ಮಾಜಿ ಸಚಿವ ರಾಜಶೇಖರ ಪಾಟೀಲರಿಗೆ ಜಗದ್ಗುರು ಪಂಚಾಚಾರ್ಯ ರಾಷ್ಟ್ರೀಯ ಪುರಸ್ಕಾರ
ಹುಮನಾಬಾದ್:ಸೆ.23: ಶ್ರಾವಣ ಮಾಸದ ಅಂಗವಾಗಿ ಬೇಮಳಖೇಡ ಮತ್ತು ಗೋರ್ಟಾ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಷ.ಬ್ರ. ಡಾ. ರಾಜಶೇಖರ ಶಿವಾಚಾರ್ಯ ಸ್ವಾಮಿಗಳಿಂದ ಬೀದರ್‍ನಲ್ಲಿ ನಡೆದ ಶ್ರಾವಣ ಶಿವ ದರ್ಶನ ಸಂಚಾರ ವೀರಶೈವ ಲಿಂಗಾಯತ ಧರ್ಮಗ್ರಂಥ, ಶ್ರೀ ಸಿದ್ಧಾಂತ ಶಿಖಾಮಣ ಅಭಿಯಾನ ಸಮಾರೋಪ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಜಶೇಖರ ಬಿ ಪಾಟೀಲರಿಗೆ ಶ್ರೀ ಜಗದ್ಗುರು ಪಂಚಾಚಾರ್ಯ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಬದಲ್ಲಿ ಶ್ರೀಮದ್ಧಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1002 ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಜಗದ್ಗುರು ಪಂಡಿತಾರಾಧ್ಯ ಪೀಠ ಶ್ರೀಶೈಲ ಮಹಾಕ್ಷೇತ್ರ, ‘ತಪೆÇೀರತ್ನ’ ಶ್ರೀ ಷ.ಬ್ರ.ಲಿಂ.ಗುರುಪಾದ ಶಿವಾಚಾರ್ಯರು ಹಿರೇಮಠ ಸಂಸ್ಥಾನ, ಬೇಮಳಖೇಡ ಶ್ರೀ ಷ.ಬ್ರ. ವೀರತಪಸ್ವಿ ವೀರಭದ್ರ ಶಿವಾಚಾರ್ಯರು ಸಾವಿರ ದೇವರ ಸಂಸ್ಥಾನ ಮಠ, ಬಿಚ್ಚಾಲಿ, ಕಡಗಂಚಿ ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯರು ಬೃಹನ್ಮಠ ಚಿಟಗುಪ್ಪಾ, ಚಾಂಗಲೇರ ಶ್ರೀ ಷ.ಬ್ರ. ಶಿವಾನಂದ ಶಿವಾಚಾರ್ಯರು ಹಿರೇಮಠ ತಮಲೂರು, ಬೀದರ, ಪೂಜ್ಯ ಶ್ರೀ ಕರುಣಾದೇವಿ ಮಾತಾ ಶ್ರೀ ಅಕ್ಕಮಹಾದೇವಿ ಚೈತನ್ಯಪೀಠ, ಶ್ರೀಶೈಲಂ, ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಬಿ. ಖಂಡ್ರೆ, ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್,
ಖ್ಯಾತ ನಟ, ನಿರ್ಪಾಪಕ ಹಾಗೂ ನಿರ್ದೆಶಕ, ಡಾ. ಎಸ್. ನಾರಾಯಣ ವೀರಶೈವ ಲಿಂಗಾಯತ ಮುಖಂಡ ರಾಜೇಶ್ವರ ನಿಟ್ಟೂರೆ, ಉದಗೀರ, ಶ್ರೀ ವಿದೇಶಿ ವಾಣ ಜ್ಯ ಉದ್ಯಮಿ ಜಿ.ಟಿ. ಸುರೇಶಕುಮಾರ, ಸಿ.ಇ.ಓ. ಬ್ರಾಡ್‍ಘೋರ್ಡ್ ಗ್ಲೋಬಲ್ ಎಂಟರಪ್ರೈಸೆಸ್ ಯುನೈಟೇಡ್ ಕಿಂಗಡಮ್‍ನವರು, ಇದ್ದರು.