ಮಣ್ಣೂರಿನಲ್ಲಿ ಶ್ರೀ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ
ಕರಜಗಿ :ಮೇ.20:ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಮೇ 21 ರಿಂದ 26 ರ ವರೆಗೆ ಗ್ರಾಮ ದೇವತೆ ಶ್ರೀ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವಜರುಗಲಿದೆ.
21 ರಂದು ಸಂಜೆ ಶಿವಬಾಳನಗರದ ಭಕ್ತಾದಿಗಳಿಂದ ನಂದಿಕೋಲು ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ವೈಭವಗಳೊಂದಿಗೆ ನಡೆಯಲಿದೆ.22 ರಂದು ಶ್ರೀ ಯಲ್ಲಮ್ಮ ದೇವಿಯ ಬಾಸಿಂಗ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ವೈಭವಗಳೊಂದಿಗೆ ಸಂಚರಿಸಿ ರಾತ್ರಿ 9 ಗಂಟೆಗೆ ದೇವಿಯ ಮಂದಿರಕ್ಕೆ ಆಗಮಿಸುವುದು.ರಾತ್ರಿ 10 ಗಂಟೆಗೆ ಆಳಂದ ತಾಲೂಕಿನ ಮಾದನಹಿಪ್ಪರಗಾದ ಅಂಜಲಿಬಾಯಿ ಹಾಗೂ ಸಂಗಡಿಗರಿಂದ ಚೌಡಕಿ ಆಟ ಚೌಡಕಿ ಪದಗಳು ಜರುಗುವವವು.23 ರಂದು ಗುರುವಾರ ಪೌರ್ಣಮಿ ದಿವಸ ಬೆಳಿಗ್ಗೆ ಪಡಸಾವಳಗಿ ಶ್ರೀ ಷ ಬ್ರ ಶಂಭುಲಿಂಗ ಶಿವಾಚಾರ್ಯರಿಂದ ದೇವಿಯ ರುದ್ರಾಭಿಷೇಕ ಜರುಗುವುದು 7ಗಂಟೆಗೆ ದೇವಿಯ ವಸ್ತ್ರಾಭರಣ 9 ಗಂಟೆಯಿಂದ ದೇವಿಗೆ ನೈವೇದ್ಯ ಅರ್ಪಣೆ ಸಾಯಂಕಾಲ 4 ಗಂಟೆಗೆ ನವಿಲು ಕುಣಿತ ಕುದುರೆ ಕುಣಿತ ಕರಡಿ ಕುಣಿತ ಗೊಂಬೆ ಕುಣಿತ ಸೇರಿದಂತೆ ವಿವಿಧ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ ಉತ್ಸವ ಭೀಮಾ ನದಿಯಲ್ಲಿರುವ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಆಗಮಿಸಲಿದೆ.5 ಗಂಟೆಗೆ ಬಾಸಿಂಗ ಮೆರವಣಿಗೆಯೊಂದಿಗೆ ದೇವಿಯ ಪಲ್ಲಕ್ಕಿ ಸ್ವಾಗತಿಸುವುದು.7 ರಿಂದ ರಾತ್ರಿ 9 ಗಂಟೆಯವರೆಗೆ ಚಿತ್ರ ವಿಚಿತ್ರ ಮದ್ದು ಸುಡುವ ಕಾರ್ಯಕ್ರಮ ರಾತ್ರಿ 10–30ಕ್ಕೆ ಗೀಗೀ ಪದಗಳು ಹಾಗೂ ಗರುಡ ರಾಜ್ಯದಲ್ಲಿ ಘಟ ಸರ್ಪ ನಾಟಕ ಜರುಗುವುದು..24 ರಂದು ಶುಕ್ರವಾರ ಸಂಜೆ 5 ಗಂಟೆಗೆ ಸುಪ್ರಸಿದ್ಧ ಜಂಗೀ ಪೈಲ್ವಾನರಿಂದ ಕುಸ್ತಿಗಳು ಜರುಗುವವು.
ಜಾತ್ರೆಯ ಅಂಗವಾಗಿ ದಿನಾಂಕ 22 ರಿಂದ 26 ರ ವರೆಗೆ ಗ್ರಾಮದ ಹೊಸ ಪಾದಗಟ್ಟೆ ಹಾಗೂ ಬನ್ನಿ ಮಹಾಕಾಳಿ ದೇವಸ್ಥಾನದ ಹತ್ತಿರ ಜಾನುವಾರುಗಳ ಹಾಗೂ ಕುರಿಗಳ ಭವ್ಯ ಜಾತ್ರೆ ನಡೆಯುತ್ತದೆ.
ಜಾತ್ರೆಯಲ್ಲಿ ಉತ್ತಮ ಜಾನುವಾರುಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು
ಯಲ್ಲಮ್ಮ ದೇವಿಯ ಜಾತ್ರೆಗೆ ಆಗಮಿಸುವ ಭಕ್ತರಿಗೆ ಅಫಜಲ್ಪುರ ಕಲಬುರಗಿ ವಿಜಯಪುರ ಇಂಡಿ ಸೋಲಾಪುರ ಅಕ್ಕಲಕೋಟ ಸಿಂದಗಿ ಆಲಮೇಲ ಆಳಂದ ಮುಂಬಯಿ ರತ್ನಾಗಿರಿಯಿಂದ ನೇರ ಬಸ್ಸಿನ ಸೌಲಭ್ಯ ಇರುತ್ತದೆ.ಕಾರಣ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಗೆ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಯಲ್ಲಮ್ಮ ದೇವಿ ಚಾರಿಟೇಬಲ್ ಮತ್ತು ವೆಲ್ಫೇರ್ ಟ್ರಸ್ಟ್ ಕಮೀಟಿಯವರು ತಿಳಿಸಿದ್ದಾರೆ