ಚಿಂಚೋಳಿ: ಮದ್ಯವರ್ಜನ ಶಿಬಿರದ ಸದುಪಯೋಗಕ್ಕೆ ಕರೆ
ಚಿಂಚೋಳಿ,ಮೇ.21- ಪಟ್ಟಣದ ಚಂದಾಪುರದ ಕೋಲಿ ಸಮಾಜದ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಅಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್ ವತಿಯಿಂದ ಜರುಗಿದ ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯನ್ನು ಉದ್ದೇಶ ಕಲಬುರಗಿ ಜಿಲ್ಲಾ ಕ್ಷೇತ್ರ ಧರ್ಮಸ್ಥಳ ಗ್ರಾಮಾಅಭಿವೃದ್ಧಿ ಯೋಜನೆ ನಿರ್ದೇಶಕರಾದ ಗಣಪತಿ ಮಾಳoಜೆ, ಅವರು ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ ಮಧ್ಯಪಾನ ಮಾಡುವ ಜನ ಸಂಖ್ಯೆ ಹೆಚ್ಚಾಗಿದ್ದು ಅದರಿಂದ ಧರ್ಮಸ್ಥಳದ ಸಂಸ್ಥೆಯಿಂದ ಮತ್ತು ಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಪ್ರತಿಯೊಂದು ತಾಲೂಕದಲ್ಲಿ ಮಧ್ಯಪಾನ ಮಾಡುವ ವ್ಯಕ್ತಿಗಳಿಗೆ ಮಧ್ಯಪಾನದಿಂದ ಮುಕ್ತಿಗೊಳಿಸಲು ಒಂದು ವಾರದ ಶೀಘ್ರವನ್ನು ಹಮ್ಮಿಕೊಂಡಿದ್ದು ಮಧ್ಯಪಾನ ಮಾಡುವುದನ್ನು ಬಿಡಿಸಲಾಗುತ್ತಿದ್ದು ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಒಂದು ಲಕ್ಷ 20,000 ಮಧ್ಯಪ್ರಿಯರು ಮಧ್ಯಪಾನ ಮಾಡುವುದನ್ನು ಬಿಟ್ಟಿದ್ದಾರೆ ಅದರಂತೆ ಚಿಂಚೋಳಿ ತಾಲೂಕನ್ನು ಅತಿ ಶ್ರೀಗಂಧದಲ್ಲೇ ಒಂದು ವಾರದ ಶಿಬಿರವನ್ನು ಹಮ್ಮಿಕೊಂಡು ಮಧ್ಯದ ಮಾಡುವುದನ್ನು ತಡೆಗಟ್ಟಲು ಈ ಶಿಬಿರದಲ್ಲಿ ಎಲ್ಲಾ ತರಹದ ಮಾಹಿತಿ ನೀಡಿ ಮಧ್ಯ ಮಾಡುವುದನ್ನು ಬಿಡಿಸಲಾಗುತ್ತಿತ್ತು ಮತ್ತು ಇದೇ ರೀತಿ ಧರ್ಮಸ್ಥಳದಲ್ಲಿ ಕೂಡ ಕಡುಬಡವರಿಗೆ ಅನಾಥರಿಗೆ ಧರ್ಮಸ್ಥಳದಿಂದ ಸಹಧನ ಕೂಡ ನೀಡಲಾಗುತ್ತಿದ್ದು ಹಾಗೂ ಚಿಂತೋಳಿ ತಾಲೂಕಿನಲ್ಲಿ ಅನೇಕ ಗ್ರಾಮದಲ್ಲಿ ಕಡು ಬಡವರು ದಿನನಿತ್ಯ ಕೆಲಸವನ್ನು ಮಾಡಿ ಬರ್ತಿರ್ತಕ್ಕಂತ ಕೂಲಿ ಹಣದಲ್ಲಿ ಮಧ್ಯವನ್ನು ಸೇವಿಸುವುದರಿಂದ ಬಡ ಕುಟುಂಬಗಳು ಉಪಜೀವನಕ್ಕೆ ಬಹಳಷ್ಟು ತೊಂದರೆ ಆಗುತ್ತಿದ್ದು ಬಡ ಕುಟುಂಬದ ಮಹಿಳೆಯರು ನಿತ್ಯ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿತು ಅದರಿಂದ ಧರ್ಮಸ್ಥಳದಿಂದ ಒಂದು ಬಾರದ ಸಿಬಿರವನ್ನು ಹಮ್ಮಿಕೊಂಡಿದ್ದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲ್ಬುರ್ಗಿ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ನರಸಮ್ಮ ಲಕ್ಷ್ಮಣ ಅವುಂಟಿ, ಚಿಂಚೋಳಿ ತಾಲೂಕ ಧರ್ಮಸ್ಥಳದ ಯೋಜನಾಧಿಕಾರಿಗಳಾದ ಗೋಪಾಲ, ಮುಖಂಡರಾದ ಕೆ ಎಂ ಬಾರಿ, ಭೀಮಶೆಟ್ಟಿ ಮುರುಡ, ಶ್ರೀಮಂತ ಕಟ್ಟಿಮನಿ, ಸಂತೋಷ್ ಗಡಂತಿ, ಪ್ರೇಮಸಿಂಗ್ ಜಾಧವ್, ರಾಜು ಪವಾರ್, ಲಕ್ಷ್ಮಣ ಅವುಂಟಿ, ಅನೀಲ್ ಜಮಾದಾರ್, ಹಣಮಂತ ಪೂಜಾರಿ, ದೌಲಪ್ಪ ಸೋಣಗಾರ್, ಖಲೀಲ್ ಪಟೇಲ್, ರಾಧಾಬಾಯ್ ಓಲಗಿರಿ, ಸುಲೋಚನ ಜಗನ್ನಾಥ್ ಕಟ್ಟಿ, ಶಿವಕುಮಾರ, ಮಲ್ಲಿಕಾರ್ಜುನ ಮಡಿವಾಳ, ನಾಗೇಶ ಗುಲಾಜಿ, ಜಗನ್ನಾಥ್ ಗುತ್ತೇದಾರ್, ಶಂಕರಜಿ ಹಿಪ್ಪರಗಿ, ಮತ್ತು ವಿವಿಧ ಪಕ್ಷದ ಮುಖಂಡರು ಹಾಗೂ ತಾಲೂಕಿನ ವಿವಿಧ ಗ್ರಾಮದ ಗ್ರಾಮಸ್ಥರು ಸಭೆಯಲ್ಲಿ ಭಾಗಿಯಾಗಿದ್ದರು