ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ಮಟ್ಟ ವೃದ್ಧಿ
ಕರಜಗಿ :ಮೇ.20:ಕೆರೆಗಳನ್ನು ಅಭಿವೃದ್ದಿಪಡಿಸುವುದರಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಿ ನೀರಿನ ಸಮಸ್ಯೆ ದೂರವಾಗಲಿದೆ. ಕೆರೆಗಳನ್ನು ಪುನಶ್ಚೇತನಗೊಳಿಸುವ ದೃಷ್ಟಿಯಿಂದ ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ನಮ್ಮ ಊರು ನಮ್ಮ ಕೆರೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಗಣಪತಿ ಮಾಳಂಜಿ ಹೇಳಿದರು
ಅವರು ಅಫಜಲಪುರ.ತಾಲೂಕಿನ ಮಣ್ಣೂರ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಹತ್ತಿರ ನಮ್ಮ ಊರು ನಮ್ಮ ಕೆರೆ ಹೊಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ.ಪರಿಸರ ನಾಶ ಮಾಡದೆ ಗಿಡಗಳನ್ನು ನೆಟ್ಟರೆ ಉತ್ತಮ ಮಳೆಯಾಗಿ ಗ್ರಾಮಗಳು ಸಮೃದ್ದಿಯಾಗಲಿವೆ. ಜೊತೆಗೆ ಇದರಿಂದ ಜಲಮೂಲ ಸಂರಕ್ಷಣೆಯಾಗಲಿದೆ.ಜಲವಿಲ್ಲದಿದ್ದರೆ ಸಕಲ ಜೀವ ರಾಶಿಗಳು ಬದುಕಲು ಅಸಾಧ್ಯ. ಜಲಮೂಲ ರಕ್ಷಣೆಗೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು.ಪ್ರಸ್ತುತ ಯೋಜನೆಯ ಸಮುದಾಯ ಅಭಿವೃದ್ದಿ ವಿಭಾಗದಿಂದ ರಾಜ್ಯದಲ್ಲಿ 800 ಕೆರೆಗಳು, ಜಿಲ್ಲೆಯಲ್ಲಿ 32 ಹಾಗೂ ತಿಪಟೂರು ತಾಲೂಕಿನಲ್ಲಿ 9 ಕೆರೆಗಳ ಹೂಳೆತ್ತಿ ಕೆರೆಗಳನ್ನು ಪುನಶ್ಚೇತನ
ಗೊಳಿಸಲಾಗುತ್ತಿದೆ.ಇದರಿಂದ ರೈತಾಪಿ ವರ್ಗದವರಿಗೆ ಕೃಷಿಗೆ ಪೂರಕವಾದ ವಾತಾವರಣ ಕಲ್ಪಿಸಿಕೊಟ್ಟಂತಾಗಿದೆ. ಕೆರೆ, ಕುಂಟೆ, ಕಾಲುವೆಗಳು ಸರಿಯಾಗಿದ್ದರೆ ನೀರು ಸರಾಗವಾಗಿ ಹರಿಯುತ್ತದೆ
ಜಲಮೂಲದ ಸಂರಕ್ಷಣೆ ನಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಮ್ಮ ಪೂರ್ವಜರು ನಮಗೆ ಕೆರೆ-ಕಟ್ಟೆಗಳನ್ನು ನೀಡಿದ್ದು ಅವುಗಳನ್ನು ಹಾಳು ಮಾಡದೆ ಹೂಳು ತುಂಬದ ರೀತಿ ನೋಡಿಕೊಳ್ಳಬೇಕು.ಕಸ ಕಡ್ಡಿ, ಗಿಡಗಂಟೆಗಳು ಬೆಳೆಯದಂತೆ ನಿಗಾವಹಿಸಬೇಕು.ಈ ನಿಟ್ಟಿನಲ್ಲಿ ಗ್ರಾಮಸ್ಥರು ರೈತರು ಯುವಕರು ತಮ್ಮೂರಿನ ಕೆರೆ-ಕಟ್ಟೆಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು ಎಂದು ಸಲಹೆ ನೀಡಿದರು.
ತಾಲೂಕು ಯೋಜನಾಧಿಕಾರಿ ಶಿವರಾಜ ಆಚಾರ್ಯ ಮಾತನಾಡಿ, ಕೆರೆ-ಕಟ್ಟೆಗಳ ಸಂರಕ್ಷಣೆಯಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಲಿದೆ. ಪ್ರತಿ ಗ್ರಾಮದಲ್ಲಿಯೂ ಸಣ್ಣ ಪುಟ್ಟ ಕೆರೆ-ಕಟ್ಟೆಗಳಿದ್ದು, ಅವುಗಳು ಅಭಿವೃದ್ದಿಯಾಗದ ಕಾರಣ ಅಂತರ್ಜಲ ಮಟ್ಟ ಕುಸಿಯುತ್ತಿದೆ.ಇದನ್ನು ಮನಗಂಡ ಧರ್ಮಸ್ಥಳ ಪೂಜ್ಯರು ಕೆರೆಹೂಳೆತ್ತುವ ಕಾರ್ಯವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದಾರೆ. ತಾಲೂಕಿನಲ್ಲಿ ಈಗಾಗಲೇ ಹಲವು ಕೆರೆಗಳನ್ನು ಹೂಳೆತ್ತುವ ಮೂಲಕ ರೈತರಿಗೆ ಹಸ್ತಾಂತರ ಮಾಡಲಾಗಿದ್ದು, ಇದಕ್ಕೆ ಸ್ಥಳೀಯರ ಸಹಕಾರ ಮತ್ತು ಪೆÇ್ರೀತ್ಸಾಹ ಸಿಗಬೇಕು ಎಂದು ಹೇಳಿದರು
ಹಿರೇಜೇವರ್ಗಿಯ ಷ ಬ್ರ ಜಯಗುರುಶಾಂತಲಿಂಗಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ವೇದಮೂರ್ತಿ ಹಾಲಯ್ಯ ಹಿರೇಮಠ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಣುಕಾ ಚಂದ್ರಕಾಂತ ದೈತನ ಉಪಾಧ್ಯಕ್ಷೆ ಅನಿತಾ ಜಾನಕಿ ಸದಸ್ಯರಾದ ಬಸವರಾಜ ವಾಯಿ ದೇವಪ್ಪ ಲಾಳಸಂಗಿ ಮಣ್ಣೂರ ಕೆರೆ ಸಮೀತಿ ಅಧ್ಯಕ್ಷ ಮಾಳಪ್ಪ ಪೂಜಾರಿ ಉಪಾಧ್ಯಕ್ಷ ಮಹಾಂತೇಶ ಕರೂಟಿ ವಲಯ ಮೇಲ್ವಿಚಾರಕಿ ರೂಪಾ ಹೆಬ್ಬಾಳಟ್ಟಿ ಗುಂಡೇರಾಯ ಭೂಸನೂರ ಸುಮಂಗಲಾ ಶಿವೂರ ಜಯಶ್ರೀ ವಾಯಿ ಮಹಾದೇವಿ ರಾಂಪೂರ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಪುಂಡಲೀಕ ಕಟ್ಟಿ ಚಂದ್ರಕಾಂತ ದೈತನ ಸಿದ್ರಾಮಪ್ಪ ಹಿರೇಕುರುಬರ ವಿಶ್ವನಾಥ ಅಜಗೊಂಡ ಅಣ್ಣಾರಾವ ಮುಜಗೊಂಡ ಅಪ್ಪಾಸಾಬ ಹೊಸೂರಕರ ಸಂತೋಷ ಅಲ್ಲಾಪೂರ ಮಹಾದೇವ ರೂಪನೂರ ಸಿದ್ದಾರಾಮ ಬದನಿಕಾಯಿ ಸಿದ್ದಪ್ಪ ಹುಂಡೇಕಾರ ಸುರೇಶ ಮುಜಗೊಂಡ ಅಶೋಕ ನಾವದಗಿ ಸಂತೋಷ ಮುಜಗೊಂಡ ನಾಗಪ್ಪ ಕುಂಬಾರ ಭೌರಮ್ಮ ಲೋಹಾರ ಸುಜಾತಾ ಪತ್ತಾರ ಸೇರಿದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪದಾಧಿಕಾರಿಗಳು ರೈತರು ಗ್ರಾಮಸ್ಥರಿದ್ದರು