ಶ್ವೇತಾ ಪಾಟೀಲಗೆ ವಿ.ಟಿ.ಯು. ಡಾಕ್ಟರೇಟ್
ಸಂಜೆವಾಣಿ ವಾರ್ತೆ,
ವಿಜಯಪುರ, ಮೇ.21:ಜಿಲ್ಲೆಯ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸಹ ಪ್ರಾಧ್ಯಾಪಕಿಯಾಗಿ ಸೇವೆಯಲ್ಲಿರುವ ಶ್ವೇತಾ ರವಿರಾಜ್ ಪಾಟೀಲ (ನೀರಲಗಿ) ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪ್ರದಾನ ಮಾಡಿದೆ.
ಕಲಬುರಗಿಯ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕ ಡಾ. ಶ್ರೀದೇವಿ ಸೋಮ ಅವರ ಮಾರ್ಗದರ್ಶನದಲ್ಲಿ ‘ಎ ಮಷಿನ್ ಲನಿರ್ಂಗ್ ಸಿಸ್ಟ್ಮ್ ಫಾರ್ ಡಿಟೆಕ್ಷನ್ ಆಂಡ್ ಗ್ರೇಡಿಂಗ್ ಆಫ್ ಡಯಾಬಿಟಿಕ್ ಮ್ಯಾಕುಲೋಪತಿ ಇನ್ ರೆಟಿನಲ್ ಒ.ಸಿ.ಟಿ. ಇಮೆಜಸ್’ ಪ್ರೌಢ ಪ್ರಭಂದಕ್ಕೆ ವಿ.ಟಿ.ಯು ಪಿ.ಎಚ್.ಡಿ ಪ್ರದಾನ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.
ಡಾ. ಶ್ವೇತಾ ಪಾಟೀಲಗೆ ಅವರ ಶೈಕ್ಷಣಿಕ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತ ಮಂಡಳಿ, ಕಾಲೇಜಿನ ಪ್ರಾಚಾರ್ಯ ಡಾ.ವಿ.ಜಿ.ಸಂಗಮ, ವಿಭಾಗದ ಮುಖ್ಯಸ್ಥರು ಹಾಗೂ ಶಿಕ್ಷಕ ವರ್ಗದವರು ಶುಭ ಹಾರೈಸಿದ್ದಾರೆ.