ಒಳ್ಳೆಯ ಮನಸ್ಸಿನಿಂದ ಒಳ್ಳೆಯ ಸಾಹಿತ್ಯರಚನೆ :ಮನು ಬಳಿಗಾರ
ಕಲಬುರಗಿ:ಮೇ.20: ಕಲ್ಯಾಣ ಕರ್ನಾಟಕದ ಸಾಹಿತ್ಯ ಎಲ್ಲಾ ಸಾಹಿತ್ಯಕ್ಕೂ ತಾಯಿ ಬೇರು,ಆರ್ಥಿಕವಾಗಿ ಹಿಂದುಳಿದ ಪ್ರದೇಶ ವಾಗಿರಬಹುದು ಆದರೆ ಸಾಹಿತ್ಯಿಕ,ಸಾಂಸ್ಕøತಿಕ ಶ್ರೀಮಂತ ಪ್ರದೇಶವಾಗಿದೆ.ಗವಿ ಸಿದ್ಧಪ್ಪ ಕ್ರಿಯಾಶೀಲ ವ್ಯಕ್ತಿ.ವಿಮರ್ಶಕ. ಒಳ್ಳೆಯ ಮನಸ್ಸು ಹೊಂದಿದ್ದರೆ ಒಳ್ಳೆಯ ಸಾಹಿತ್ಯ ರಚನೆ ಸಾಧ್ಯವೆಂಬುದಕ್ಕೆ ಗವಿಸಿದ್ಧಪ್ಪರ ಸಾಹಿತ್ಯದಲ್ಲಿ ಬುದ್ಧ,ಬಸವ,ದಾಸರ ,ತತ್ತ್ವ ಪದಗಳ ಪ್ರಭಾವದಿಂದ ಸಾಹಿತ್ಯ ರಚನೆಯಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ನಾಡೋಜ ಡಾ. ಮನು ಬಳಿಗಾರ್ ನುಡಿದರು.
ಕಲಾ ಮಂಡಳದಲ್ಲಿ ಜಿಲ್ಲಾ ದಲಿತ ಸಾಹಿತ್ಯ ಪರಿ ಷತ್ತು ಮತ್ತು ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿ ಷ್ಠಾನ ಏರ್ಪಡಿಸಿದ ಡಾ.ಮಲ್ಲಯ್ಯ ಅತ್ತನೂರರ ಮೂ ರು ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದವರು
ಧರ್ಮ ಜಾತಿಯನ್ನು ಮೀರಿದ ಸಾಹಿತ್ಯ ರಚಿಸಬೇಕು ಎಂದು ಸಲಹೆ ನೀಡಿದರು.
ಉದ್ಘಾಟಕರಾದ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಬಸವರಾಜ ಕೊನೇಕ್ ಅವರು ಈ ಭಾಗದಲ್ಲಿ ವಿಮಶ 9ಕರ ಕೊರತೆಯಿದೆ ಪುಸ್ತಕ ವಿಮರ್ಶೆಗೆ ಈ ಭಾಗದ ಲೇಖಕರು ತೊಡಗಿಸಿಕೊಳ್ಳಬೇಕೆಂದರು.
ಪುಸ್ತಕ ಕುರಿತು ಮಾತನಾಡಿದ ಸಾಹಿತಿ ಶ್ರೀಮತಿ ಕಾವ್ಯಶ್ರೀ ಮಹಾಗಾಂವಕರರು ಇಂದು ಗುರು-ಶಿಷ್ಯ ಪರಂಪರೆ ಸಂಗೀತ,ಚಿತ್ರಕಲೆಗಳಲ್ಲಿ ಕಾಣುತ್ತೇವೆ.ಶೈಕ್ಷ ಣಿಕ ವಲಯದಲ್ಲಿ ಕಾಣುವುದಿಲ್ಲ,ಆದರೆ ಇಲ್ಲಿಯ ಅಪ ವಾದದಂತೆ ಬಂದಿದೆ.ಗವಿಸಿದ್ಧಪ್ಪ ಅವರ ಸಾಹಿತ್ಯ ಅತ್ಯಂತ ಮೌಲಿಕವಾಗಿದೆ.ಅವರನ್ನು ಆಪ್ತಭಾವದಿಂದ ಗವಿ ಚಂದಿರ ಕಂಡರೆ;ವಿಮರ್ಶಾ ಸಿಂಚನದಲ್ಲಿ ಹಲವು
ಲೇಖಕರು ತಲಸ್ಪರ್ಶಿ ಅಧ್ಯಯನ ಮಾಡಿದ್ದಾರೆ. ಮಲ್ಲಯ್ಯ ನವರವನವ ಮಾಸದ ನೆನಪುಗಳು ಕಾವ್ಯ ಆಪ್ತತೆಯಿಂದ ಕೂಡಿದೆ ಎಂದರು.
ಅಧ್ಯಕ್ಷತೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ಮಾತನಾಡಿ ಗವಿಸಿದ್ಧಪ್ಪ ವಿದ್ಯಾರ್ಥಿದೆಸೆಯಿಂದಲೇ ಕ್ರಿಯಾಶೀಲರು,ಬರವಣಿಗೆ ಹಾಗೆ ನಾನು ಜಿಲ್ಲಾ ಕಸಾಪ ಅಧ್ಯಕ್ಷ ನಾದಾಗ ಕೋಶಾ ಧ್ಯಕ್ಷರಾಗಿದ್ದರೆಂದರು
ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ,ಕವಿ ಸಂಪಾದಕ ಡಾ.ಮಲ್ಲಯ್ಯ ಅತ್ತನೂರ, ದಸಾಪ ಜಿಲ್ಲಾಧ್ಯಕ್ಷ ಡಾ.ಸುನೀಲ ಜಾಬಾದಿ ಉಪಸ್ಥಿತಿ ಇದ್ದರು.ಶೋಭಾದೇವಿ ಚಕ್ಕಿ ಪ್ರರ್ಥನೆ ಗೀತೆ ಹಾಡಿದರು, ವಡ್ಡನಕೇರಿ ಪ್ರತಿಷ್ಠಾನ ಅಧ್ಯಕ್ಷ ಡಾ.ಶರಣ ಬಸಪ್ಪ ವಡ್ಡನಕೇರಿ ಸ್ವಾಗತಿಸಿದರು. ಪ್ರಾಸ್ತಾವಿಕ ಮಾತ ನ್ನು ಡಾ.ರಾಜಕುಮಾರ ಮಾಳಗೆ ಆಡಿದರು.ಡಾ.ಚಿದಾ ನಂದ ಕುಡ್ಡನ್ನ ವಂದಿಸಿದರು.
ರವೀಂದ್ರ ಕರ್ಜಗಿ,ಸುಬ್ಬರಾವ್ ಕುಲಕರ್ಣಿ,ಸಿದ್ದಪ್ಪ ತಳ್ಳಳ್ಳಿ,ಸಿದ್ಧರಾಮ ಹೊನ್ಕಲ್,ಪ್ರಭಾಕರ ಜೋಶಿ,ಮಹಿ ಪಾಲರೆಡ್ಡಿ,ಹಿರಪ್ಪ ಬರಗಾಲೆ,ಎ.ಕೆ.ರಾಮೇಶ್ವರ, ಪ್ರಭು ಖಾನಾಪುರೆ,ಬಿ.ಎಚ್.ನಿರಗುಡಿ,ಡಾ.ಸದಾನಂದ ಪೆರ್ಲ
ಸೂರ್ಯಕಾಂತ ಸೊನ್ನದ,ಧರ್ಮಣ್ಣ ಧನ್ನಿ,ಶಾಂತಾ ಪಸ್ತಾಪೂರ,ಸಿದ್ರಾಮ ಸರಸಂಬಿ,ಶಾಂತಕುಮಾರ ಪಾಟೀಲ, ಶರಣಗೌಡ ಪಾಟೀಲ,ಶಿವರಾಜ ಪಾಟೀಲ, ಪಾಳಾ,ಡಾ.ಚಿ.ಸಿ.ನಿಂಗಣ್ಣ,ಮಲ್ಲಮ್ಮ ಪಾಟೀಲ,ಸಿ.ಎ ಸ್.ಮಾಲಿಪಾಟೀಲ,ಡಾ.ಎಂ.ಬಿ.ಕಟ್ಟಿ,ಮಲ್ಲಿನಾಥ ನಿಂ ಬರ್ಗೆ,ರಾಜಕುಮಾರ ಧುಮ್ಮನಸೂರು,ಶಿವಾನಂದ ಹಿರೇಮಠ, ರವಿ ಗೌಡಗೇರಿ,ಮಾನಿಶಯ್ಯ ತುಗಾಲೆ, ಭಾಗ್ಯಶ್ರೀ,ಶ್ರೀ ಪತಿ ಸಖರಾಮ,ಡಾ.ಪೀರಪ್ಪ ಸಜ್ಜನ,ಶಾಮರಾವ್, ಡಾ.ಸಿದ್ದಪ್ಪ ಹೊಸಮನಿ,ಮುಂತಾದವರು ಭಾಗವಹಿಸಿದ್ದರು.