ಶಿರೂರು: ಮೇ ೨೭ರಂದು    ೧೧ ಜೋಡಿ ಸಾಮೂಹಿಕ ವಿವಾಹ
ಸಂಜೆವಾಣಿ ವಾರ್ತೆ
ಕುಕನೂರು:ಮೇ,19-  ತಾಲ್ಲೂಕಿನ. ಶಿರೂರು ಗ್ರಾಮದ  ಅಂಬೇಡ್ಕರ್  ನಗರದ ಶ್ರೀ ದುರ್ಗಾ ದೇವಿ ಹಾಗು ಮಲಿಯಮ್ಮ ದೇವಿ ಮಾದಿಗ ಸಮಾಜ ಸೇವಾ ಅಭಿವೃದ್ಧಿ ಸಮಿತಿ ವತಿಯಿಂದ ಜಾತ್ರಾ ಮಹೋತ್ಸವ   ಹಾಗು ೨೫ ನೇ ವರುಷದ ೧೧ ಜೋಡಿ ಸಾಮೂಹಿಕ ವಿವಾಹ ಮೇ ೨೭ರಂದು ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ  ಮುಖಂಡ ಈಶಪ್ಪ ದೊಡ್ಡಮನಿ ಮಾತನಾಡಿ, ಶಿರೂರು ಗ್ರಾಮದಲ್ಲಿ ಕಳೆದ ೨೪ ವರುಷಗಳಿಂದ ಸಾಮೂಹಿಕ ವಿವಾಹ ಸಮಾರಂಭ ಹಾಗು ಡಾ. ಅಂಬೇಡ್ಕರ್ , ಜಗಜೀವನರಾಂ ಅವರ ಜಯಂತಿ ಕಾಯ೯ಕ್ರಮವನ್ನು ಆಚರಿಸುತ್ತಾ ಬಂದಿದ್ದೇವೆ, ಎಲ್ಲ ಧಮ೯ಧ  ಗುರು ಹಿರಿಯರ ಸಹಕಾರ ದಲ್ಲಿ ಈ ಕಾಯ೯ ನಡೆದಿದ್ದು, ಸಾಮೂಹಿಕ ವಿವಾಹ ಮೂಲಕ ಬಡವರಿಗೆ ಸಹಾಯಕ ವಾಗಿದೆ ,ಅನೇಕ ಹರ ಚರ ಗುರು ಗಳ ಸಾನ್ನಿಧ್ಯದಲ್ಲಿ ವಿವಾಹ ಹಾಗೂ ಮಹನೀಯರ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.  ಪೂಜ್ಯ ಗದಿಗೆಪ್ಪ ಅಜ್ಜ ನವರ ಮಾತನಾಡಿ, ಈ ವರುಷ ಮಳೆ ಬೆಳೆ ಚೆನ್ನಾಗಿದೆ ರೈತರು ಚಿಂತೆ ಮಾಡಬಾರದು, ಶಿರೂರು ಸಾಮೂಹಿಕ ವಿವಾಹ ಕಾರ್ಯಕ್ರಮ ಕ್ಕ ಎಲ್ಲರೂ ಬಂದು ಯಶಸ್ವಿ ಗೊಳಿಸಬೇಕೆಂದು ಕೋರಿದರು. ಮುಖಂಡರಾದ ಚನ್ನಬಸಪ್ಪ ಎಚ್ಚ್. ಹೊಳೆಯಪ್ಪನವರ, ಯಮನೂರಪ್ಪ ಕೊರಡಕೇರಿ, ಈರಪ್ಪ ನಡುಲಮನೀ, ಮುದೀಯಪ್ಪ ಕಡೆಮನಿ, ರಾಮಣ್ಣ ಹೊಸಮನಿ, ದುರಗಪ್ಪ ಕಡೆಮನಿ ಇತರರು    ಪಾಲ್ಗೊಂಡಿದ್ದರು.