ಜಂಬಗಿ, ಹುಣಶ್ಯಾಳ ಕೆರೆಗೆ ನೀರು ತುಂಬಲು ಆಗ್ರಹಿಸಿ 4 ನೇ ದಿನಕ್ಕೆ ಕಾಲಿಟ್ಟ ರೈತರ ಸತ್ಯಾಗ್ರಹ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.20: ಜಂಬಗಿ (ಆ), ಹುಣಶ್ಯಾಳ ಕೆರೆಗೆ ನೀರು ತುಂಬುವಂತೆ ಆಗ್ರಹಿಸಿ ಕಳೆದ 3 ದಿನಗಳಿಂದ ರೈತರು ಕೈಗೊಂಡ ಹೋರಾಟ ಭಾನುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಯಸಿಂಗ ರಜಪೂತ, ಚನ್ನಪ್ಪ ವಾಡೇದ, ಸಿದ್ದಪ್ಪ ಮಸೂತಿ, ಶರಣಪ್ಪ ಜಮಖಂಡಿ, ಅನಮೇಶ ಜಮಖಂಡಿ, ರಾಮಸಿಂಗ್ ರಜಪೂತ, ರಾಜಾರಾಮಸಿಂಗ್ ಡೋಣೂರ, ಮುತ್ತಪ್ಪ ನಾಯ್ಕೋಡಿ, ಕಿಸಾನಸಿಂಗ್ ರಜಪೂತ, ಶ್ರೀಶೈಲ ಮಸೂತಿ, ಭೀಮರಾಯ ಹಚಡದ, ಸಂಗಮೇಶ ಗುದಳೆ, ಲಾಳೇಮಶಾಕ ಮುಲ್ಲಾ, ಮಾಳಪ್ಪ ಪೂಜಾರಿ, ಅಶೋಕಸಿಂಗ್ ರಜಪೂತ, ಬಸವರಾಜ ಮಾದರ, ಭೀರಪ್ಪ ಗೇರಡೆ, ಭೀಮರಾಯ ಗೊರನಾಳ ಸೇರಿದಂತೆ ಅನೇಕರು ಇದ್ದರು.