ಸಂವಿಧಾನ ಒಂದು ಹಣತೆಯಂತೆ, ಸದಾದಾರಿ ದೀಪವಾಗಿ ನಮ್ಮನ್ನು ಮುನ್ನಡೆಸುತ್ತದೆ: ಓಂ ಪ್ರಕಾಶ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.20- ಸಂವಿಧಾನ ನಮಗೆ ನಿಜರೂಪದಲ್ಲಿ ಮಾರ್ಗದಶಕನಿದ್ದಂತೆ. ಭಾರತದ ನಾಗರೀಕರಾದ ನಾವು ನಮ್ಮ ಸಂವಿಧಾನವನ್ನು ತಿಳಿಯುವ ಪ್ರಾಮಾಣಿಕ ಪ್ರಯತ್ನ ಮಾಡುವುದು ಅತ್ಯಂತ ಅವಶ್ಯಕವಾದದ್ದು ಎಂದು ಅಜೀಂ ಪ್ರೇಮ್ ಜಿ ಫೌಂಡೇಶನ್ ಓಂ ಪ್ರಕಾಶ್ ರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು, ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಬೆಂಗಳೂರು ಸಂಸ್ಥೆಯು ಬಿಳಿಗಿರಿರಂಗನ ಬೆಟ್ಟದಲ್ಲಿ ಶುಕ್ರವಾರ ಸಂಸ್ಥೆಯ ಸಿಬ್ಬಂದಿಗಳಿಗಾಗಿ ಆಯೋಜಿಸಲಾಗಿದ್ದ ಎರಡು ದಿನಗಳ ಸಂವಿಧಾನ ತಿಳಿಯೋಣ ಬಾ ಎಂಬ ನಮ್ಮ ಸಂವಿಧಾನ ಕುರಿತ ಎರಡು ದಿನಗಳ ಜಾಗೃತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿ, ಸಂವಿಧಾನವು ಅರಿವಿನ ಹಣತೆ ಇದ್ದಂತೆ, ಪ್ರತಿಯೊಬ್ಬರನ್ನು ಪ್ರಜ್ಞಾವಂತ ನಾಗರೀಕರನ್ನಾಗಿ ಸರಿದಾರಿಯಲ್ಲಿ ಬೆಳಕಿನೆಡೆಗೆ ಕೊಂಡೊಯ್ಯುವ ಒಬ್ಬಗುರುವಿನಂತೆ ಎಂದರು. ಸಂವಿಧಾನವನ್ನು ನಾವು ತಿಳಿಯುವು ದμÉ್ಟೀ ಅಲ್ಲ, ನಮ್ಮ ಸುತ್ತಲಿನ ಸಮಾಜದಲ್ಲಿ ಅದನ್ನು ತಿಳಿಸುವ ಪ್ರಯತ್ನಕೂಡ ಅತ್ಯವಶ್ಯಕ ಎಂದು ತಿಳಿಸಿದರು.
ಸ್ಥಳೀಯ ಸೋಲಿಗ ಆದಿವಾಸಿ ಸಮುದಾಯದ ಮುಖಂಡರುಗಳಾದ ದಾಸೇಗೌಡ, ಬಸವರಾಜು, ಕಾರನಕೇತೇಗೌಡ ಅಜೀಮ್ ಪ್ರೇಮ್ ಜಿ ಫೌಂಡೇಶನ್ನಿನ ಪ್ರತಿನಿಧಿಗಳು ಹಾಗೂ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನ ಸಹಾಯಕ ನಿರ್ದೇಶಕರಾದ ಡಾ. ತಾನ್ಯಾರವರು ಈ ಕಾರ್ಯಗಾರಕ್ಕೆ ಚಾಲನೆ ನೀಡಿದರು.
ಕಾರ್ಯಾಗಾರವನ್ನು ದ್ದೇಶಿಸಿ ಮಾತನಾಡಿದ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಬೆಂಗಳೂರು ಸಂಸ್ಥೆಯ ನಿರ್ದೇಶಕ, ಡಾ. ಪ್ರಶಾಂತ್‍ಎನ್. ಎಸ್‍ರವರು, ಸಂವಿಧಾನವನ್ನು ಸರಿಯಾಗಿ ತಿಳಿಯುವುದೆಂದರೇ ಕೇವಲ ಸಂವಿಧಾನದ ವಿವಿಧ ಭಾಗಗಳನ್ನು, ಅನುಚ್ಛೇದಗಳನ್ನು ತಿಳಿಯುವುದಲ್ಲ, ಅದರ ಹಿನ್ನೆಲೆ, ಉದ್ದೇಶ ಹಾಗೂ ಈ ಒಂದು ಮಹತ್ಕಾರ್ಯದ ಹಿಂದೆ ಶ್ರಮಿಸಿರುವ ಬಹಳಷ್ಟು ವ್ಯಕ್ತಿಗಳ ಶ್ರಮಾದಾನದ ಕುರಿತೂ ತಿಳಿದಾಗ ಸಂವಿಧಾನವನ್ನು ಸರಿಯಾಗಿ ಅರ್ಥೈಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದಲ್ಲಿತನಗಿರುವ ಹಕ್ಕುಗಳ ಬಗ್ಗೆಯμÉ್ಟೀ ತಿಳಿಯದೆ, ಮೂಲಭೂತ ಕರ್ತವ್ಯಗಳ ಬಗ್ಗೆಯೂ ತಿಳಿದು ತಮ್ಮ ದಿನನಿತ್ಯದ ಜೀವನದಲ್ಲಿ ಅವುಗಳ ಪಾಲನೆ ಮಾಡುವುದರಿಂದ ತನ್ನ ಹಾಗೂ ದೇಶದ ಹಿತಕಾಪಾಡಬಹುದಾಗಿದೆ, ಈ ನಿಟ್ಟಿನಲ್ಲಿ, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಸಿಬ್ಬಂದಿಗಳಿಗೆ ಈ ಕಾರ್ಯಗಾರ ಬಹಳಷ್ಟು ಪ್ರಯೋಜನಕಾರಿಯಾಗಲಿದೆ ಎಂದರು.
ಕಾರ್ಯಾಗಾರದಲ್ಲಿ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಬೆಂಗಳೂರು ಸಂಸ್ಥೆಯ ಚಾಮರಾಜನಗರ ಫೀಲ್ಡ್ ಸ್ಟೇಷನ್‍ನ ವಿವಿಧ ಯೋಜನೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ 80ಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.