ಸಾಲಬಾಧೆ:ರೈತ ಆತ್ಮಹತ್ಯೆ
ಆಳಂದ.ಮೇ 20: ತಾಲ್ಲೂಕಿನ ವಳವಂಡವಾಡಿ ಗ್ರಾಮದ ರೈತರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸುಬ್ಬಣ್ಣ ಬಟಗೇರಿ (72) ಆತ್ಮಹತ್ಯೆ ಮಾಡಿಕೊಂಡ ರೈತ.
ಮೃತ ರೈತ ತಡಕಲ್ ಕೃಷ್ಣಾ ಗ್ರಾಮೀಣ ಬ್ಯಾಂಕನಲ್ಲಿ 3 ಲಕ್ಷರೂ ಮತ್ತು ಸೊಸೈಟಿ ಬ್ಯಾಂಕ್ ನಲ್ಲಿ 1 ಲಕ್ಷ ರೂ ಸಾಲ ಪಡೆದಿದ್ದರು. 5 ವರ್ಷ ದಿಂದ ಹೊಲದಲ್ಲಿ ಬೆಳೆ ಸರಿಯಾಗಿ ಬೆಳೆಯದ್ದರಿಂದ ಹಾಗೂ ಸರಿಯಾದ ಸಮಯಕ್ಕೆ ಮಳೆಬರದೇ ಬೆಳೆ ನಷ್ಟವಾದ ಕಾರಣ ಸಾಲ ಹೇಗೆ ತೀರಿಸುವುದು ಎಂದು ಮಾನಸಿಕವಾಗಿ ನೊಂದು ರವಿವಾರ ಕ್ರಿಮಿನಾಶಕ ಕುಡಿದು ಮೃತಪಟ್ಟಿದ್ದಾರೆ. ಆಳಂದ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.