ಕಳಪೆ ಬೀಜ – ರಸಗೊಬ್ಬರ ಮಾರಾಟಗಾರರ ಬಗ್ಗೆ ದೂರು ನೀಡಿದ್ದಲ್ಲಿ ಕಾನೂನು ಕ್ರಮ : ಜಂಟಿ ಕೃಷಿ ನಿರ್ದೇಶಕ ಕೆ.ಹೆಚ್ ರವಿ
ಯಾದಗಿರಿ : ಮೇ 20 : ರೈತರು ಪ್ಯಾಕಿಂಗ್ ಇಲ್ಲದೆ ಇರುವ ಹತ್ತಿ, ಇತರೆ ಬೀಜಗಳನ್ನು ಖರೀದಿಸಬಾರದು,ಹಾಗೇನಾದರು ಹಳ್ಳಿಗಳಲ್ಲಿ ಪ್ಯಾಕಿಂಗ್ ಮತ್ತು ಲೆಬಲಿಂಗ್ ಇಲ್ಲದೆ ಲೂಸ್ ಬೀಜಗಳನ್ನು ಮಾರುವವರು ಸಿಕ್ಕಲ್ಲಿ ಅವರು ಕುರಿತು ಮಾಹಿತಿಯನ್ನು ಸಮೀಪದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗೆ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಕೆ.ಹೆಚ್ ರವಿ ಅವರು ತಿಳಿಸಿದರು.
ವೈಜ್ಞಾನಿಕ ಶಿಫಾರಸ್ಸಿಗಿಂತ ಹೆಚ್ಚು ಕೀಟನಾಶಕ ಮತ್ತು ರಸಗೊಬ್ಬರ ಬಳಸಬಾರದು, ಬಳಸಿದರೆ ಮಣ್ಣಿನ ಮೇಲೆ, ಬೆಳೆಯ ಮೇಲೆ ಹಾಗೂ ಮನುಷ್ಯನ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ. ಮತ್ತು ಕೀಟನಾಶಕ ಸಿಂಪಡಿಸುವಾಗ ಸುರಕ್ಷತೆಗೆ ಅದ್ಯತೆ ನೀಡಬೇಕು ಗರಿಷ್ಠ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಗೆ ದೂರು ನೀಡಬೇಕು ಎಂದು ತಿಳಿದರು.