ಕೂಡ್ಲಿಗಿ ಶ್ರೀಊರಮ್ಮದೇವಿಇದೇ ಶ್ರಾವಣಮಾಸಕ್ಕೆ ದೇವಸ್ಥಾನ ಲೋಕಾರ್ಪಣೆ. ಮೇ 2025ರಲ್ಲಿ ದೇವಿಯ ಅದ್ದೂರಿ ಜಾತ್ರೆಗೆ ಅಸ್ತು.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.19 :- :ಪಟ್ಟಣದ ಆರಾಧ್ಯ ದೈವ ಮತ್ತು ಗ್ರಾಮದೇವತೆ ಶ್ರೀಊರಮ್ಮದೇವಿಯ ನೂತನ ದೇವಸ್ಥಾನದ  ಕಾಮಗಾರಿಯು  ಅಂತಿಮ ರೂಪ ಪಡೆಯುತ್ತಿದ್ದು ಇದೇ ವರ್ಷದ ಶ್ರಾವಣಮಾಸಕ್ಕೆ ಬಹುತೇಕ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ ಹಾಗೂ ದೇವಿಯ ಅದ್ದೂರಿ ಜಾತ್ರೆಯನ್ನು ಮುಂದಿನ ವರ್ಷದ 2025ರ ಮೇ ತಿಂಗಳಲ್ಲಿ  ಅದ್ದೂರಿಯಾಗಿ ಆಚರಿಸಲು ಸಕಲ ಭಕ್ತ ಸಮೂಹದೊಂದಿಗೆ ಈಗಾಗಲೇ ಅಸ್ತು ಎಂದು ತೀರ್ಮಾನ ಮಾಡಲಾಗಿದೆ  ಎಂದು ಕೂಡ್ಲಿಗಿ ಶ್ರೀ ಊರಮ್ಮ ದೇವಿಯ ದೈವಸ್ಥರಲ್ಲಿ ಪ್ರಮುಖರಾದ ಕೆ ಹೆಚ್ ವೀರನಗೌಡ ಹಾಗೂ ಹಿ. ಮ. ಚಿದಾನಂದಸ್ವಾಮಿ ತಿಳಿಸಿದ್ದಾರೆ
ಪಟ್ಟಣದ ಶ್ರೀ ಊರಮ್ಮದೇವಿ ದೇವಸ್ಥಾನದ ನೂತನ ಕಟ್ಟಡದ  ಆವರಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಲಾಯಿತು. ನೂತನ ದೇವಸ್ಥಾನದ ಕಟ್ಟಡವು ಅಂದಾಜು 2ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಬಾಕಿ ಉಳಿದಿರುವ ದೇವಿಯ  ನೂತನ ದೇವಸ್ಥಾನ ಕಾಂಪೌಂಡ್ ನಿರ್ಮಾಣಸೇರಿ ನಾನಾ ಕಾಮಗಾರಿಗೆ ಸಂಪನ್ಮೂಲ ಸಂಗ್ರಹಿಸಬೇಕಿದೆ ಎಂದು ಊರಮ್ಮ ದೇವಿ ದೇವಸ್ಥಾನ ಮುಖ್ಯಸ್ಥ ಕೆ.ಎಚ್. ವೀರನಗೌಡ ಸೇರಿ ಪ್ರಮುಖರು ಅಭಿಪ್ರಾಯ ಮಂಡಿಸಿದರು.
2025 ಮುಂದಿನ ವರ್ಷ ನಡೆಯುವ ಜಾತ್ರೆಯ ಖರ್ಚಿಗೆ ಎಲ್ಲ ವಾರ್ಡ್ಗಳಲ್ಲೂ ದೇಣಿಗೆ ಸಂಗ್ರಹಿಸುವ ಕಾರ್ಯವನ್ನು ದೈವಸ್ಥರು ಸೇರಿ ದೇವಸ್ಥಾನ ಸಮಿತಿಯವರು ಮುಂದಾಗಬೇಕು ಎಂದು ಪ್ರಮುಖರು ತಿಳಿಸಿದರು. ಜಾತ್ರೆಯ ಖರ್ಚುಗಳಿಗೆ ಕೆಲವರು ತಮ್ಮ ಕೈಲಾದ ಸೇವೆ ಮಾಡುವುದಾಗಿ ಸಭೆಯಲ್ಲಿ ಹೇಳಿದರು.
ನೂತನ ದೇವಸ್ಥಾನದ ಗರ್ಭಗುಡಿಯ ಮುಂದಿನ ಬಾಗಿಲು, ಮುಖ್ಯಧ್ವಾರ, ಕಂಪೌಂಡ್ ಗೇಟ್, ಕಂಪೌಂಡ್ ಮೇಲೆ ಸುರಕ್ಷಿತವಾದ ಕಬ್ಬಿಣದ ಅಡ್ಡಪಟ್ಟಿ ಹಾಕುವುದು, ದೇವಸ್ಥಾನದ ಒಳಗೆ ಅಲಂಕೃತ ವಿದ್ಯುತ್ ದೀಪಗಳು, ಕರೆಂಟ್ ಹೋದರು ಲೈಟಿಂಗ್ ಹೋಗದಿರುವಂತೆ ಯುಪಿಎಸ್ ವ್ಯವಸ್ಥೆ, ದೇವಸ್ಥಾನದ ಹೊರಗೆ ಕಂಪೌಂಡ್ ಒಳಗೆ ಸುತ್ತಲೂ ಹಾನಗಲ್ ಕಲ್ಲುಗಳ ಹಾಸುವಿಕೆ ಸೇರಿದಂತೆ ಜಾತ್ರೆಯ ಕರಪತ್ರ ಹಂಚಿಕೆ, ದೇವಸ್ಥಾನದ ಮುಂದೆ ಕಲ್ಲಿನ ಆನೆಗಳ ನಿರ್ಮಾಣ ಮತ್ತು ದೇವಸ್ಥಾನ ಉದ್ಘಾಟನೆ ಸಂದರ್ಭದಲ್ಲಿ ಪೂಜಾ ಕೈಂಕಾರ್ಯಗಳ ಖರ್ಚುವೆಚ್ಚಗಳ ಬಗ್ಗೆ ಅನೇಕ ಭಕ್ತರು ಅದರ ವೈಯಕ್ತಿಕ ಜವಾಬ್ದಾರಿ ತೆಗೆದುಕೊಂಡಿದ್ದು ದೇವಸ್ಥಾನದ ಮುಖ್ಯಭಾಗವಾದ ಕಳಸವನ್ನು ದೇವಸ್ಥಾನದ  ದೈವಸ್ತರಿಂದ ನಿರ್ಮಾಣವಾಗಬೇಕು ಎನ್ನುವ ಹಾಗೂ ದೇವಸ್ಥಾನದ ಅಭಿವೃದ್ಧಿಯ ಇತರೆ ವಿಷಯಗಳ ಬಗ್ಗೆ ತೀರ್ಮಾನ ಮಾಡಲಾಯಿತು.
ದೇವಸ್ಥಾನ ಅಭಿವೃದ್ಧಿಗೆ ಪೌರಾಕಾರ್ಮಿಕರು ದೇಣಿಗೆ :   ಶ್ರೀ ಊರಮ್ಮ ದೇವಿಯ ನೂತನ ದೇವಸ್ಥಾನದ ಅಭಿವೃದ್ಧಿಗೆ ಕೂಡ್ಲಿಗಿ ಪಟ್ಟಣ ಪಂಚಾಯತಿಯ ಪೌರಾಕಾರ್ಮಿಕರು 66ಸಾವಿರ ರೂ ಹಣ ಸಂಗ್ರಹಿಸಿ ಇದೇ ಸಂದರ್ಭದಲ್ಲಿ ದೇವಸ್ಥಾನದ ದೈವಸ್ತರ ಕೈಗೆ ತಲುಪಿಸಿದರು. ಇದರಂತೆ ಅಮರದೇವರಗುಡ್ಡ, ಗೋವಿಂದಗಿರಿ ಗೊಲ್ಲರಹಟ್ಟಿ ಸೇರಿದಂತೆ ಇತರೆ ಗ್ರಾಮದ ಹಿರಿಯರು ಗ್ರಾಮದಿಂದ ದೇವಿಯ ದೇವಸ್ಥಾನ ಹಾಗೂ ಜಾತ್ರೆಗೆ ದೇಣಿಗೆ ನೀಡುವ ಭರವಸೆ ನೀಡಿದರು.
ಸಣ್ಣ ಕೊತ್ತಪ್ಪ, ಬಣಕಾರ ಮಂಜುನಾಥ, ಹಯವದನರಾವ್, ಕಾವಲ್ಲಿ ಶಿವಪ್ಪನಾಯಕ, ಉದಯಜನ್ನು, ಶೆಟ್ರು ಬಸವರಾಜ, ಬಂಗಾರು ಸೋಮಪ್ಪ, ಜಿಂಕಲ್ ನಾಗಮಣಿಲಕ್ಷ್ಮೀದೇವಿ, ಮಂಜುನಾಥ, ನಾಗರಾಜ ಭರಮಪ್ಪನವ‌ರ್, ಬಾಣದ ಮೂರ್ತಿ, ಕೆ.ಈಶಪ್ಪ, ದೇವಸ್ಥಾನದ ಅರ್ಚಕ ನಾಗರಾಜ ಬಡಿಗೇರ, ಎಸ್.ಸುರೇಶ್, ಟಿ.ಜಿ.ಮಲ್ಲಿಕಾರ್ಜುನಗೌಡ, ಬಾಣದ ಶಿವಶಂಕರ,
ಎಸ್.ದುರುಗೇಶ್, ಗಂಟಿ ರಾಘವೇಂದ್ರ ಶೆಟ್ಟಿ, ಸಿರಿಬಿ, ಡಾಣಿ ರಾಘವೇಂದ್ರ, ದುರುಗಪ್ಪ, ಚೌಡಪ್ಪ, ಗಣೇಶ, ಅಂಜಿನಿ, ವೆಂಕಟೇಶ,ಗುರುರಾಜ, ಮಂಜುನಾಥ ನಾಗರಾಜ, ರಾಘವೇಂದ್ರ,   ಸೇರಿದಂತೆ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮದ ಹಿರಿಯರು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.