಯಾಗುತ್ತಾರೆಂಬ ವಿಶ್ವಾಸವಿದೆ. ಮಲ್ಲಿಕಾರ್ಜುನ ಲೋಣಿಯವರು ರಾಜ್ಯಾದ್ಯಂತ ಗಾಣಿಗ ಸಮಾಜದ ಒಳಪಂಗಡಗಳನ್ನು ಒಗ್ಗೂಡಿಸಿ ಸಮಾಜ ಕಟ್ಟಿ ಎಂಎಲ್ಸಿ ಚುನಾವಣೆಯಲ್ಲಿ ತಮ್ಮ ಸಾಮಥ್ರ್ಯ ತೋರಿಸಿದ್ದಾರೆ. ಸಮಾಜ ಹಾಗೂ ಅವರ ಸಾಮಥ್ರ್ಯ ಗುರುತಿಸಿ ಕಾಂಗ್ರೆಸ್ ಪಕ್ಷ ಅವರಿಗೆ ಜಿಲ್ಲಾಧ್ಯಕ್ಷ ಜವಾಬ್ದಾರಿ ನೀಡಿದ್ದು, ಪಕ್ಷಕ್ಕೆ ಅವರಿಂದ ಅನುಕೂಲವಾಗಿ ಅವರು ಅತ್ಯುನ್ನತ್ತ ಸ್ಥಾನಮಾನಗಳನ್ನು ಅಲಂಕರಿಸಲಿ ಎಂದು ಮಾಜಿ ಶಾಸಕ ಜಿ.ಎಸ್.ನ್ಯಾಮಗೌಡ ಶುಭಕೋರಿದರು.
ಹಿರಿಯ ಮಾಜಿ ಎಂಎಲ್ಸಿ ಬಿ.ಜಿ.ಪಾಟೀಲ ಹಲಸಂಗಿ ಅವರು ಮಾತನಾಡಿ, ಜಯದೇವ ಜಗದ್ಗುರುಗಳು ಜೋಳಿಗೆ ಇಲ್ಲದ ಜಂಗಮನಾಗಿ ದುಡಿಮೆ ಮೂಲಕ ವನಶ್ರೀಮಠ ಕಟ್ಟಿ ಸಮಾಜಕ್ಕೆ ಹತ್ತಾರು ಕೋಟಿಯಷ್ಟು ಆಸ್ತಿ ಕೊಟ್ಟು ಹೋದ ಪುಣ್ಯಾತ್ಮ. ಶೀಘ್ರದಲ್ಲೇ ಅವರ ಗದ್ದುಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದರು. ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರ ಪುತ್ರ ಚಿದಾನಂದ ಸವದಿಯವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಾಧಕರಾದ ಸಂತೋಷ ಶಿರಡೋಣ, ಸಹೋದರಿ ಅಂಕಿತ ಕೊಣ್ಣೂರು ತಮ್ಮ ಸಾಧನೆಗಳ ಮೂಲಕ ಇಡೀ ಯುವ ಸಮುದಾಯಕ್ಕೆ ದೊಡ್ಡ ಪ್ರೇರಣೆಯಾಗಿದ್ದಾರೆ. ಅಂಕಿತ ಕೊಣ್ಣೂರು ಅವರ ಭವಿಷ್ಯದ ಶಿಕ್ಷಣಕ್ಕಾಗಿ ನಮ್ಮ ತಂದೆಯವರು ಒಂದು ಲಕ್ಷ ಪೆÇ್ರೀತ್ಸಾಹಧನ ನೀಡಿದ್ದಾರೆ. ಅಂಕಿತ ಅವರು ಕನಸಿನಂತೆ ಐಎಎಸ್ ಅಧಿಕಾರಿಯಾಗಿ ಬಂದು ಇದೇ ವೇದಿಕೆಯಲ್ಲಿ ಮತ್ತೊಮ್ಮೆ ಸನ್ಮಾನಿತರಾಗಲಿ, ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ಪೆÇ್ರೀತ್ಸಾಹ ಮಾತುಗಳನ್ನು ಆಡಿದರು.
ವನಶ್ರೀ ಗಾಣಿಗ ಗುರುಪೀಠದ ಡಾ.ಜಯಬಸವ ಕುಮಾರ ಜಗದ್ಗುರುಗಳು ಸಮಾಜದಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿ, ಸಾಧಕರು ಬಸವಣ್ಣ, ಕುವೆಂಪು, ಸಿದ್ದೇಶ್ವರ ಅಪ್ಪರವರ ಸಾಮರಸ್ಯ, ಸರಳತೆ ತತ್ವಗಳಂತೆ ಬೆಳೆಯಬೇಕು. ಸಂಘಟನೆ ಸಂಸ್ಕಾರವನ್ನು ಕಲಿಸುತ್ತದೆ. ಜಾತಿ ಹೆಸರಲ್ಲಿ ಒಗ್ಗೂಡಿದರೂ ಅಲ್ಲಿ ಜಾತಿಗಿಂತ ನೀತಿ ಮುಖ್ಯವಾಗಬೇಕು. ಪ್ರಯತ್ನಶೀಲರಿಗೆ, ನಿಸ್ವಾರ್ಥಿಗಳಿಗೆ ಎಂದಿಗೂ ಸೋಲಿಲ್ಲ ಎಂದು ಆಶೀರ್ವಚನ ನೀಡಿದರು. ಉಪನ್ಯಾಸಕ ಮಲ್ಲಿಕಾರ್ಜುನ ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸನ್ಮಾನಿತ ಸಾಧಕರು ಹಾಗೂ ಅವರ ಸಾಧನೆ ಕುರಿತು ಪರಿಚಯ ಮಾಡಿಕೊಟ್ಟರು. ಜಮಖಂಡಿಯ ಸಿದ್ದಮುತ್ಯಾ ಅವರು ಸಾನ್ನಿಧ್ಯ ನುಡಿಗಳಾಡಿದರು.
ಇದೇ ವೇಳೆ ಸಾಧಕರಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಯುಪಿಎಸ್ಸಿ ಸಾಧಕ ಸಂತೋಷ ಶಿರಡೋಣ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಯಾರ್ಂಕ್ ಪಡೆದ ಅಂಕಿತ ಕೊಣ್ಣೂರ ಅವರು ಸನ್ಮಾನ ಸ್ವೀಕರಿಸಿ ಪ್ರೇರಣಾತ್ಮಕ ಮಾತುಗಳನ್ನು ಆಡಿದರು. ಎಸ್ಸೆಸ್ಸೆಲ್ಸಿ ಟಾಪರ್ ಅಂಕಿತ ಕೊಣ್ಣೂರು ಅವರಿಗೆ ಜಿಲ್ಲಾ ಗಾಣಿಗ ಸಂಘದಿಂದ 1 ಲಕ್ಷದ 11 ಸಾವಿರ ರೂಪಾಯಿ ಪೆÇ್ರೀತ್ಸಾಹ ಧನದ ಚೆಕ್ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರೂಗಿ ಮುಕ್ತಿಮಂದಿರ ಸುಗಲಮ್ಮತಾಯಿ ಅಮ್ಮನವರು ಸಾನ್ನಿಧ್ಯವಿದ್ದರು. ಮಾಜಿ ಶಾಸಕ ರಮೇಶ ಭೂಸನೂರ, ಜಿ.ಪಂ ಮಾಜಿ ಅಧ್ಯಕ್ಷರುಗಳಾದ ಶಿವಯೋಗಪ್ಪ ನೇದಲಗಿ, ಸೋಮನಾಥ ಬಾಗಲಕೋಟೆ, ಜಿಲ್ಲಾ ಗಾಣಿಗ ಸಂಘದ ಮಾಜಿ ಜಿಲ್ಲಾಧ್ಯಕ್ಷ ಶರಣಬಸಪ್ಪ ಅರಕೇರಿ, ಗೌರವಾಧ್ಯಕ್ಷ ಬಿ.ಎಂ.ಪಾಟೀಲ್ ಕತ್ನಳ್ಳಿ, ಜಿಲ್ಲಾಧ್ಯಕ್ಷ ಬಿ.ಬಿ.ಪಾಸೋಡಿ, ಪ್ರಧಾನ ಕಾರ್ಯದರ್ಶಿ ಡಾ.ಬಾಬು ಸಜ್ಜನ ಸೇರಿದಂತೆ ಜಿಲ್ಲೆ ಹಾಗೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳು, ಶಿವಯೋಗಿ ಟ್ರಸ್ಟ್ ಸದಸ್ಯರು ಹಾಗೂ ಸಮಾಜದ ಅನೇಕ ಗಣ್ಯರು, ಗುರುಹಿರಿಯರು ಉಪಸ್ಥಿತರಿದ್ದರು.