ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅವಶ್ಯಕ: ಎಸ್ಪಿ ಚೆನ್ನಬಸವಣ್ಣ ಲಂಗೋಟಿ
ಚಿಟಗುಪ್ಪ:ಮೇ.20:ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಪಟ್ಟಣದ ಪೊಲೀಸ್ ಠಾಣೆಗೆ ರವಿವಾರ ಭೇಟಿ ನೀಡಿ ಪರಿಶೀಲಿಸಿದರು. ಠಾಣೆ ಆವರಣದಲ್ಲಿದ್ದ ನಾನಾ ಪ್ರಕರಣಗಳ ಬೆ?ಕ್, ಇತರ ವಾಹನಗಳನ್ನು ಹಾಗೂ ಠಾಣೆಯ ಇತರ ಪ್ರಕರಣಗಳ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿ ಪಡೆದುಕೊಂಡರು. ಜತೆಗೆ ಪೊಲೀಸ್ ಸಿಬ್ಬಂದಿ ಕುಂದು ಕೊರತೆ ವಿಚಾರಿಸಿದರು. ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ, ತಾಲುಕಿನಲ್ಲೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಿದೆವೆ ಪಟ್ಟಣದಲ್ಲಿ ಸಂಚಾರಿ ಸಮಸ್ಯೆ ಹೋಗಲಾಡಿಸಲು ಶಾಶ್ವತ ಪರಿಹಾರ ಒದಗಿಸಲು ಸಾರ್ವಜನಿಕರ ಸಹಕಾರ ಅವಶ್ಯಕತೆಯಿದೆ ಎಂದು ಬೀದರ ಜಿಲ್ಲಾ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಲಂಗೋಟಿ ಪಟ್ಟಣದ ಪೆÇಲೀಸ್ ಠಾಣೆ ಪರಿವಿಕ್ಷಣೆ ಮಾಡಿ, ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದರು. ಪಟ್ಟಣದ ಎಲ್ಲಾ ಅಂಗಡಿ ಹಾಗೂ ಮನೆಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಲು ಕರೆ ನೀಡಿದರು. ಜಿಲ್ಲಾಧ್ಯಂತ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಲು ಜಿಲ್ಲಾಧ್ಯಂತ ಸಿಸಿ ಕ್ಯಾಮೆರಾ ಜಾಗೃತಿ ಅಭಿಯಾನ ಆರಂಭಿಸಲಗುವುದು ಎಂದು ತಿಳಿಸಿದರು. ಸಿಸಿ ಕ್ಯಾಮೆರಾ ಅಳವಡಿಸಿಕೊಂಡರೆ ವ್ಯಾಪಾರಸ್ಥರಿಗೂ ಸಾರ್ವಜನಿಕರಿಗೂ ತುಂಬಾ ಉಪಯುಕ್ತವಾಗುತ್ತದೆ ಯಾವುದೇ ಅನಾಹುತ ಜರುಗಿದರೆ ಅಪರಾಧಗಳು ಪತ್ತೆ ಹಚ್ಚಲು ಸಹಾಯವಾಗುತ್ತದೆ. ಬೀದರ್ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಪತ್ತೆ ಹಚ್ಚಿ ಕಳ್ಳತನ ವಸ್ತುಗಳು ಹಿಂದುರಿಸಲಾಗಿದೆ, ಪಟ್ಟಣದಲ್ಲಿ ವಾಹನ ಪಾಕಿರ್ಂಗ್ ಪುರಸಭೆ ಸಹಕಾರದೊಂದಿಗೆ ಪಾಕಿರ್ಂಗ್ ವ್ಯವಸ್ಥೆ ಮಾಡುತ್ತೇವೆ ಪಟ್ಟಣ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅವಶ್ಯವಾಗಿದೆ ಎಂದರು. ತಾಲೂಕಿನಲ್ಲಿ ಪರವಾನಿಗೆ ಪಡೆಯದೆ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ, ಹಾಗೂ ಟ್ರಾಕ್ಟರ್ ವಿಮೆ, ಲೈಸೆನ್ಸ್ ಇಲ್ಲದೆ ವಾಹನಗಳು ಓಡಾಡಿಸುತ್ತಿದ್ದರೆ, ಹಾಗೂ ಗ್ರಾಮೀಣ ಭಾಗದಲ್ಲಿ ಅಕ್ರಮ ಸಾರಾಯಿ ಮಾರಾಟ, ಮಟ್ಟಕ್ಕಾ, ಜೂಜಾಟ ರಾಜಾರೋಷವಾಗಿ ನಡೆವುತ್ತಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅಕ್ರಮವಾಗಿ ಯಾವುದೇ ಚಟುವಟಿಕೆಗಳು ನಡೆವುತ್ತಿದ್ದರೆ ಅವುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಸ್ಪಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಜೆ.ಎಸ್.ನ್ಯಾಮೇಗೌಡ, ಸಿಪಿಐ ಶ್ರೀನಿವಾಸ ಅಲ್ಲಾಪುರ್, ಪಿಎ??? ಬಾಷುಮಿಯಾ ಕೊಂಚೂರ್, ಎಎ???ಗಳಾದ ಭೀಮರಾವ ರಾಠೋಡ, ಆಕಾಶ ರೆಡ್ಡಿ, ಶೇಕ್ ಶಫಿಯೋದ್ದಿನ ವಿಜಯಕುಮಾರ್ ಬರ್ಮಾ ವೀರಪ್ಪಣ್ಣ ಮಲ್ಲಿಕಾರ್ಜುನ್ ಪಾಂಡುರಂಗ ಸಿದ್ದಾರೂಡ ಕರಣ್ ವಿಜಯ್ ಕುಮಾರ್ ಸಾರಿಕಾ ಪೂಜಾ. ಸೆರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.