ಸಮ್ಮೇಳನ ಯಶಸ್ವಿಗೆ ಅಸ್ಕಿ ಪೌಂಡೇಶನ್ ಸಂಪೂರ್ಣ ಸಹಕಾರ
ತಾಳಿಕೋಟೆ:ಸೆ.23: ತಾಳಿಕೋಟೆ ತಾಲೂಕಾ ಕೇಂದ್ರವಾದ ಮೇಲೆ ಪಟ್ಟಣದಲ್ಲಿ ನಡೆಯುತ್ತಿರುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಅಸ್ಕಿ ಪೌಂಡೇಶನ್‍ವು ಎಲ್ಲ ರೀತಿಯ ಸಹಕಾರ ನೀಡಲಿದ್ದು ಎಲ್ಲರ ಜೊತೆಗೆ ಕನ್ನಡಮ್ಮನ ತೇರನ್ನು ಎಳೆಯೋಣವೆಂದು ಅಸ್ಕಿ ಪೌಂಡೇಶನ್ ಅಧ್ಯಕ್ಷ ಸಮಾಜ ಸೇವಕ ಸಿ.ಬಿ.ಅಸ್ಕಿ(ಕೊಣ್ಣೂರ) ಅವರು ಹೇಳಿದರು.
ರವಿವಾರರಂದು ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಬೇಟ್ಟಿ ನೀಡಿ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ತಯಾರಿ ಕುರಿತು ಉಸ್ತುವಾರಿಗಳೊಂದಿಗೆ ಚರ್ಚಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಜಾನಪದ ಸಾಹಿತ್ಯ ಬಹಳೇ ಮುಖ್ಯಪಾತ್ರ ವಹಿಸಿದ್ದಾಗಿದೆ ತಾಳಿಕೋಟೆ ಐತಿಹಾಸಿಕ ನಗರಿ ತಾಲೂಕಾ ಕೇಂದ್ರವಾದ ಬಳಿಕ ಮೊದಲನೇಯ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವದು ಅತ್ಯಂತ ಸಂತಸ ಮೂಡಿಸಿದೆ ತಮ್ಮ ನಾಡಿನ ಕನ್ನಡ ಭಾಷೆಯಲ್ಲಿ ಪ್ರೀತಿ ತುಂಬಿದೆ ಇಂತಹ ಭಾಷೆಯನ್ನು ಎಲ್ಲರೂ ಹೊತ್ತುಕೊಂಡು ಮೇರೆಸುವಂತಹ ಸಂದರ್ಬ ಕೋಟೆ ನಗರಿ ತಾಳಿಕೋಟೆ ಜನರಿಗೆ ಒದಗಿ ಬಂದಿದೆ ನಾಡಿನ ನೆಲ ಜಲ ಭಾಷೆಯನ್ನು ಉಳಿಸಿ ಬೆಳೆಸುವದರೊಂದಿಗೆ ಅದನ್ನು ರಕ್ಷೀಸುವಂತಹ ಜವಾಬ್ದಾರಿಯೂ ಕೂಡಾ ಪ್ರತಿಯೊಬ್ಬರ ಮೇಲಿದೆ ತಾಳಿಕೋಟೆ ತಾಲೂಕಿನ ಸಾಹಿತಿಗಳು ರಾಜ್ಯ ಅಲ್ಲದೇ ದೇಶ ಮಟ್ಟದಲ್ಲಿಯೂ ಹೆಸರು ಮಾಡಿದಂತವರಿದ್ದಾರೆ ಅವರಿಗೆ ವೇದಿಕೆ ನೀಡುವದರೊಂದಿಗೆ ಕನ್ನಡ ಸಾಹಿತ್ಯದ ಬೇರು ದೇಶಮಟ್ಟದಲ್ಲಿ ಪಸರಿಸುವಂತಹ ಕಾರ್ಯ ಮಾಡಬೇಕಿದೆ ಎಂದ ಅಸ್ಕಿ ಅವರು ಮಾಡುವ ಕೈಗಳು ಹುರುಪಿದ್ದರೆ ಕೊಡುವ ಕೈಗಳು ಸಾಕಷ್ಟಿವೆ ಇದಕ್ಕೆ ಅಸ್ಕಿ ಪೌಂಡೇಶನ್‍ವು ಹೊರತಾಗಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಎಲ್ಲ ರೀತಿಯಿಂದ ಸಹಾಯ ಸಹಕಾರ ನೀಡಲಿದೆ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿರುವ ಆರ್.ಎಲ್.ಕೊಪ್ಪದ ಅವರೂ ಕೂಡಾ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಾಗಿದ್ದು ಅವರ ನೇತೃತ್ವದಲ್ಲಿ ಕನ್ನಡದ ತಾಯಿಭುವನೇಶ್ವರಿ ದೇವಿಯ ತೇರನ್ನು ಎಲ್ಲರೂ ಜೊತೆಗೂಡಿ ಎಳೆಯೋಣವೆಂದರು.
ಇದೇ ಸಮಯದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಿ.ಬಿ.ಅಸ್ಕಿ ಅವರನ್ನು ಹಾಗೂ ಮಡುಸಾಹುಕಾರ ಬಿರಾದಾರ ಅಲ್ಲದೇ ಪತ್ರಕರ್ತರಾದ ಅಂಬಾಜಿ ಘೋರ್ಪಡೆ ಅವರನ್ನು ಕನ್ನಡದ ಶಾಲು ಹಾಕಿ ಸತ್ಕರಿಸಲಾಯಿತು.
ಈ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆರ್.ವ್ಹಿ.ಜಾಲವಾದಿ, ಜೈಭೀಮ ಮುತ್ತಗಿ, ಪ್ರಕಾಶ ಹಜೇರಿ, ಮುತ್ತು ಕಶೆಟ್ಟಿ, ರಾಜು ವಿಜಾಪೂರ, ಮಲ್ಲನಗೌಡ ಹಂದ್ರಾಳ, ಮಾನಸಿಂಗ್ ಕೊಕಟನೂರ, ಮಹಾಂತೇಶ ಮುರಾಳ, ಬಿ.ಆರ್.ಪೋಲೀಸ್‍ಪಾಟೀಲ, ಕೊರವಾರ, ಪ್ರಭುಗೌಡ ಚೌದ್ರಿ, ಎಚ್.ಬಿ.ನಾಯಕ, ಬಿ.ಬಿ.ಬಿರಾದಾರ, ವೀರೇಶ ಕವಡಿಮಟ್ಟಿ, ಜಗದೀಶ ಬಿಳೇಭಾವಿ, ಕೆ.ಕಿಶೋರಕುಮಾರ, ಡಾ.ನಜೀರ ಕೋಳ್ಯಾಳ, ಶಿವಾನಂದ ಹೂಗಾರ, ಮೊದಲಾದವರು ಉಪಸ್ಥಿತರಿದ್ದರು.