ಭಾರತ ನಾಗರಿಕ ಸೇವಾ ಆಯೋಗ ಪರೀಕ್ಷೆ: ಸಾಧಕಿ ವಿಜೇತಾಗೆ ಸನ್ಮಾನ
ಸÀಂಜೆವಾಣಿ ವಾರ್ತೆ,
ವಿಜಯಪುರ,ಮೇ.20:ಭಾರತ ನಾಗರಿಕ ಸೇವಾ ಆಯೋಗ-2023ನೇ ಪರೀಕ್ಷೆಯಲ್ಲಿ ದೇಶಕ್ಕೆ 100ನೇ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತಾಲೂಕಿನ ಜಾಲವಾದ ಗ್ರಾಮದ ಹೆಮ್ಮೆಯ ಸಾಧಕಿ ವಿಜೇತಾ ಭೀಮಸೇನ ಹೊಸಮನಿ ಅವರಿಗೆ ವಿಜಯಪುರ ಜಿಲ್ಲೆಯ ವಿಪ್ರ ಬ್ರಾಹ್ಮಣ ವಿವಿಧ ಸಂಘಟನೆಯಿಂದ ವಿಜಯಪುರದ ಅನಂತಲಕ್ಷ್ಮೀ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅಭಿನಂದನಾ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಗಂವ್ಹಾರÀ ಮಠದ ಶ್ರೀ ಸದ್ಗುರು ಸೋಪಾನನಾಥ ಮಹಾಸ್ವಾಮಿಗಳು ವಹಿಸಿದ್ದರು. ಡಿಎಸ್‍ಪಿ ಬಸವರಾಜ ಯಲಗಾರ ಹಾಗೂ ಗ್ರಾಮೀಣ ಉಪ ಪೋಲಿಸ ಅಧೀಕ್ಷಕÀ ಜಿ.ಎಸ್. ತಳಕಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶೈಲಜಾ ಪಾಟೀಲ, ಡಾ. ಜಯಶ್ರೀ ಮುಂಡೇವಾಡಿ ಸೈನಿಕ ಶಾಲೆಯ ಪ್ರಾಂಶುಪಾಲೆ ಕ್ಯಾ.ಪ್ರತಿಭಾ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿಶ್ವನಾಥ ಕುಲಕರ್ಣಿ, ಬಿ.ಆರ್. ಪದಕಿ, ಕೃಷ್ಣಾಜಿ ಕುಲಕರ್ಣಿ, ಡಾ. ಶೈಲಾಸ ದೇಶಪಾಂಡೆ, ಮುಕುಂದ ಕುಲಕರ್ಣಿ, ಅರುಣ ಸೋಲಾಪುರಕರ, ಹರಿ ಗೊಳಸಂಗಿ, ಸಂಪತ ಕುಲಕರ್ಣಿ, ಪ್ರದೀಪ ಕುಲಕರ್ಣಿ, ಆನಂದ ಕುಲಕರ್ಣಿ ಹಾಗೂ ಮಹಿಳಾ ಮಂಡಳಿಯ ಜಯಶ್ರೀ ಕನ್ನೂರ, ಸವಿತಾ ಗಲಗಲಿ, ರಾಧಾ ಕುಲಕರ್ಣಿ, ಕೀರ್ತಿ ಕುಲಕರ್ಣಿ, ತುಳಸಾ ಕುಲಕರ್ಣಿ ವಿವಿಧ ಸಂಘಟನೆಯ ವಿಪ್ರ ಬಾಂಧವರು ಭಾಗವಹಿಸಿದ್ದರು.