ರಿಯಲ್ ಎಸ್ಟೇಟ್ ಹಾವಳಿ ತಡೆಗಟ್ಟಲು ಹಸಿರು ವಲಯ ಘೋಷಣೆಗೆ ಆಗ್ರಹ
ಸಂಜೆವಾಣಿ ವಾರ್ತೆ     
 ಹಗರಿಬೊಮ್ಮನಹಳ್ಳಿ :ಮೇ.19 ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೃಷಿಗೆ ಯೋಗ್ಯವಾದ ಭೂಮಿಯನ್ನು ಭೂ ಪರಿವರ್ತನೆ ಹೆಸರಿನಲ್ಲಿ  ನಿವೇಶನ ಬಡಾವಣೆಗಳಾಗಿ ತಲೆ ಎತ್ತುತ್ತಿವೆ. ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ನಿವೇಶವನ್ನಾಗಿಸದೆ ಹಸಿರು ವಲಯವನ್ನಾಗಿ ಘೋಷಿಸಬೇಕು ಎಂದು ಅಹಿಂದ ವೇದಿಕೆಯ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ್ ಆಗ್ರಹಿಸಿದರು.     
ಪಟ್ಟಣದ ಆಡಳಿತ ಸೌಧದಲ್ಲಿ ಶನಿವಾರ ಅಹಿಂದ ವೇದಿಕೆಯ ಹೋರಾಟದ ನೇತೃತ್ವವಹಿಸಿ ಮಾತನಾಡಿದರು. ಪಟ್ಟಣಕ್ಕೆ ಹೊಂದಿ ಕೊಂಡಂತೆ ನೂರಾರು ಎಕರೆ ಕೃಷಿ ಭೂಮಿಯಲ್ಲಿ ಸಾವಿರಾರು ನಿವೇಶನಗಳಾಗಿವೆ. ರೈತರಿಗೆ ದುಪ್ಪಟ್ಟ ಹಣದ ಆಸೆ ತೋರಿಸಿ ಭೂಮಿಯನ್ನು ಕಬಳಿಸಿ  . ರಿಯಲ್ ಎಸ್ಟೇಟ್ ಹೆಸರಿನಲ್ಲಿ ಭೂ ಪರಿವರ್ತನೆ ಮಾಡದೆ ಕಮಿಷನ್ ಆಸೆಗೆ ಮಧ್ಯವರ್ತಿಗಳು ಪ್ರತಿ ತಿಂಗಳು ಕಂತುಗಳ ರೂಪದಲ್ಲಿ ನಿವೇಶನಗಳ ಹೆಸರಿನಲ್ಲಿ ಹಣವನ್ನು ಸಂಗ್ರಹಿಸುತ್ತಿದ್ದಾರೆ .ಸದಸ್ವತ್ವ ನೀಡಿ ತಿಂಗಳ ರೂಪದಲ್ಲಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಇದು ಕಾನೂನ ಬಾಹಿರ ಕೃಷಿ ಭೂಮಿಯನ್ನು ತೋರಿಸಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ವಿವೇಶನ ಕೊಡುವುದಾಗಿ ವಂಚನೆ ಮಾಡುತ್ತಿದ್ದಾರೆ. ತಾಲೂಕ ಕೇಂದ್ರದ ಸುತ್ತಮುತ್ತ 10 ಕಿ.ಮೀ ವ್ಯಾಪ್ತಿಯ ಕೃಷಿ ಭೂಮಿಯನ್ನು  ಹಸಿರು ವಲಯ ಎಂದು ಶೀಘ್ರವಾಗಿ ಘೋಷಿಸಬೇಕು.  ಹೀಗೆ ಬಿಟ್ಟರೆ ಇಡಿ ತಾಲೂಕಿನಲ್ಲಿ ಕೃಷಿ ಭೂಮಿಯನ್ನೇ ಹಾಳು ಮಾಡುತ್ತಾರೆ. ಇದರ ಬಗ್ಗೆ ಸರ್ಕಾರ ಮತ್ತು ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದರು.
 ನಿವೃತ್ತ ನೌಕರರ ಟಿ ವೆಂಕೋಬಪ್ಪ, ಶಾಬುದ್ದೀನ್ ಮಾತನಾಡಿದರು.
 ಮನವಿಯನ್ನು ಸ್ವೀಕರಿಸಿ ತಹಶೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ ಮಾತನಾಡಿ ಇದರ ಬಗ್ಗೆ ಜಿಲ್ಲಾಧಿಕಾರಿಗಳು ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಕೃಷಿ ಭೂಮಿಯನ್ನು ಭೂ ಪರಿವರ್ತನೆ ಮಾಡಲು ಬಿಡುವುದಿಲ್ಲ ಎಂದರು.
 ಈ ಸಂದರ್ಭದಲ್ಲಿ ಅಹಿಂದ ತಾಲೂಕ ಸಂಚಾಲಕ ಲಿಂಗರಾಜ್, ಮಂಜುನಾಥ್ ದೊಡ್ಡಬಸಪ್ಪ ದಾದಮ್ಮನವರ್ ಬಸವರಾಜ, ಸೊನ್ನದ ಪ್ರಭಾಕರ್ ಪೂಜಾರಿ ಸಿದ್ದಪ್ಪ, ಶಾಂತಪ್ಪ  ಕೆಂಚಪ್ಪ ದೊಡ್ಡಬಸವರಾಜ್, ನಾಗಪ್ಪ ಮೈಲಪ್ಪ ದುರುಗಪ್ಪ, ಕನಕಪ್ಪ ಉಮೇಶ ಜಗದೀಶ ಹನುಮಂತ ಎಂ ಶಿವರಾಜ್  ಇತರರಿದ್ದರು