ವೀರಬ್ರಹ್ಮೇಂದ್ರ ಸ್ವಾಮಿಯ ಆರಾಧನಾ ಮಹೋತ್ಸವ
ವಿಜಯಪುರ.ಮೇ.೨೦- ಭೂತ, ಭವಿಷ್ಯತ್ ಕಾಲಗಳನ್ನು ತಮ್ಮ ತಪಃ ಪ್ರಭಾವದಿಂದ ಅರಿತುಕೊಂಡು, ಜನರಲ್ಲಿ ಜಾಗೃತಿ ಮೂಡಿಸುವಂತಹ ಸಾವಿರಾರು ತ್ರಿಪದಿಗಳನ್ನು ರಚಿಸಿದ ಮಹಾನ್ ವ್ಯಕ್ತಿ ಶ್ರೀ ಪೋತಲೂರು ವೀರಬ್ರಹ್ಮೇಂದ್ರ ಸ್ವಾಮಿ ಎಂದು ಶ್ರೀ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಬಿ. ಎಸ್. ರಾಜಶೇಖರಾಚಾರಿ ತಿಳಿಸಿದರು.
ಅವರು ಪಟ್ಟಣದಲ್ಲಿರುವ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿ ದೇವಾಲಯದಲ್ಲಿ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಯವರಿಗೆ ವಿಶೇಷ ಪೂಜೆಯೊಂದಿಗೆ ದೇವಾಲಯದ ಸಂಸ್ಥಾಪಕರಾದ ಶ್ರೀ ಚಂದ್ರಾಚಾರ್ ರವರ ನೇತೃತ್ವದಲ್ಲಿ ನಡೆದ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು, ಮಾತನಾಡಿದರು.
ಶ್ರೀ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿ ಉತ್ಸವಮೂತಿ೯ಯನ್ನು ಮಂಗಳವಾದ್ಯ, ಸುಮಂಗಲಿಯರಿಂದ ಕಳಶ, ವೀರಗಾಸೆಕುಣಿತದೊಂದಿಗೆ ಊರಿನ ರಾಜಬೀದಿಗಳಲ್ಲಿ ಪಂಚಾಶ್ವ ಬೆಳ್ಳಿ ರಥದಲ್ಲಿ ಮೆರವಣಿಗೆ ಏಪ೯ಡಿಸಲಾಗಿತ್ತು
ಶ್ರೀ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಕಾಯ೯ದಶಿ೯ಗಳಾದ ಬಿ. ಪುರುಷೋತ್ತಮ್, ಖಜಾಂಚಿಗಳಾದ ಎಸ್. ಎಂ. ಗೋಪಾಲಕೃಷ್ಣಚಾಯ, ಸಮುದಾಯದ ಪ್ರಮುಖರಾದ ಮಾಳಿಗಾಚಾರ್, ಈಶ್ವರಾಚಾರಿ ಸಂಘದ ಪದಾಧಿಕಾರಿಗಳಾದ ಎ. ಸುದಶ೯ನ್, ನಾಗಭೂಷಣಚಾರ್, ಶ್ರೀಧರ್, ಮುರಳೀಧರ್, ನಂಜುಂಡಾಚಾರ್, ಪ್ರವೀಣ್ ಕುಮಾರ್, ಹರೀಶ್, ರಾಜೇಶ್ ಶ್ರೀ ಗಾಯತ್ರಿ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಮಹಿಳಾ ಪದಾಧಿಕಾರಿಗಳಾದ – ರಾಜೇಶ್ವರಿ, ಶೋಭಾದೇವಿ, ಶಶಿಕಲಾ, ಮಮತಾ ವೇಣು, ಸುಧಾ, ಕಮಲಮ್ಮ, ಪದ್ಮಮ್ಮ, ಅನುಸೂಯಮ್ಮ, ಸರೋಜಮ್ಮಮತ್ತು ಸಮುದಾಯವರು ಭಾಗವಹಿಸಿದ್ದರು.