24 ರಂದು ಡೊಂಗರದೇವಿಗೆ ಮಹಾರುದ್ರಾಭಿಷೇಕ
ಕಲಬುರಗಿ,ಮೇ.20-ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮುಂಗಾರು ಬಿತ್ತನೆಯ ನಿಮಿತ್ಯವಾಗಿ ಸಕಾಲಕ್ಕೆ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸಿ ಮೇ.24 ರಂದು ಶುಕ್ರವಾರ ಬೆಳಗ್ಗೆ 6 ಗಂಟೆಗೆ ಗ್ರಾಮ ದೇವತೆಯಾದ ಆದಿಶಕ್ತಿ ಡೊಂಗೊರ ದೇವಿಯ ಮಹಾರುದ್ರಾ ಅಭಿಷೇಕ ಮಾಡಲಾಗುತ್ತದೆ ಇದರ ಜೊತೆಗೆ ಕುಂಭಮೇಳ ಮತ್ತು ಮುತ್ತೈದೆಯವರ ಮೆರವಣಿಗೆ ಮೂಲಕ ಭಜನೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆದ್ದರಿಂದ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮದ ದೇವಿಯ ಭಕ್ತಾದಿಗಳು ಹಾಗೂ ಎಲ್ಲಾ ತಾಯಂದಿರು ಅಕ್ಕತಂಗಿಯರು ಗುರುಹಿರಿಯರು ದೇವಿಯ ಮಹಾ ರುದ್ರ ಅಭಿಷೇಕದಲ್ಲಿ ಪಾಲ್ಗೊಳ್ಳಬೇಕು. ರೈತರು ಬೆಳೆಯುವ ದವಸ ಧಾನ್ಯಗಳು ಹೆಚ್ಚಾಗಿ ಬೆಳೆಯಲೆಂದು ಮತ್ತು ಅವುಗಳಿಗೆ ಯಾವುದೇ ರೋಗ ರಜನಿಗಳು ಬಾರದಂತೆ ಮತ್ತು ಸಮಸ್ತ ನಾಡಿನ ಜನತೆಗೆ ಸಕಲ ಕೋಟಿ ಜೀವರಾಶಿಗಳಿಗೆ ಸುಖ ಶಾಂತಿ ನೆಮ್ಮದಿ ಐಶ್ವರ್ಯ ಆರೋಗ್ಯ ಭಾಗ್ಯ ನೀಡಲಿ ಎಂದು ಆದಿಶಕ್ತಿ ಜಗನ್ಮಾತೆ ಸ್ವರೂಪಿಯಾದ ದೊಂಗರದೇವಿಯಲ್ಲಿ ಪ್ರಾರ್ಥಿಸಿ ಪ್ರಸಾದ ಸ್ವೀಕರಿಸಿ ದೇವಿಯ ಆಶೀರ್ವಾದ ಪಡೆಯಬೇಕೆಂದು ರಾಜಶೇಖರ ರಾಜೇಶ್ವರ್, ಶಿವಾನಂದ್ ಇಟಗಿ, ಮಾಣಿಕಪ್ಪ ಜನಕಟ್ಟಿ ಅಂಬರಾಯ ಲಗಶೆಟ್ಟಿ ಭೋಜಪ್ಪ ರಾಜೇಶ್ವರ್ ಮುಂತಾದವರು ಪ್ರಕಟಣೆಯಲ್ಲಿ ಕೋರಿದ್ದಾರೆ.