ಮಹಾವೀರ ಚಿತ್ರಮಂದಿರದ ಬಳಿ ಸಂಭ್ರಮ
ಸಂಜೆವಾಣಿ ವಾರ್ತೆ
ಮಂಡ್ಯ.ಮೇ.20:- ಸಾಹಸಸಿಂಹ ದಿ. ವಿಷ್ಣುವರ್ಧನ್ ಅಭಿನಯದ ಶ್ರೀ ಕೃಷ್ಣ ನೀ ಬೇಗನೆ ಬಾರೋ ಸಿನಿಮಾ ಪುನರ್ ಬಿಡುಗಡೆ ಹಿನ್ನೆಲೆಯಲ್ಲಿ ವಿಷ್ಣು ಸೇನಾ ಸಮಿತಿ ಕಾರ್ಯಕರ್ತರು ಹಾಗೂ ವಿಷ್ಣುವರ್ಧನ್ ಅಭಿಮಾನಿಗಳು ನಗರದ ಮಹಾವೀರ ಚಿತ್ರಮಂದಿರದ ಬಳಿ ಸಂಭ್ರಮಾಚರಣೆ ರಂಗೇರಿತ್ತು.
ವಿಷ್ಣು ಸೇನಾ ಸಮಿತಿ ಜಿಲ್ಲಾಧ್ಯಕ್ಷ ಎಚ್.ಪಿ. ಸತೀಶ್ ಮಾತನಾಡಿ, ಡಾ. ವಿಷ್ಣುವರ್ಧನ್ ಅವರ ಅಮೋಘ ಅಭಿನಯ ನೀಡಿರುವ ಶ್ರೀ ಕೃಷ್ಣ ನೀ ಬೇಗನೆ ಬಾರೋ ಸಿನಿಮಾ ಮತ್ತೊಮ್ಮೆ ತೆರೆ ಕಂಡಿರುವುದು ವಿಷ್ಣು ಅಭಿಮಾನಿಗಳಿಗೆ ಖುಷಿ ನೀಡಿದೆ ಎಂದರು.
ವಿಷ್ಣು ಅವರ ಕಟೌಟ್‍ಗೆ ಅಭಿಮಾನಿಗಳ ಬಳಗದ ವತಿಯಿಂದ ಬೃಹತ್ ಹೂವಿನ ಹಾರ ಹಾಕಿ, ಸಿನಿಮಾ ನೋಡಲು ಬಂದ ಎಲ್ಲ ವಿಷ್ಣು ಅಭಿಮಾನಿಗಳು, ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಹಾಗೂ ಸಿಹಿ ವಿತರಿಸಲಾಯಿತು.
ಡಾ,ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಪ್ರತಾಪ್ ಸಿಂಹ, ಸಂಘದ ಸಹ ಕಾರ್ಯದರ್ಶಿ ಚೆನ್ನ ಸೇರಿದಂತೆ ನೂರಾರು ಮಂದಿ ಸಂಭ್ರಮೋತ್ಸವದಲ್ಲಿ ಪಾಲ್ಗೊಂಡಿದ್ದರು.