ಅಂಜಲಿ ಹತ್ಯೆ ಖಂಡಿಸಿ ತಾಳಿಕೋಟೆಯಲ್ಲಿ ಬೃಹತ್ ಪ್ರತಿಭಟನೆ
ತಾಳಿಕೋಟೆ:ಮೇ.21: ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಯುವತಿಯ ಹತ್ಯಯನ್ನು ಖಂಡಿಸಿ ತಾಳಿಕೋಟೆ ತಾಲೂಕಾ ನಿಜಶರಣ ಅಂಬಿಗೇರ ಚೌಡಯ್ಯ ಸಮಾಜ ಕ್ಷೇಮಾಭಿವೃದ್ದಿ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಸೋಮವಾರರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತಲ್ಲದೇ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಸರ್ಕಾರದ ವಿರೂದ್ದ ಜನರು ಆಕ್ರೋಶವನ್ನು ಹೊರಹಾಕಿದರು.
ಪ್ರತಿಭಟನಾ ನೇತೃತ್ವ ವಹಿಸಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಮಾತನಾಡಿ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆ ಪ್ರಕರ್ಣ ಮಾಸುವ ಮುನ್ನವೇ ಮತ್ತೊಂದು ಪ್ರಕರ್ಣ ಅಂಜಲಿ ಅಂಬಿಗೇರ ಎಂಬ ಬಾಲಕಿಯನ್ನು ಹತ್ಯೆ ಮಾಡುವದರೊಂದಿಗೆ ಕ್ರೂರತನ ಮೆರೆದಿರುವದು ಅತ್ಯಂತ ಖಂಡಿಯವಾದಂತಹದ್ದಾಗಿದೆ ನಮ್ಮನಾಳುವ ಸರ್ಕಾರಗಳು ಕಾನೂನು ವಿರೂದ್ದವಾಗಿ ಕ್ರೂರವಾಗಿ ನಡೆದುಕೊಳ್ಳುವವರಿಗೆ ಕಠಿಣವಾದ ಶಿಕ್ಷೆ ಕೊಡಿಸುವಂತಹ ಕೆಲಸ ಮಾಡಬೇಕು ಗ್ರಹ ಸಚೀವರು ಮತ್ತು ಮುಖ್ಯಮಂತ್ರಿಗಳು ವೈಯಕ್ತಿಕ ಕಾರಣಗಳಿಂದ ಈ ಘಟನೆ ನಡೆದಿದೆ ಎಂದು ಹಾರಿಕೆ ಉತ್ತರಗಳನ್ನು ನೀಡಿರುವದು ಸರ್ಕಾರದ ಮೇಲೆ ಜನರ ವಿಸ್ವಾಸ ಕಳೆದುಕೊಳ್ಳುವಂತಾಗಿದೆ ಅಲ್ಲದೇ ಹಂತಕರಿಗೆ ಹಿಂಬಾಗಿಲಿನಿಂದ ಬೆಂಬಲವಾಗಿ ರಾಜ್ಯ ಸರ್ಕಾರ ನಿಲ್ಲುತ್ತಿದೆ ಎಂಬುದು ಎದ್ದು ಕಾಣುತ್ತಿದೆ ಅಂಜಲಿ ಅಂಬಿಗೇರ ಮತ್ತು ನೇಹಾ ಹಿರೇಮಠ ಅವರನ್ನು ಕಳೆದುಕೊಂಡ ಕುಟುಂಭಗಳು ಅತ್ಯಂತ ರೋಧನಾ ಸ್ಥಿತಿಯಲ್ಲಿ ಮುಳಗಿವೆ ಕರ್ನಾಟಕದ ಪೊಲೀಸ್‍ರು ಸಮರ್ಥರಾಗಿದ್ದಾರೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟರೆ ಇಂತಹ ಘಟನೆಗಳು ನಡೆಯುವದಿಲ್ಲಾ ಆದರೆ ಅವರ ಮೇಲೆ ಆಳುವ ಸರ್ಕಾರಗಳು ಒತ್ತಡ ಹೇರುವದರೊಂದಿಗೆ ಘಟನೆಗಳನ್ನು ಮರೆಮಾಚುವಂತಹ ಕೆಲಸ ನಡೆದಿರುವದು ಅತ್ಯಂತ ಖೇದನಿಯ ಸಂಗತಿಯಾಗಿದೆ ಕಾಂಗ್ರೇಸ್‍ನ ಕಾರ್ಪೂರೇಟ್ಟರ್ ಅವರೇ ಹೇಳುತ್ತಿದ್ದಾರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಕರ್ನಾಟಕಕ್ಕೂ ಯೋಗಿ ಅಂತಹ ಮುಖ್ಯಮಂತ್ರಿ ಬಂದರೆ ಎಲ್ಲವೂ ಸರಿಹೋಗಲಿದೆ ಎಂದು ಹೇಳಿದ್ದಾರೆಂದ ಅವರು ಕ್ರೈಂಬೀರೋದವರು ಸರ್ಕಾರಕ್ಕೆ ವರಧಿಯನ್ನು ನೀಡಿದ್ದಾರೆ ಕಳೆದ 4 ತಿಂಗಳಲ್ಲಿ ಶೇ.70 ರಷ್ಟು ಅಪರಾಧ ಪ್ರಕರ್ಣಗಳು ಕರ್ನಾಟಕದಲ್ಲಿ ಹೆಚ್ಚಾಗಿವೆ ಎಂದು ಹೇಳಿದ್ದಾರೆ ಇದರಿಂದ ಎಲ್ಲರಿಗೂ ಗೊತ್ತಾಗಲಿದೆ ರಾಜ್ಯದಲ್ಲಿಯ ಕಾನೂನು ಸುವ್ಯವಸ್ಥೆ ಯಾವ ಮಟ್ಟಿಗೆ ಕುಸಿದು ಹೋಗಿದೆ ಎಂಬುದು ಇಂತಹ ಘಟಕನೆಗಳು ಮರುಕಳಿಸಬಾರದೆಂದರೆ ಆರೋಪಿತರಿಗೆ ಕಠಿಣವಾದ ಗಲ್ಲು ಶಿಕ್ಷೆಯನ್ನು ವಿದಿಸಬೇಕು ಆರೋಪಿಯ ಕುಟುಂಭದ ಎಲ್ಲ ಆಸ್ತಿಯನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಳ್ಳಬೇಕು ಅಂದಾಗ ಅಪರಾದ ಕ್ರಮಗಳು ಕಡಿಮೆಯಾಗಲು ಸಾದ್ಯವಾಗುತ್ತದೆ ರಾಜ್ಯ ಸರ್ಕಾರವು ಕೂಡಲೇ ಅಂಜಲಿ ಅಂಬಿಗೇರ ಅವರ ಕುಟುಂಭಕ್ಕೆ 25 ಲಕ್ಷ ರೂ. ಪರಿಹಾರವನ್ನು ನೀಡಬೇಕು ಮತ್ತು ಅವರ ಕುಟುಂಭಕ್ಕೆ ಸಂಪೂರ್ಣ ಬದ್ರತೆಯನ್ನು ಒದಗಿಸಬೇಕೆಂದು ಒತ್ತಾಯಿಸಿದರು.
ಇನ್ನೋರ್ವ ಪ್ರತಿಭಟನಾ ಮೇರವಣಿಗೆಯ ನೇತೃತ್ವ ವಹಿಸಿದ ಗುಂಡಕನಾಳ ಹಿರೇಮಠ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಆಡಳಿತ ಮಾಡುವ ರಾಜ್ಯ ಸರ್ಕಾರದ ಬೇಜವಾಬ್ದಾರಿ ವರ್ತನೆಯಿಂದ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊಲೆ ಸುಲಿಗೆ ಅತ್ಯಾಚಾರ ಪ್ರಕರ್ಣಗಳು ಹೆಚ್ಚಾಗಲಿಕ್ಕೆ ಹತ್ತಿವೆ ನೇಹಾ ಹಿರೇಮಠ ವಿದ್ಯಾರ್ಥಿಯನ್ನು ಕಾಲೇಜ್ ಕ್ಯಾಂಪಸ್ಸಿನಲ್ಲಿ ಹಾಡು ಹಗಲೆ ಹತ್ಯೆ ಮಾಡಿದ ತಕ್ಷಣವೇ ಸರ್ಕಾರ ಎಚ್ಚೆತ್ತುಕೊಂಡು ಆರೋಪಿಗೆ ಕಠಿಣ ಶಿಕ್ಷೆಗೆ ಮುಂದಾಗಿದ್ದರೆ ಅಂಜಲಿ ಅಂಬಿಗೇರ ಹತ್ಯೆ ಪ್ರಕರ್ಣ ನಡೆಯುತ್ತಿದ್ದಿಲ್ಲಾ ಆದರೆ ರಾಜ್ಯ ಸರ್ಕಾರದ ಮಂತ್ರಿಗಳು ಕುಚೇಷ್ಠಿಗಳಿಗೆ ಇನ್ನಷ್ಟು ಪುಷ್ಠಿ ನೀಡುವ ಹಾಗೆ ಹೇಳಿಕೆಗಳನ್ನು ನೀಡಿ ಅವರ ರಕ್ಷಣೆಗೆ ಮುಂದಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವದು ಖಂಡನೀಯವಾಗಿದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಕೂಡಲೇ ನೇಹಾ ಹಿರೇಮಠ ಕೊಲೆ ಮಾಡಿದ ಆರೋಪಿಗೆ ಮತ್ತು ಅಂಜಲಿ ಅಂಬಿಗೇರ ಹತ್ಯೆ ಮಾಡಿದ ಆರೋಪಿಗೆ ಎನ್ ಕೌಂಟರ್ ಮಾಡಿ ಬಿಸಾಕಬೇಕು ಇಲ್ಲಾ ವಿಶೇಷ ಕಾನೂನಿನಡಿ ಗಲ್ಲು ಶಿಕ್ಷೆ ವಿದಿಸಿ ಇಂತಹ ಪ್ರಕರ್ಣಗಳು ಮರುಕಳಿಸದಂತೆ ಏಚ್ಚರಿಕೆ ವಹಿಸಬೇಕೆಂದು ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕಿನ ಎಲ್ಲ ಮಠಾಧೀಶರ ಒಕ್ಕೂಟದ ಪರವಾಗಿದೆ ಒತ್ತಾಯಿಸುತ್ತೇನೆಂದರು.
ಇನ್ನೋರ್ವ ತಾಳಿಕೋಟೆ ತಾಲೂಕಾ ನಿಜಶರಣ ಅಂಬಿಗೇರ ಚೌಡಯ್ಯ ಸಮಾಜ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಪರಶುರಾಮ ತಂಗಡಗಿ ಅವರು ಮಾತನಾಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಾ ಸಾಗಿದೆ ಅಪರಾದಿಗಳಿಗೆ ಯಾವುದೇ ಅಂಜಿಕೆ ಇಲ್ಲದಂತಾಗಿದೆ ಸರ್ಕಾರದ ಮಂತ್ರಿಗಳು ನೀಡಿದ ಹೇಳಿಕೆಗಳು ಅಪರಾಧಿಗಳಿಗೆ ಇನ್ನಷ್ಟು ಪುಷ್ಠಿ ನೀಡಿದಂತಾಗುತ್ತಿದ್ದು ಕೂಡಲೇ ಸರ್ಕಾರವು ಎಚ್ಚೆತ್ತುಕೊಂಡು ಅಂಜಲಿ ಅಂಬಿಗೇರ ಯುವತಿಯ ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ ವಿದಿಸಬೇಕು ಮಹಿಳೆಯರ ರಕ್ಷಣೆಗೆ ವಿಶೇಷ ಕಾನೂನನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಅಮರಣ್ಣ ಕಾಮನಕೇರಿ, ಕರವೇ ಸಂಘಟನೆಯ ಜೈಭೀಮ ಮುತ್ತಗಿ, ಶಿವರಾಜ ಗುಂಡಕನಾಳ, ಅವರು ಮಾತನಾಡಿದರು.
ಪ್ರತಿಭಟನಾ ಮೇರವಣಿಗೆಯು ಬಸವೇಶ್ವರ ವೃತ್ತದಿಂದ ಪ್ರಾರಂಭಗೊಂಡು ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್, ಕತ್ರಿ ಭಜಾರ, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತ, ಮಹಾರಾಣಾಪ್ರತಾಪಸಿಂಹ ಸರ್ಕಲ್, ಬಸ್ ನಿಲ್ದಾಣದ ಮುಂಬಾಗದ ರಸ್ತೆಗುಂಟಾ ಹಾಯ್ದು ಬಸವೇಶ್ವರ ಸರ್ಕಲ್‍ಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ಕೆಲ ಗಂಟೆಕಾಲ ರಸ್ತೆ ತಡೆ ನಡೆಸಲಾಯಿತು.
ಮನವಿ ಪತ್ರವನ್ನು ತಹಶಿಲ್ದಾರ ಶ್ರೀಮತಿ ಕೀರ್ತಿ ಚಾಲಕ ಅವರಿಗೆ ಪ್ರತಿಭಟನಾ ನಿರತರು ಸಲ್ಲಿಸಿದರು.
ಈ ಸಮಯದಲ್ಲಿ ಮುಖಂಡರುಗಳಾದ ಎಂ.ಎಚ್.ಜೂಲಿ, ಎನ್.ಎಸ್.ಬಳಿಗಾರ, ವಿಠ್ಠಲ ಮೋಹಿತೆ, ಎಂ.ಡಿ.ನಾಯ್ಕೋಡಿ, ಎಂ.ಎಸ್.ಮದ್ದರಕಿ, ಬಿ.ಎಲ್.ತಳವಾರ, ಚಂದ್ರು ಗೊರಗುಂಡಗಿ, ಆರ್.ಎಸ್.ಬೂದಿಹಾಳ, ರಾಜು ಸಜ್ಜನ, ರಾಘವೇಂದ್ರ ಮಾನೆ, ಮಾನಸಿಂಗ್ ಕೊಕಟನೂರ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಶ್ರೀಮತಿ ನೀಲಮ್ಮ ಪಾಟೀಲ, ಸಿದ್ದು ಯಾಳವಾರ, ರಾಘು ಬಾಕಲಿ, ಶಶಿ ಮೂಕೀಹಾಳ, ಸಿದ್ದಾರಾಮಪ್ಪ ಮದ್ದರಕಿ, ರವಿ ಯಳಮೇಲಿ, ಶರಣು ಕಲ್ಲೂರ, ಶರಣಪ್ಪ ಚಳ್ಳಗಿ, ರಾಘವೇಂದ್ರ ಬಿಜಾಪೂರ, ಶ್ರೀಮತಿ ಸುವರ್ಣಾ ಬಿರಾದಾರ, ರಾಘವೇಂದ್ರ ಚವ್ಹಾಣ, ಫಯಾಜ ಉತ್ನಾಳ, ಜೈಸಿಂಗ್ ಮೂಲಿಮನಿ, ಮುತ್ತು ಕಶೆಟ್ಟಿ, ಆರ್.ಎಲ್.ಕೊಪ್ಪದ, ಮಂಜು ಶೆಟ್ಟಿ, ಮುದಕಣ್ಣ ಬಡಿಗೇರ, ರವಿ ಕಟ್ಟಿಮನಿ, ಒಳಗೊಂಡು ಸಾವಿರಾರು ಜನರು ಪಾಲ್ಗೊಂಡಿದ್ದರು.