ಜೂ. 6 ರಂದು ಮತ ಎಣಿಕೆ: ಮತ ಎಣಿಕೆ ಕೇಂದ್ರದಲ್ಲಿಮೊಬೈಲ್ ಫೋನ್, ಬೆಂಕಿ ಪೊಟ್ಟಣ, ಲೈಟರ್ ನಿಷೇಧ
ಕಲಬುರಗಿ:ಮೇ.20:ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಮತ ಎಣಿಕೆಯು 2024ರ ಜೂನ್ 6 ರಂದು ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ಹೇಮರಡ್ಡಿ ಮಲ್ಲಮ್ಮ ಕಟ್ಟಡದ ಸಭಾಂಗಣದಲ್ಲಿ ನಡೆಯಲಿದೆ.
ಇದರ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರದಲ್ಲಿ ಬೆಂಕಿ ಪೊಟ್ಟಣ, ಲೈಟರ್, ಫೌಂಟೇನ್ ಇಂಕ್ ಪೆನ್, ಮೊಬೈಲ್ ಫೋನ್, ಸಿಗರೇಟ್, ಪಾನ್, ಬಿಡಾ ತಂಬಾಕು ಹಾಗೂ ನೀರಿನ ಬಾಟಲ್ ಕೊಂಡೊಯ್ಯುವುದನ್ನು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಖಾಸಗಿ ವಾಹನಗಳ ಪ್ರವೇಶವನ್ನು (ಅಭ್ಯರ್ಥಿ ಹಾಗೂ ಪತ್ರಕರ್ತರನ್ನು ಹೊರತುಪಡಿಸಿ) ನಿಷೇಧಿಸಿ ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.