ಬೆಳೆ ಪರಿಹಾರ: 2,59,063 ರೈತರ ಖಾತೆಗಳಿಗೆ 36010 ಲಕ್ಷ ರೂ ಜಮೆ
ವಿಜಯಪುರ, ಮೇ.20: ಜಿಲ್ಲೆಯಲ್ಲಿ ಬೆಳೆ ಹಾನಿಯಾದ ಅರ್ಹ ರೈತರಿಗೆ ಗರಿಷ್ಠ ರೂ. 2 ಸಾವಿರ ರವರೆಗೆ ಅರ್ಹತೆಯಂತೆ ಪಾವತಿಸಿರುವ ಬೆಳೆಹಾನಿ ಪರಿಹಾರದ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುತ್ತಿದ್ದು, ಈವರೆಗೆ ಜಿಲ್ಲೆಯ 2,59,063 ರೈತರ ಖಾತೆಗಳಿಗೆ 36010.20 ಲಕ್ಷ ರೂ. ರೈತರ ಖಾತೆಗಳಿಗೆ ಡಿಬಿಟಿ ಮೂಲಕ ಜಮೆ ಮಾಡಲಾಗಿದ್ದು, ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನ ಜಮೆಯಾದ ಬಗ್ಗೆ ಪರಿಹಾರ ಜಾಲತಾಣವಾದ hಣಣಠಿs://ಠಿಚಿಡಿihಚಿಡಿಚಿ.ಞಚಿಡಿಟಿಚಿಣಚಿಞಚಿ.gov.iಟಿ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಜಿಲ್ಲೆಯ ಒಟ್ಟು 18,727 ಫಲಾನುಭವಿ ರೈತರಿಗೆ ಪರಿಹಾರ ಧನವು ಜಮೆಯಾಗಿರುವುದಿಲ್ಲ. ಇಂತಹ ರೈತರಿಗೆ ತಿಳಿವಳಿಕೆ ನೀಡಿ, ಅವಶ್ಯಕ ದಾಖಲೆಗಳನ್ನು ಪಡೆದು, ಪರಿಹಾರ ಧನ ಜಮೆ ಮಾಡಲು ಕ್ರಮ ವಹಿಸುವಂತೆ ಈಗಾಗಲೇ ಜಿಲ್ಲೆಯ ಎಲ್ಲ ತಹಶೀಲ್ದಾರರಿಗೆ ಸೂಚಿಸಲಾಗಿದ್ದು, ಆದಷ್ಟು ಬೇಗನೆ ಬಾಕಿ ಫಲಾನುಭವಿಗಳ ಖಾತೆಗೆ ಪರಿಹಾರ ಧನ ಜಮೆಯಾಗಲಿದೆ. ಬೆಳೆಹಾನಿ ಪರಿಹಾರ ಧನ ಜಮೆ ಕುರಿತು ಫಲಾನುಭವಿಗಳಿಗೆ ಮಾಹಿತಿ ಒದಗಿಸಲು ತಾಲೂಕಾವಾರು ಸಹಾಯವಾಣಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಸಹಾಯವಾಣಿ ಕೇಂದ್ರಗಳಿಗೆ ಕರೆ ಮಾಡಿ ಸಹ ಪರಿಹಾರ ಕಂಡುಕೊಳ್ಳಬಹುದಾಗಿದೆ.
ತಾಲೂಕಾವಾರು ವಿವರ : ಜಿಲ್ಲೆಯ ಆಲಮೇಲ ತಾಲೂಕಿನ 19295 ಫಲಾನುಭವಿಗಳ ಪೈಕಿ 18,186 ರೈತರ ಖಾತೆಗೆ 3545.24 ಲಕ್ಷ ರೂ., ಬಬಲೇಶ್ವರ ತಾಲೂಕಿನ 20020 ಫಲಾನುಭವಿಗಳ ಪೈಕಿ 19,294 ರೈತರ ಖಾತೆಗೆ 3136.02 ಲಕ್ಷ ರೂ. ಬಸವನಬಾಗೇವಾಡಿ ತಾಲೂಕಿನ 27174 ಫಲಾನುಭವಿಗಳ ಪೈಕಿ 25307 ರೈತರ ಖಾತೆಗೆ 3346.84ಲಕ್ಷ ರೂ., ಬಿಜಾಪುರ ತಾಲೂಕಿನ 18912 ಫಲಾನುಭವಿಗಳ ಪೈಕಿ 17743 ರೈತರ ಖಾತೆಗೆ 2388.49 ಲಕ್ಷ ರೂ., ಚಡಚಣ ತಾಲೂಕಿನ 19840 ಫಲಾನುಭವಿಗಳ ಪೈಕಿ 18409 ರೈತರ ಖಾತೆಗೆ 2497.3 ಲಕ್ಷ ರೂ. ದೇವರಹಿಪ್ಪರಗಿ ತಾಲೂಕಿನ 21088 ಫಲಾನುಭವಿಗಳ ಪೈಕಿ 19452 ರೈತರ ಖಾತೆಗೆ 2295.77 ಲಕ್ಷ ರೂ., ಇಂಡಿ ತಾಲೂಕಿನ 45542 ಫಲಾನುಭವಿಗಳ ಪೈಕಿ 42320 ರೈತರ ಖಾತೆಗೆ 6471.97 ಲಕ್ಷ ರೂ. ಕೊಲ್ಹಾರ ತಾಲೂಕಿನ 10336 ಫಲಾನುಭವಿಗಳ ಪೈಕಿ 9783 ರೈತರ ಖಾತೆಗೆ 1919.03 ಲಕ್ಷ ರೂ. ಮುದ್ದೇಬಿಹಾಳ ತಾಲೂಕಿನ 21860 ಫಲಾನುಭವಿಗಳ ಪೈಕಿ 20035 ರೈತರ ಖಾತೆಗೆ 2569.17 ಲಕ್ಷ ರೂ. ನಿಡಗುಂದಿ ತಾಲೂಕಿನ 7785 ಫಲಾನುಭವಿಗಳ ಪೈಕಿ 7246 ರೈತರ ಖಾತೆಗೆ 1158.83ಲಕ್ಷ ರೂ. ಸಿಂದಗಿ ತಾಲೂಕಿನ 25203 ಫಲಾನುಭವಿಗಳ ಪೈಕಿ 23324 ರೈತರ ಖಾತೆಗೆ 3387.24 ಲಕ್ಷ ರೂ. ತಾಳಿಕೋಟೆ ತಾಲೂಕಿನ 20516 ಫಲಾನುಭವಿಗಳ ಪೈಕಿ 19,438 ರೈತರ ಖಾತೆಗೆ 2147.34 ಲಕ್ಷ ರೂ. ತಿಕೋಟಾ ತಾಲೂಕಿನ 10149 ಫಲಾನುಭವಿಗಳ ಪೈಕಿ 9526 ರೈತರ ಖಾತೆಗೆ 1146.96 ಲಕ್ಷ ರೂ. ಜಮೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.