ಅರಾಜಕತೆ ವಾತಾವರಣ ನಿರ್ಮಿಸಿದ್ದೇಕಾಂಗ್ರೆಸ್ ಸರ್ಕಾರದ ವರ್ಷದ ಸಾಧನೆ
ಬೀದರ್ : ಮೇ.20:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಮೇ 20ರಂದು ಒಂದು ವರ್ಷವಾಗಲಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಒಂದು ರೀತಿಯಲ್ಲಿ ಅರಾಜಕತೆಯ ಪರಿಸ್ಥಿತಿ ನಿರ್ಮಾಣವಾಗಿದೆ. “ಅರಾಜಕತೆ ಕರ್ನಾಟಕ”ದಂಥ ಪರಿಸ್ಥಿತಿ ನಿರ್ಮಾಣ ಮಾಡಿದ್ದೇ ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆಯಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ದೂರಿದ್ದಾರೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕೊಲೆ, ಸುಲಿಗೆ, ದೌರ್ಜನ್ಯ, ಅತ್ಯಾಚಾರ, ದರೋಡೆ, ನೈತಿಕ ಪೆÇಲೀಸಗಿರಿ ಸೇರಿದಂತೆ ಅಹಿತಕರ ಘಟನೆಗಳು ಹೆಚ್ಚಾಗಿವೆ. ಅಪರಾಧ ಪ್ರಕರಣಗಳು ಗಣನೀಯ ವೃದ್ಧಿಯಾದ ಬಗ್ಗೆ ಸರ್ಕಾರದ ಕ್ರೈಮ್ ವಿಭಾಗದ ವರದಿಗಳೇ ತಿಳಿಸುತ್ತಿವೆ. ಮೊದಲ ಬಾರಿ ರಾಜ್ಯದಲ್ಲಿ ಈ ಪರಿ ಆಡಳಿತ ವ್ಯವಸ್ಥೆ ಹಾಳಾಗಿದೆ. ಇದಕ್ಕೆಲ್ಲ ಸರ್ಕಾರದ ಹಾಗೂ ಕಾಂಗ್ರೆಸ್ಸಿಗರ ತುಷ್ಠೀಕರಣ ರಾಜಕೀಯವೇ ಕಾರಣವಾಗಿದೆ ಎಂದು ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.
ಹಲ್ಲೆ, ಕಗ್ಗೊಲೆಯಂತಹ ಘಟನೆಗಳಿಂದ ರಾಜ್ಯದ
ಮಹಿಳೆಯರಲ್ಲಂತೂ ಅಸುರಕ್ಷಿತ ಹಾಗೂ ಆತಂಕಮಯ ಭಾವನೆ ನಿರ್ಮಾಣವಾಗಿದೆ. ನಮ್ಮ ಹೆಣ್ಣುಮಕ್ಕಳು ಮನೆಯ ಹೊರಗಡೆ ಮುಕ್ತವಾಗಿ ತಿರುಗುವುದಕ್ಕಾಗಿ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊರಗೆ ಹೋದ ಮಹಿಳೆ ಸುರಕ್ಷಿತವಾಗಿ ರಾತ್ರಿ ಮನೆಗೆ ಬರುತ್ತಾರಾ? ಇಲ್ಲವಾ ಎನ್ನುವ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸಮಾಜಘಾತುಕ ಶಕ್ತಿಗಳಿಗೆ, ಕಿಡಿಗೇಡಿಗಳಿಗೆ ಕಾನೂನಿನ, ಪೆÇಲೀಸರ, ಸರ್ಕಾರದ ಸ್ವಲ್ಪವೂ ಭಯವೇ ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಹಾಕಲಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಭೀಕರ ಹತ್ಯೆ ಇಡೀ ರಾಜ್ಯವೇ ಬೆಚ್ಚಿ ಬೀಳಿಸಿದೆ. ಈ ಘಟನೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲೇ ಅಂಜಲಿ ಅಂಬಿಗೇರ ಎಂಬ ಯುವತಿಯ ಭೀಕರ ಕೊಲೆಯಾಗಿದೆ. ಮಡಿಕೇರಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ರುಂಡ-ಮುಂಡ ಕತ್ತರಿಸಿ ಹತ್ಯೆಗೈಯಲಾಗಿದೆ. ಮಡಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕಾರು ಹಾಯಿಸಿ ಕೊಲೆ ಮಾಡಲಾಗಿದೆ. ಗದಗನಲ್ಲಿ ಒಂದೇ ಪರಿವಾರದ ನಾಲ್ವರ ಕಗ್ಗೊಲೆಯಾಗಿದೆ. ಕಲಬುರಗಿಯಲ್ಲಿ ಇಬ್ಬರ, ಯಾದಗಿರಿಯಲ್ಲಿ ಒಬ್ಬರ ಹತ್ಯೆ ನಡೆದಿದೆ. ಬೆಂಗಳೂರಿನಲ್ಲಿ ಹಾಡಹಗಲೇ ಮರ್ಡರ್ ಗಳು ಆಗುತ್ತಿವೆ. ಕಲಬುರಗಿಯಲ್ಲಿ ಮನೆಗೆ ನುಗ್ಗಿ ಮಹಿಳೆಯರ ಮೇಲೆ ದೌರ್ಜನ್ಯವೆಸಗಿ, ಹಿಗ್ಗಾಮುಗ್ಗಾ ಥಳಿಸಲಾಗಿದೆ. ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡಿದ್ದಕ್ಕೆ ಕಮಲಾಪುರದಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೇಡಂನಲ್ಲಿ ಯುವಕರ ಮಮಾರ್ಂಗಕ್ಕೆ ಕರೆಂಟ್ ಶಾಕ್ ನೀಡಿ ದೌರ್ಜನ್ಯ ಎಸಗಲಾಗಿದೆ. ಬಸವಕಲ್ಯಾಣದಲ್ಲಿ ನೈತಿಕ ಪೆÇಲೀಸಗಿರಿ ಮಾಡಿ ವ್ಯಕ್ತಿ ಹಾಗೂ ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿದೆ. ಹೀಗೆ ಬೀದರ್ ನಿಂದ ಹಿಡಿದು ಚಾಮರಾಜನಗರವರೆಗೆ ರಾಜ್ಯದ ಎಲ್ಲೆಡೆ ವಿಚಿತ್ರವಾದ ವಾತಾವರಣ ನಿರ್ಮಾಣವಾಗಿದೆ. ಈ ಹತ್ತಾರು ಘಟನೆಗಳು ಕಾಂಗ್ರೆಸ್ ಸರ್ಕಾರದ ಸಾಲು ಸಾಲು ವೈಫಲ್ಯಗಳಿಗೆ ಸಾಕ್ಷಿಯಾಗಿವೆ ಎಂದು ಹೇಳಿದ್ದಾರೆ.
ಮೊದಲ ಬಾರಿ ಇಂಥ ಕೆಟ್ಟ ಹಾಗೂ ಅರಾಜಕತೆಯ ಪರಿಸ್ಥಿತಿ ನೋಡಿ ರಾಜ್ಯದ ಜನತೆ ತಲ್ಲಣಗೊಂಡಿದ್ದಾರೆ. ಒಂದೇ ವರ್ಷದಲ್ಲಿ ರಾಜ್ಯ ಸರ್ಕಾರಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಅತೀ ಕೆಟ್ಟ ಆಡಳಿತ ಕಂಡು ಜನರು ಭ್ರಮನಿರಸನಗೊಂಡಿದ್ದಾರೆ. ಎಂಥವರ ಕೈಗೆ ಅಧಿಕಾರ ನೀಡಿದ್ದೇವೆ ಎಂದು ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ. ಇಷ್ಟಾದರೂ ಈ ಸರ್ಕಾರ ಎಚ್ಚೆತ್ತುಕೊಂಡು ಕಠಿಣ ಕ್ರಮ ಕೈಗೊಳ್ಳುವ ಬದಲಾಗಿ ಏನೂ ಆಗಿಲ್ಲ ಎಂಬಂತೆ ವರ್ತಿಸಿ ಕುಂಭಕರ್ಣ ನಿದ್ರೆಗೆ ಜಾರಿದೆ. ಸಿಎಂ ಯಾರಾಗಬೇಕು? ಕುರ್ಚಿ ಯಾರು ಪಡೆಯಬೇಕು ಎಂಬುದರಲ್ಲಿ ಕಾಂಗ್ರೆಸ್ ನಾಯಕರು ಕಾಲ ಕಳೆಯುತ್ತಿದ್ದಾರೆ. ರಾಜ್ಯದಲ್ಲಿ ಹಲವರು ಸಿಎಂ ಇದ್ದಂತಿದೆ. ಒಬ್ಬರು ಸುಪರ್ ಸಿಎಂ ಇದ್ದರೆ, ಮತ್ತೊಬ್ಬರು ವೇಟಿಂಗ್ ಸಿಎಂ, ಮತ್ತೊಬ್ಬರು ಮತ್ತೊಂದು ಹೆಸರಿನ ಸಿಎಂ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ನಾಯಕರು, ಸರ್ಕಾರ ಕೇವಲ ತುಷ್ಠೀಕರಣ ರಾಜಕೀಯದಲ್ಲಿ ಮುಳುಗಿದೆ. ಒಂದು ಸಮುದಾಯದ ಹಿತ ಕಾಪಾಡುತ್ತ ಬಹುಸಂಖ್ಯಾತರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಈವರೆಗೆ ಬಾಲ ಮುದುಡಿಕೊಂಡು ಕುಳಿತಿದ್ದ ದುಷ್ಟರು, ಸಮಾಜಘಾತುಕರು, ಕಿಡಿಗೇಡಿಗಳು ಇದೀಗ ???ಕ್ಟಿವ್ ಮೋಡ್ ಗೆ ಬಂದಿದ್ದಾರೆ. ಇದರಿಂದಲೇ ಎಲ್ಲೆಡೆ ಅಹಿತಕರ ಘಟನೆ ಹೆಚ್ಚಾಗಿ ಸಮಾಜದಲ್ಲಿ ಅಶಾಂತಿ ವಾತವರಣ ನಿರ್ಮಾಣವಾಗಿದೆ. ಸರ್ಕಾರದ ತುಷ್ಠೀಕರಣ ರಾಜಕೀಯದಿಂದ ಕರ್ನಾಟಕದ ಜನರ ನೆಮ್ಮದಿಯೇ ಹಾಳಾಗಿದೆ. ಇದು ಶಾಂತಿಯುತ ನಾಡಿಗೆ ಅಶಾಂತಿಯ ನಾಡು ಎಂಬಂತೆ ಜನರು ಮಾತಾಡುವಂತಾಗಿರುವುದು ನೋವಿನ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಒಂದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಸರ್ಕಾರ ತನ್ನ ಐದು ಗ್ಯಾರಂಟಿ ಭರದಲ್ಲಿ ಅಭಿವೃದ್ಧಿಯೇ ಮರೆತಿದೆ. ಸರ್ಕಾರದ ಬಳಿ ಅಭಿವೃದ್ಧಿ ಕೆಲಸಕ್ಕೆ ಹಣವೇ ಇಲ್ಲ. ಸರ್ಕಾರದ ಖಜಾನೆ ಖಾಲಿ ಆಗಿದೆ. ಬರೀ ಸಾಲ ಮಾಡುತ್ತ ಜನರ ಮೇಲೆ ಸಾಲದ ಹೊರೆ ಹಾಕಲಾಗುತ್ತಿದೆ. ರಾಜ್ಯದಲ್ಲಿ ಭೀಕರ ಬರಗಾಲದ ಸ್ಥಿತಿಯಿದ್ದರೂ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸುವ ಗೋಜಿಗೆ ಹೋಗಿಲ್ಲ. ಬರ ಪರಿಹಾರ ಸಮರ್ಪಕವಾಗಿ ನೀಡಿಲ್ಲ. ಪರಿಹಾರ ಕೇಳಿದ್ದಕ್ಕೆ ಅಲ್ಪ ಹಣ ನೀಡಿ ರೈತರಿಗೆ ಅನ್ಯಾಯ
ಮಾಡಿದೆ ಎಂದು ಹೇಳಿದ್ದಾರೆ.
ಬೀದರ್ ಅಭಿವೃದ್ಧಿಗೂ ಬರ:
ಕಳೆದೊಂದು ವರ್ಷದಲ್ಲಿ ಬೀದರ್ ಜಿಲ್ಲೆಯಲ್ಲಿ ಸಹ ಯಾವುದೇ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಹಿಂದುಳಿದ ಜಿಲ್ಲೆಯ ಬಗ್ಗೆಯೂ ಸರ್ಕಾರ ಎಳ್ಳಷ್ಟು ಕಾಳಜಿ ವಹಿಸಿಲ್ಲ. ಜಿಲ್ಲೆಗೆ ಇಬ್ಬರು ಸಚಿವರಿದ್ದರೂ ಅಭಿವೃದ್ಧಿ ಕೆಲಸಗಳ ಕುರಿತು ಅವರ ಮೇಲೆ ಜನರು ಇಟ್ಟಿದ್ದ ನಿರೀಕ್ಷೆಗಳು ಹುಸಿಯಾಗಿವೆ. ಜಿಲ್ಲೆಗೆ ಒಂದಾದರೂ ದೊಡ್ಡ ಯೋಜನೆ ಬಂದಿಲ್ಲ. ಬೀದರ್ ನಗರದಲ್ಲಿ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕೀರ್ಣ ಸ್ಥಾಪನೆ ಹೇಳಿಕೆಯಲ್ಲೇ ಉಳಿದಿದೆ. ಬಜೆಟ್ ನಲ್ಲಿ ಘೋಷಿತ ಯೋಜನೆಗಳು ಸಹ ಭರವಸೆಯಾಗಿಯೇ ಉಳಿದಿವೆ.
ಜಿಲ್ಲೆಯ ಎಲ್ಲ 8 ತಾಲ್ಲೂಕು ಬರಪೀಡಿತ ಆಗಿವೆ. ಆದರೆ ರೈತರಿಗೆ ಸಮರ್ಪಕ ಪರಿಹಾರ ಸಹ ವಿತರಿಸಿಲ್ಲ ಎಂದು ಬೆಲ್ದಾಳೆ ದೂರಿದ್ದಾರೆ.