ಭಾರತದ ಸಂವಿಧಾನ ಜಗತ್ತಿನ ಶ್ರೇಷ್ಠ ಸಂವಿಧಾನ : ಚಿದಾನಂದ ಸವದಿ
ಅಥಣಿ :ಮೇ.20: ಡಾ.ಬಾಬಾಸಾಹೇಬ ಅಂಬೇಡ್ಕರ್ ಭಾರತದ ದೇಶದ ಆಸ್ತಿ ಅವರು ರಚಿಸಿದ ಭಾರತದ ಸಂವಿಧಾನ ಜಗತ್ತಿನ ಅತ್ಯಂತ ದೊಡ್ಡ ಮತ್ತು ಶ್ರೇಷ್ಠ ಸಂವಿಧಾನ.ಅವರು ರಚಿಸಿರುವ ಸಂವಿಧಾನದಿಂದ ಭಾರತವು ಜಗತ್ತಿನಲ್ಲಿಯೇ ಸುಭದ್ರ ಹಾಗೂ ಸಾರ್ವಭೌಮ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವಕ್ಕೆ ಸಂವಿಧಾನವೇ ಅಡಿಪಾಯ. ಸಂವಿಧಾನದಿಂದ ಭಾರತದ ಪ್ರಜಾಪ್ರಭುತ್ವದ ಬೇರುಗಳು ಬಲವಾಗಿವೆ. ಎಂದು ಕಾಂಗ್ರೆಸ್ ಯುವ ನಾಯಕ ಚಿದಾನಂದ ಸವದಿ ಹೇಳಿದರು.
ಅವರು ತಾಲೂಕಿನ ಕಟಗೇರಿ ಗ್ರಾಮದಲ್ಲಿ ಆಯೋಜಿಸಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರ 133 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಂವಿಧಾನ ಬರೆದು ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಲಪಡಿಸಿದ ಕೀರ್ತಿ ಡಾ. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಅವರ ಅವರ ತತ್ವ, ಸಿದ್ಧಾಂತಗಳು ಆಚಾರ ವಿಚಾರ ,ಆದರ್ಶ, ಶಿಕ್ಷಣ ,ಸಂಘಟನೆ ಹೋರಾಟ ನಮಗೆಲ್ಲರಿಗೂ ಪ್ರೆರಣೆಯ ಯಾಗಿವೆ’ ಅವರು ತಿಳಿಸಿದಂತೆ ನಾವೆಲ್ಲರೂ ಅರಿಕೆ ಮಾಡಿಕೊಳ್ಳಬೇಕು. ಅವರ ಜೀವನ ಚರಿತ್ರೆ ನಮಗೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ’ ಎಂದರು.
‘ತಮ್ಮ ಜೀವನಪೂರ್ತಿ ದೇಶದ ಏಳ್ಗೆ, ಸಮಾಜದ ಉನ್ನತಿಗಾಗಿ ಶ್ರಮಿಸಿದ ಅಂಬೇಡ್ಕರ್ ಅವರು ಉಜ್ವಲ ಭಾರತದ ಕನಸು ಕಂಡಿದ್ದರು. ಅಸ್ಪೃಶ್ಯತೆಯ ನಿವಾರಣೆ, ಅಸಮಾನತೆಯನ್ನು ತೊಡೆದು ಹಾಕುವುದು, ಎಲ್ಲರಿಗೂ ಶಿಕ್ಷಣ ಹಾಗೂ ಉದ್ಯೋಗದ ಸಮಾನ ಅವಕಾಶಗಳು ಸಿಗಬೇಕು ಎಂಬ ಮಹಾದಾಸೆಯನ್ನು ಬಾಬಾ ಸಾಹೇಬರು ಹೊಂದಿದ್ದರು ಎಂದರು.
ಈ ವೇಳೆ ಮುಖಂಡರಾದ ಸದಾಶಿವ ಬುಟಾಳಿ ಮಾತನಾಡಿ ವಿಶ್ವದ ಅತಿ ದೆuಟಿಜeಜಿiಟಿeಜಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಅಂಬೇಡ್ಕರ್‍ರವರು ಅತ್ಯುತ್ತಮ ಸಂವಿಧಾನ ರಚಿಸಿ ಭದ್ರ ಬುನಾದಿ ಹಾಕಿದ್ದಾರೆ ಎಲ್ಲಾ ಜಾತಿ ಧರ್ಮಗಳಿಗೆ ದೊರೆಯಬೇಕಾದ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ ಪ್ರತಿಯೊಬ್ಬ ಭಾರತೀಯರಿಗೆ ಸಮಾನ ಹಕ್ಕು ನೀಡಿ ,ಸಮಾನತೆಯ ಬಾಳ್ವೆಯ ಬದುಕಿನ ಮಾರ್ಗ ತೋರಿದ್ದಾರೆ ಅವರು ಹಾಕಿಕೊಟ್ಟ ಮಾರ್ಗ ನಮಗೆ ದಾರಿದೀಪವಾಗಿದೆ’ ಎಂದರು.
ಆನಂತರ ಶಿಕ್ಷಕರಾದ ಎಸ್ ಎನ್ ಕಾಂಬಳೆ ಮಾತನಾಡಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಅಸ್ಪೃಶ್ಯತೆಯ ಪರಿಕಲ್ಪನೆಯನ್ನು ತೊಡೆದು ಹಾಕಲು ಜೀವಮಾನದ ಹೋರಾಟವನ್ನು ಮಾಡಿದರು. ಅವರ ಬದುಕು. ನಮ್ಮೆಲ್ಲರಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಅಥಣಿ ಪುರಸಭೆ ಸದಸ್ಯ ಕಲ್ಲೇಶ ಮಡ್ಡಿ ವಹಿಸಿದ್ದರು.
ಈ ಸಂದರ್ಭದಲ್ಲಿ ಅಶೋಕ ಮಗದುಮ್, ಗ್ರಾಪಂ ಅಧ್ಯಕ್ಷ ಗುರುಪಾದ ಸವದಿ, ಬಾಪು ಗಸ್ತಿ, ಸುಧೀರ್ ಮಡ್ಡಿ, ಮಂಜು ಭಜಂತ್ರಿ. ಮುರುಗೇಶ ನಂದಿಕೋಲಮಠ. ಭರತೇಶ ಕಲಾಲ. ಸಿದ್ಧಾರ್ಥ ಮಡ್ಡಿ. ಶಿವಲಿಂಗ ಪೂಜಾರಿ, ಶಿವಪ್ಪ ಗಣಿ, ಬಸವರಾಜ ಸೊನ್ನದ, ಮುರಸಿದ್ದ ಹಾರೂಗೇರಿ , ಸಿದ್ಧಾರೂಢ ಕಾಂಬಳೆ, ಯಮನಪ್ಪ ಕಾಂಬಳೆ, ರಾಜು ಭಜಂತ್ರಿ, ಅಣ್ಣಪ್ಪ ಭಜಂತ್ರಿ, ಈಶ್ವರ ಭಜಂತ್ರಿ, ಯಲ್ಲಪ್ಪ ಕಾಂಬಳೆ, ಸಂಗಪ್ಪ ಕಾಂಬಳೆ, ಶೆಟ್ಟಪ್ಪ ಮಾಂಗ, ಮತ್ತಿತರರು ಇದ್ದರು.
ಡಾ ಅಂಬೇಡ್ಕರ್ ಅವರು ದೇಶಕ್ಕೆ ಕೊಡುಗೆಯಾಗಿ ನೀಡಿದ ಸಂವಿಧಾನದಿಂದ ಭಾರತ ವಿಶ್ವದಲ್ಲಿಯೇ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಿದೆ. ಸಂವಿಧಾನದಲ್ಲಿ ಸ್ವಾತಂತ್ರ್ಯ, ಸಮಾನತೆ, ಶೋಷಣೆ ವಿರುದ್ಧ ಹಕ್ಕು, ಧಾರ್ಮಿಕ ಹಕ್ಕು, ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಹಕ್ಕು ಹಾಗೂ ಸಂವಿಧಾನಿಕ ಪರಿಹಾರದ ಮೂಲಭೂತ ಹಕ್ಕುಗಳನ್ನು ನೀಡಿ ಆಧುನಿಕ ಭಾರತದ ನಿರ್ಮಾತೃರಾಗಿದ್ದಾರೆ