ವಿಶ್ವಕರ್ಮ ಸಮಾಜ ವಿಶ್ವಕ್ಕೆ ನೀಡಿದ ಕೊಡುಗೆ ಅಪಾರ: ಹುಲಸೂರ ಶ್ರೀ
ಬಸವಕಲ್ಯಾಣ:ಸೆ.23: ವಿಶ್ವಕರ್ಮ ಸಮಾಜವು ವಿಶ್ವಕ್ಕೆ ನೀಡಿದ ಕೊಡುಗೆ ಅಪಾರ ದೊಡ್ಡದಾಗಿದೆ. ವಿಶ್ವದ ಹಲವು ಕಡೆ ಗುಡಿ ಗುಂಡಾರಗಳಲ್ಲಿ ಶಿಲ್ಪಕಲೆ, ಕಲಾಕೃತಿ ಹಾಗು ಹಲವು ದೇವರುಗಳ ಮೋರ್ತಿಗಳ ತಮ್ಮ ಕಲೆಯಿಂದ ರಚನೆ ಮಾಡಿದವರು ವಿಶ್ವಕರ್ಮ ಸಮಾಜದವರಾಗಿದ್ದಾರೆ ಎಂದು ಹುಲಸೂರನ ಡಾ. ಶಿವಾನಂದ ಸ್ವಾಮೀಜಿ ಹೇಳಿದರು.
ಹುಲಸೂರ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಾಸ್ಥಾನದ ಸಭಾ ಮಂಟಪದಲ್ಲಿ ಭಾನುವಾರ ಜರುಗಿದ ಅಖಿಲ ಕರ್ನಾಟಕ ವಿಶ್ವಕರ್ಮ ಮಾಹಸಭಾ ಬೆಂಗಳೂರು, ಜಿಲ್ಲಾ ಘಟಕ ಬೀದರ ಹಾಗೂ ತಾಲೂಕು ಘಟಕದಿಂದ ಜರುಗಿದ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ವಿಶ್ವಕರ್ಮ ಸಮಾಜಕ್ಕೆ ಸರ್ಕಸ್ ಮಾಢುವ ಸ್ವಾಮೀಜಿಗಳು ಬೇಕಿಲ್ಲ ಕೆಲಸ ಮಾಡುವ ಸ್ವಾಮಿಗಳು ಬೇಕು ಅದು ದೊಡ್ಡೆಂದ್ರ ಮಹಾಸ್ವಾಮಿಗಳು ರೂಪದಲ್ಲಿ ತಮ್ಮ ಸಮಾಜಕ್ಕೆ ಸಿಕ್ಕಿದಾರೆ ಎಂದರು.
ಸಾನಿಧ್ಯ ವಹಿಸಿ ಪೂಜ್ಯ ದೊಡ್ಡೇಂದ್ರ ಸ್ವಾಮೀಜಿ ಮಾತನಾಢಿ, ವಿಶ್ವಕರ್ಮ ಸಮಾಜ ರೈತರಿಗಾಗಿ ಹಾಗೂ ಹಲವು ಗುಡಿ ಗುಂಡಾರಗಳಾದ ಬೇಲೂರ, ಹಳೇಬಿಡು ಸೇರಿದಂತೆ ಅಜಂತಾ, ಎಲ್ಲೋರಾ, ಐಹೋಳೆ ಪಟ್ಟದಕಲ್ಲುದಂತಹ ಗುಹೆಗಳಲ್ಲಿ ತಮ್ಮ ಕಾಯಕದ ಮೂಲಕ ತಮ್ಮ ಎಳಿಗೆ ನೀಡಿದಾರೆ. ಈ ಜಾತಿ ಕೀಳು, ಆ ಜಾತಿ ಮೇಲು ಅಂತ ಅನ್ನದೆ, ಎಲ್ಲಾ ಸಮಾಜದವರು ನಮ್ಮವರೆ ಎನ್ನುವರು ವಿಶ್ವಕರ್ಮ ಸಮಾಜದವರಾಗಿದ್ದಾರೆ. ಅಲ್ಲದೆ ಸಮಾಜಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ, ಆರ್ಥಿಕವಾಗಿ ವಿಶ್ವಕರ್ಮ ಸಮಾಜಕ್ಕೆ ಬೇಕಾಗುವ ಸವಲತ್ತುಗಳು ನೀಡುವ ಕೆಲಸ ನಮ್ಮ ಸಮಾಜದ ಮುಖಂಡರಾದ ಕೆ.ಪಿ.ನಜುಂಡಿ ಅÀವರು ನೀಡಿದಾರೆ ಎಂದರು.
ಈ ವೇಳೆ ಮಲ್ಲಿಕಾರ್ಜುನ ಧಬಾಲೆ, ಆಕಾಶ ಖಂಡಾಳೆ, ಲತಾ ಹಾರಕುಡೆ, ಸುಧೀರ ಕಾಡಾದಿ, ಗೋವಿಂದರಾವ ಸೋಮವಂಶಿ, ನಾಗರಾಜ ಹಾವಣ್ಣಾ, ಅಶೋಕ ಪೆÇೀದ್ದಾರ, ದತ್ತಾತ್ರಿ ವಿಶ್ವಕರ್ಮ ಹಿಪ್ಪಳಗಾಂವ, ಪ್ರಶಾಂತ ವಿಶ್ವಕರ್ಮ, ಸುಲೋಚನಾ ವಿಶ್ವಕರ್ಮ, ಸುದರ್ಶನ ವಿಶ್ವಕರ್ಮ ಸೇರಿದಂತೆ ಮತ್ತಿತರರು ಮಾತನಾಡಿದರು. ವಾಸು ನವೋದಯ ಆಕಾಡೆಮಿ ಮಕ್ಕಳಿಂದ ನಡೆದ ನ್ರತ್ಯ ನೋಡಿಗರ ಗಮನ ಸೆಳೆಯಿತು.
ಬೀದರ ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜದವರು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಸಮಾಜವಾಗಿದೆ. ಕಲೆ, ಶಿಲೆ ಹಾಗೂ ಕಲಾಕೃತಿಗಳು ರಚನೆ ಮಾಡುವರು ವಿಶ್ವಕರ್ಮ ಸಮಾಜದವರು ನಾವಾಗಿದ್ದೆವೆ
ದತ್ತಾತ್ರಿ ವಿಶ್ವಕರ್ಮ ಹಿಪ್ಪಳಗಾಂವ ಅಖಿಲ ಕರ್ನಾಟಕ ವಿಶ್ವಕರ್ಮ ಮಾಹಸಭಾ ಜಿಲ್ಲಾಧ್ಯಕ್ಷ
ರಾಜ್ಯದಲ್ಲಿ ನಮ್ಮ ಸರಕಾರ ಆಡಳಿತದಲ್ಲಿದೆ ಹೀಗಾಗಿ ವಿಶ್ವಕರ್ಮ ಸಮಾಜದವರು ಸ್ಥಳದ ಅವಕಾಶ ಮಾಡಿಕೊಟ್ಟರೆ, ಸರಕಾರದಿಂದ ಹತ್ತುಲಕ್ಷ ರೂ ವೆಚ್ಚದ ಅನುಧಾನ ನೀಡಿ ವಿಶ್ವಕರ್ಮ ಸಮಾಜದ ಭವನ ಮಾಡಲು ಪ್ರಯತ್ನಿಸುವೆ
ಲತಾ ಹಾರಕೂಡೆ ಜಿಪಂ ಮಾಜಿ ಉಪಾಧ್ಯಕ್ಷೆ