ಮಹಿಳಾ ದೌರ್ಜನ್ಯದ ವಿರುದ್ದ ಕಠಿಣ ಕ್ರಮಕ್ಕೆ ಬಿಜೆಪಿ ಆಗ್ರಹ
(ಸಂಜೆವಾಣಿ ವಾರ್ತೆ)
ಬಳ್ಳಾರಿ:  ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜ್ಯನ್ಯ ಹಾಗೂ ಕೊಲೆ ಪ್ರಕರಣಗಳು ಹೆಚ್ಚಾಗಿದ್ದು ರಾಜ್ಯ ಸರ್ಕಾರದ ವೈಫಲ್ಯ, ಪೊಲೀಸ್ ಇಲಾಖೆಯ ಅಸಡ್ಡೆ ಹಾಗೂ ನಿರ್ಲಕ್ಷ್ಯತೆ ಹೆಚ್ಚಾಗಿ ಕಾಣುತ್ತಿದೆ ಅದಕ್ಕಾಗಿ ಬಿಗಿಯಾದ ಕಾನೂನು ಕ್ರಮ ಜರುಗಬೇಕೆಂದು ಬಿಜೆಪಿಯ ಮಹಿಳಾ ಮೋರ್ಚಾ ನಿನ್ನೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಹುಬ್ಬಳಿಯ ನೇಹಾ ಹಿರೇಮಠ್ ಹತ್ಯೆಯ ಬೆನ್ನಲೆ ಹುಬ್ಬಳಿಯಲ್ಲೇ ಅಂಜಲಿಯ ಹತ್ಯೆ ಹಾಗೂ ಕೊಡಗಿನ ಸೋಮವಾರಪೇಟೆಯ 16 ವರ್ಷದ ಅಪ್ರಾಪ್ತೆ ಮೀನಾಳ ಹತ್ಯೆ ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದೆ.
ರಾಜ್ಯ ಸರ್ಕಾರ ಈ ಕೂಡಲೇ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.