ಕಾರಟಗಿ: ವಾಸವಿ ಜಯಂತಿ ಆಚರಣೆ
ಸಂಜೆವಾಣಿ ವಾರ್ತೆ
 ಕಾರಟಗಿ:ಮೇ:19: ಪಟ್ಟಣದ ನವಲಿ ರಸ್ತೆಯ ವಾಸವಿ ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆರ್ಯವೈಶ್ಯ ಸೇವಾ ಸಂಘ, ಶ್ರೀ ವಾಸವಿ ಯುವಜನ ಸಂಘ, ಶ್ರೀ ವಾಸವಿ ಮಹಿಳಾ ಮಂಡಳಿ ಹಾಗೂ ಶ್ರೀ ವಾಸವಿ ಭಜನಾ ಮಂಡಳಿ ವತಿಯಿಂದ ಕಾರಟಗಿ ಪಟ್ಟಣದಲ್ಲಿ ಶನಿವಾರ  ಹಮ್ಮಿಕೊಳ್ಳಲಾಗಿದ್ದ 30ನೇ ವರ್ಷದ ಶ್ರೀ ವಾಸವಿ ಜಯಂತ್ಯೋತ್ಸವ ಅಂಗವಾಗಿ ದೇವಸ್ಥಾನಕ್ಕೆ ತೆರಳಿದ  ಸಚಿವ ಶಿವರಾಜ್ ಎಸ್ ತಂಗಡಗಿಯವರು ವಾಸವಿ ದೇವಿ ದರ್ಶನ ಪಡೆದು ದೇವಿ ಕೃಪೆಗೆ ಪಾತ್ರರಾದರು ನಂತರ ಸಮಾಜದ ಬಂಧುಗಳಿಗೆ ಜಯಂತ್ಯೋತ್ಸವದ ಶುಭಾಶಯ ಕೋರಿದರು, ಶ್ರೀ ವಾಸವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ಜರುಗಿತು, ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಪಂಚಾಮೃತ ಅಭಿಷೇಕ ಪುಷ್ಪಲಂಕರ ವಾಸವಿ ಅಮ್ಮನವರಿಗೆ ಹೋಮ, ಪೂರ್ಣಹುತಿ ಮತ್ತು ಮಹಾ ಮಂಗಳಾರತಿ ನೆರವೇರಿಸಲಾಯಿತು, ನಂತರ ಗಂಗೆ ಸ್ಥಳ ಕರೆಬಸವೇಶ್ವರ ದೇವಸ್ಥಾನದಿಂದ ಕಳಸ ಕುಂಭದೊಂದಿಗೆ ಮೇರವಣಿಗೆ ನಡೆಯಿತು, ತದ ನಂತರ ಅನ್ನ ಸಂತರ್ಪಣೆ ಜರುಗಿತು, ದೇವಸ್ಥಾನದ ಅರ್ಚಕ ಪ್ರದೀಪ್ ಆಚಾರ್, ಆರ್ಯವೈಶ್ಯ ಸಮಾಜದ ಗೌರವಧ್ಯಕ್ಷ ಪ್ರಹ್ಲಾದ್ ಶ್ರೇಷ್ಟಿ ಅಧ್ಯಕ್ಷ ಗೋವಿಂದ ರಾಜ್ ಶ್ರೇಷ್ಟಿ,ಅನಂತಯ್ಯ ಶ್ರೇಷ್ಟಿ, ವಿರೇಶ್ ಶ್ರೇಷ್ಟಿ, ನಾಗರಾಜ್ ಶ್ರೇಷ್ಟಿ, ಆರ್ಯವೈಶ್ಯ ಯುವಕ ಸಂಘದ ನರಸಯ್ಯ ಶ್ರೇಷ್ಟಿ, ರಾಮಚಂದ್ರ ಶ್ರೇಷ್ಟಿ, ಲಕ್ಷ್ಮಿ ನಾರಾಯಣ ಶ್ರೇಷ್ಟಿ, ಗುರುರಾಜ್ ಶ್ರೇಷ್ಟಿ, ರಾಘವೇಂದ್ರ ಶ್ರೇಷ್ಟಿ ಇಲ್ಲೂರು, ಶರಣಪ್ಪ ಶ್ರೇಷ್ಟಿ ಯಾಡ್ಕಿ,ರಾಘವೇಂದ್ರ ಶ್ರೇಷ್ಟಿ ಗುಂಡೂರು,ವಾಸವಿ ಮಹಿಳಾ ಸಂಘದ ಸಾವಿತ್ರಿ ಚೆಳ್ಳೂರು,ಉಪಾಧ್ಯಕ್ಷೇ ವಿಜಯ ಲಕ್ಷ್ಮಿ ನಾಡoಗ್ ಇನ್ನಿತರರು ಭಾಗವಹಿಸಿದ್ದರು,