ಸೆ.27 ರಂದು ಪ್ಲಾಸ್ಟಿಕ್ ಮುಕ್ತ ಜೀವನ ಜನ ಜಾಗೃತಿ ನಿಮಿತ್ಯ ಪಾದಯಾತ್ರೆ
ಬಸವಕಲ್ಯಾಣ:ಸೆ.23: ಇಲ್ಲಿಯ ಗವಿ ಮಠದಲ್ಲಿ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ 19 ನೇ ಪಟ್ಟಾಧಿಕಾರ ವಧರ್ಂತಿ ಮಹೋತ್ಸವ ಹಾಗೂ 38ನೇ ಜನ್ಮ ದಿನ ಕಾರ್ಯಕ್ರಮದವು ಇಲ್ಲಿಯ ಗವಿ ಮಠದಲ್ಲಿ ಸೆ28 ರಂದು ಜರುಗಲಿದೆ ಎಂದು ಯುವ ಮುಖಂಡ ಶಿವಕುಮಾರ ಬಿರಾದಾರ ತಿಳಿಸಿದರು.
ನಗರದ ಆರ್ಯ ಸಮಾಜ ಭವದಲ್ಲಿ ಭಾನುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀಗಳ ಜನ್ಮ ದಿ£ದ ಅಂಗವಾಗಿ ಸೆ 27 ರಂದು ಬೆಳಿಗ್ಗೆ 10ಕ್ಕೆ ನಗರದಲ್ಲಿ ಪ್ಲಾಸ್ಟಿಕ್ ಮುಕ್ತ ಜೀವನ ಜನ ಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ನಗರದ ಗಾಂಧಿ ವೃತ್ತದಿಂದ ಮುಖ್ಯ ರಸ್ತೆಯ ಮಾರ್ಗವಾಗಿ ತ್ರೀಪುರಾಂತನ ಮಡಿವಾಳ ಮಾಚಿದೇವರ ವೃತ್ತದವರೆಗೆ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ನೇತೃತ್ವದಲ್ಲಿ ಈ ಪಾದಯಾತ್ರೆ ಜರುಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಮಠಧ ಭಕ್ತರು, ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಗವಿ ಮಠದ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ ಮಾತನಾಡಿ, ಗವಿಮಠದ ಶ್ರೀಗಳು ಪ್ರತಿ ವರ್ಷವೂ ತಮ್ಮ ಜನ್ಮದಿನದ ನಿಮಿತ್ಯ ಸಮಾಜದ ಒಳಿತಿಗಾಗಿ ವಿನೂತನ ಕಾರ್ಯಕ್ರಮಗಳು ಹಾಗೂ ಜಾಗೃತಿ ಅಭಿಯಾನವನ್ನು ಮಾಡುತ್ತಾ ಬಂದಿದ್ದಾರೆ. ಕೋವಿಡ್ ಕುರಿತು ಜಾಗೃತಿ, ಅಭಿನವ ಜೋಳಿಗೆ, ಸಸಿ ನೆಡುವ ಕಾರ್ಯಕ್ರಮ, ಮೊಬೈಲ್‍ಯಿಂದ ಮಕ್ಕಳಿಗೆ ದೂರವಿಡಿ ಎಂಬ ಹತ್ತಾರು ಜಾಗೃತಿ ಅಭಿಯಾನವನ್ನು ಶ್ರೀಗಳು ಮಾಡಿದ್ದಾರೆ. ಸಮಾಜದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಮನಗಂಡು ಶ್ರೀಗಳು ಜನರಲ್ಲಿ ಜಾಗೃತಿ ತರುವ ಉದ್ದೇಶದಿಂದ ಸೆ-27ರಂದು ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಪಣ ತೊಟ್ಟ ಶ್ರೀಗಳ ಕಾರ್ಯಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲೋಣ ಎಂದರು.
ಯುವ ಮುಖಂಡ ಲೊಕೇಶ ಮೋಳಕೆರೆ ಮಾತನಾಡಿ, ಗವಿ ಮಠದ ಶ್ರೀಗಳ ನೇತೃತ್ವದಲ್ಲಿ ನಡೆಯಲಿರುವ ಪ್ಲಾಸ್ಟಿಕ್ ಮುಕ್ತ ಜೀವನ ಜನ ಜಾಗೃತಿ ಪಾದಯಾತ್ರೆಯಲ್ಲಿ ನಗರದ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಂಘಟನೆಯ ಮುಖಂಡರು, ಸಾರ್ವಜನಿಕರು ಗಣ್ಯರು ಭಾಗಿಯಾಗಲಿದ್ದಾರೆ. ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುತ್ತಿರುವ ಸಮಸ್ಯೆ ಹಾಗೂ ಅದರ ಬಳಕೆಯ ನಿಯಂತ್ರಣಕ್ಕೆ ಸಾರ್ವಜನಿಕರು ಏನು ಮಾಡಬೇಕೆಂಬುವುದು ಶ್ರೀಗಳು ತಿಳಿಸಲಿದ್ದಾರೆ. ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗಿಯಾಗಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡೋಣ ಎಂದು ಮನವಿ ಮಾಢಿದರು.
ಇದೆ ಸಂದರ್ಭದಲ್ಲಿ 19ನೇ ಪಟ್ಟಾಧಿಕಾರ ವಧರ್ಂತಿ ಮಹೋತ್ಸವ ಹಾಗೂ 38 ನೇ ಜನ್ಮ ದಿನೋತ್ಸವದ ಆಮಂತ್ರಣ ಪತ್ರಿಕೆಯನ್ನು ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಹಸ್ತದಿಂದ ಬಿಡುಗಡೆಗೊಳಿಸಲಾಯಿತು.
ಸೆ.28ರಂದು ಜರುಗಲಿರುವ 19ನೇ ಪಟ್ಟಾಧಿಕಾರ ವಧರ್ಂತಿ ಮಹೋತ್ಸವ ಹಾಗೂ 38ನೇ ಜನ್ಮದಿನೋತ್ಸವ ಸಮಾರಂಭದ ಸಾನಿರ್ಧಯವನ್ನು ಶ್ರೀ ಜಯಶಾಂತಲಿಂಗ ಮಹಾಸ್ವಾಮೀಜಿ ವಹಿಸಲಿದ್ದಾರೆ. ತೆಲಂಗಾಣದ ಶ್ರೀ ವೀರೇಶ್ವರ ಶಿವಾಚಾರ್ಯರು ಆಗಮಿಸುವರು. ಸಂಸದ ಸಾಗರ್ ಖಂಡ್ರೆ, ಕೆಕೆಆಋಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್, ಶಾಸಕ ಶರಣು ಸಲಗರ, ಎಂಎಲ್ಸಿ ಎಂ. ಜಿ.ಮುಳೆ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಜಿ ಎಮ್‍ಎಲ್‍ಸಿ ವಿಜಯಸಿಂಗ್, ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ ಸೇರಿದಂತೆ ಹಲವು ಮುಖಂಡರು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಗವಿಮಠದ ಶ್ರೀಗಳು ತಿಳಿಸಿದ್ದಾರೆ.