ಇಂದ್ರಿಯಗಳನ್ನು ನಮ್ಮ ಅಧೀನದಲ್ಲಿ ಇರಿಸಿಕೊಳ್ಳಬೇಕು; ಡಾ.ನಾ.ಸೋಮೇಶ್ವರ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.21: ಸ್ವಚ್ಛ ಮತ್ತು ಸ್ವಸ್ಥ ಶಬ್ದ ಗಳ ಅರ್ಥ ಮಾಡಿಕೊಳ್ಳಬೇಕು. ಸುಶೃತ ಮಹರ್ಷಿಗಳು ಸ್ವಸ್ಥ ಎಂದರೆ ಸಹಜ ಸ್ಥಿತಿ ಎಂಬಂತೆ ವಿಶ್ಲೇಷಿಸಿದ್ದಾರೆಂದು ಲೇಖಕ, ವೈದ್ಯ, ಥಟ್ ಅಂತ ಹೇಳಿ ಕಾರ್ಯಕ್ರಮದ ಕ್ವಿಜ್ ಮಾಸ್ಟರ್ ಡಾ. ನಾ. ಸೋಮೇಶ್ವರ  ತಿಳಿಸಿದರು.ನಗರದ ದೇವರಾಜ ಅರಸು ಬಡಾವಣೆ ಬಿ ಬ್ಲಾಕ್‌ನಲ್ಲಿರುವ ಶಿವಧ್ಯಾನ ಮಂದಿರದಲ್ಲಿ  ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮತ್ತು ಸಿಹಿ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಸಾಹಿತಿ ಶಿವಪ್ರಸಾದ ಕರ್ಜಗಿ ಅವರು ಸತ್ಯ ಸಾಕ್ಷಾತ್ಕಾರದ ನುಡಿಮುತ್ತುಗಳು ಕುರಿತಂತೆ ಸಂಗ್ರಹಿಸಿರುವ ಪ್ರಸಾದ ವಾಣಿ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.ಆತ್ಮ, ಇಂದ್ರಿಯ, ಮನಸ್ಸು ಸ್ವಸ್ಥ ಆಗಿದ್ದಾಗ ಪರಿಪೂರ್ಣ ಆರೋಗ್ಯ ಲಭಿಸಬೇಕು. ಕಣ್ಣು, ಕಿವಿ, ನಾಲಿಗೆ ಮುಂತಾದ ಇಂದ್ರಿಯ ತುಂಬಾ ಶಕ್ತಶಾಲಿಗಳು.‌ ಹಾಗಾಗಿ ಲಘುವಾಗಿ ಪರಿಗಣಿಸಬಾರದು. ಇಂದ್ರಿಯಗಳು ನಮ್ಮ ಅಧೀನದಲ್ಲಿ ಇರಿಸಿಕೊಳ್ಳಬೇಕು. ನಾವು ಹೇಳಿದ ಹಾಗೆ ಕೇಳುವಂತೆ ಬದುಕನ್ನು ರೂಪಿಸಿಕೊಳ್ಳ ಬೇಕು ಎಂದು ತಿಳಿಸಿದರು.ಮನಸ್ಸಿಗೆ ಮೀರಿಗೆ ಇರುವಂತಹ ಬುದ್ಧಿಯ ಮಾತು ಕೇಳಬೇಕು. ಆದರೆ, ಮನಸ್ಸು, ಇಂದ್ರಿಯ ಕೇಳದೇ ಹೋದಾಗ ಆತ್ಮಕ್ಕೆ ಬಹಳ ತೊಂದರೆ ಆಗುತ್ತದೆ ಎಂದು ಎಚ್ಚರಿಸಿದರು.ಈಶ್ವರೀಯ ವಿಶ್ವವಿದ್ಯಾಲಯದ ಶಿವಮೊಗ್ಗ ಶಾಖೆ ಸಂಚಾಲಕಿ ರಾಜ ಯೋಗಿನಿ ಬ್ರಹ್ಮಾಕುಮಾರಿ ಅನಸೂಯಾಜಿ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ, ಚನ್ನಗಿರಿಯ ಕೇದಾರ ಶಾಖಾಮಠದ  ಕೇದಾರ ಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸ್ವಾಮಿ ನಾರಾಯಣಾನಂದ ಸರಸ್ವತಿ ಸಾನ್ನಿಧ್ಯ ವಹಿಸಿದ್ದರು.ಕಸಾಪ ರಾಜ್ಯ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ ಮತ್ತು ಸಾಹಿತಿ ಶಿವಯೋಗಿ ಹಿರೇಮಠ್ ಇತರರು ಇದ್ದರು.ಸ್ವಚ್ಛ ಮತ್ತು ಸ್ವಸ್ಥ ಸಮಾಜಕ್ಕಾಗಿ ಆಧ್ಯಾತ್ಮಿಕ ಸಬಲೀಕರಣ ಸೇವಾ ಯೋಜನೆಯ ಪ್ರಾರಂಭೋತ್ಸವ ನಡೆಯಿತು.ಶಕುಂತಲಮ್ಮ ಮತ್ತು ಪರಮೇಶಪ್ಪ ಕರ್ಜಗಿ ದಂಪತಿ ಪ್ರಸಾದ ವಾಣಿ.. ಕೃತಿಯನ್ನು ಬಿಡುಗಡೆಗೊಳಿಸಿದರು. ನಿವೃತ್ತ ಉಪನ್ಯಾಸಕ ಕೆ. ಮಂಜುನಾಥ್ ಕೃತಿ ಕುರಿತು ಮಾತನಾಡಿದರು.