ತಡಪಳ್ಳಿ ಗ್ರಾಮದಲ್ಲಿ ಪೋಷಣ ಅಭಿಯಾನ ಮಾಸಾಚರಣೆ
ಬೀದರ್:ಸೆ.23: ತಾಲೂಕಿನ ಬಗದಲ 2ನೇ ವಲಯದ ತಡಪಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಪೆÇೀಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಶ್ರೀಮತಿ ಸುರೇಖಾಬಾಯಿ ಮೇಲ್ವಿಚಾರಕ್ಕಿ ಅವರು ಮಾತನಾಡಿ ಘೋಷಣ ಅಭಿಯಾನವು ಸರಕಾರದ ಮಹತ್ಕಾಂಕ್ಷಿ ಯೋಜನೆಯಾಗಿದೆ ಗರ್ಭಿಣಿಯರು ಬಾಣತಿಯರು ಪೌಷ್ಟಿಕಾಂಶವುಳ್ಳ ಆಹಾರಗಳು ಸೇವನೆ ಮಾಡುವ ತುಂಬಾ ಮುಖ್ಯವಾಗಿದೆ. ಗರ್ಭಿಣಿಯರು ಬಾಣತಿಯರು ಊಟ ಮಾಡುವಾಗ ತಟ್ಟೆಯಲ್ಲಿ ಹಸಿರು ತರಕಾರಿ ಹಸಿರು ಸೋಪ್ಪು ಮೊಳಕೆ ಕಾಳುಗಳು ಹಣ್ಣುಗಳು ಹಳದಿ ಬಣ್ಣದ ಹಣ್ಣುಗಳು ಹಾಲು ಮೊಟ್ಟೆ ಸೇವನೆ ಮಾಡುವುದರಿಂದ ಗರ್ಭಿಣಿಯರಲ್ಲಿ ರಕ್ತ ಹೀನತೆ ತಡೆಗಟ್ಟುವುದಕ್ಕೆ ಸಾಧ್ಯವಾಗುತ್ತದೆ ಹುಟ್ಟುವ ಮಗು ಅಪೌಷ್ಟಿಕವಾಗುವುದಿಲ್ಲ ತಾಯಿ ಮತ್ತು ಮಗು ಆರೋಗ್ಯವಂತರಾಗಿರುತ್ತಾರೆ ಎಂದು ಹೇಳಿದರು ಹಾಗೂ ಉಪಾಧ್ಯಕ್ಷರಾದ ಸುಧಾಕರ್ ವರ್ಮ ಅವರು ಮಾತನಾಡಿ ಪ್ರತಿಯೊಂದು ಗ್ರಾಮದಲ್ಲಿ ಪೆÇೀಷಣ ಕಾರ್ಯಕ್ರಮ ಮಾಡುವುದರಿಂದ ಎಲ್ಲಾ ಮಹಿಳೆಯರಿಗೆ ಉಪಯುಕ್ತವಾಗುತ್ತದೆ ಎಂದು ತಿಳಿಸಿದರು. ಈ ಕಾರ್ಯಕ್ರಮದ ನಿರೂಪಣೆ ಮಾಡಿದವರು ಸುಧಾರಾಣಿ ಅಂಗನವಾಡಿ ಕಾರ್ಯಕರ್ತೆ, ಸ್ವಾಗತ ಮಾಡಿದವರು ಅಶ್ವಿನಿ ಅಂಗನವಾಡಿ ಕಾರ್ಯಕರ್ತೆ, ವಂದನಾರ್ಪಣೆ ಜ್ಯೋತಿ ಅಂಗನವಾಡಿ ಕಾರ್ಯಕರ್ತೆ ಅವರಿಂದ ಈ ಸಂದರ್ಭದಲ್ಲಿ ಸಿಂದೊಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಭದ್ರ ಬಾಯಿ ಉಪಾಧ್ಯಕ್ಷರಾದ ಸುಧಾಕರ್ ವರ್ಮಾ ಸದಸ್ಯರ ಶ್ರೀ ಜಾವಿದ್ಮಿಯ ,ಸಂಜು, ರಾಜಕುಮಾರ, ಸಂಜು ಕುಮಾರ ಸದಸ್ಯರಾದ ರಾಮು. ಮಾಜಿ ಸದಸ್ಯರು ಘಾಳೆಪ್ಪಾ ಭಂಗುರೆ ಅಂಗನವಾಡಿ ಕಾರ್ಯಕರ್ತರ ಶ್ರೀಮತಿ ಪಂಚಶೀಲ ಸವಿತಾ ಸುಧಾರಾಣಿ ಜ್ಯೋತಿ ಇಂದುಮತಿ ಶಶಿಕಲಾ ಅಶ್ವಿನಿ ಅನಿತಾ ಕಾರ್ಯಕರ್ತರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.