ಕಳೆದ ವರ್ಷದ ಬರ ಪರಿಹಾರದ ಹಣ ಖಾತೆಗೆ ಜಮಾ;   ರೈತರಲ್ಲಿ ಮೊಗದಲ್ಲಿ ಸಂತಸ
ಜಗಳೂರು.ಮೇ.೧೯; -: ಕಳೆದ ವರ್ಷ ಬರಕ್ಕೆ ತತ್ತರಿಸಿ ಹೋಗಿದ್ದ ಜಗಳೂರು ತಾಲೂಕು ಬರಪೀಡಿತ ಎಂದು ಘೋಷ ಣೆಯಾಗಿತ್ತು ಕಳೆದ ವರ್ಷ ರೈತರು ಬಿತ್ತಿದ್ದ ಬೆಳೆಗಳು ಮಳೆ ಕೈ ಕೊಟ್ಟ ಹಿನ್ನೆಲೆ ಯಲ್ಲಿ ಬೆಳೆಗಳು ಸಂಪೂರ್ಣ ಒಣಗಿ ಹೋಗಿದ್ದವು ಸಾಲ ಸೋಲ ಮಾಡಿ ಬೀಜ ಗೊಬ್ಬರ ಭೂಮಿಗೆ ಹಾಕಿದ್ದ ಬಂಡವಾಳ ರೈತರ ಕೈಗೆ ಸಿಗಲಿಲ್ಲ ಇದರಿಂದ ನೊಂದು ಬೆಂದು ಹೋಗಿದ್ದರು ಈ ಸನ್ನಿವೇಶದಲ್ಲಿ ಜಗಳೂರು ತಾಲೂಕಿನಲ್ಲಿ ಕುಡಿಯುವ ನೀರಿ ಗೆ ಹಾಹಾಕಾರ ಉಂಟಾಗಿತ್ತು ಜಲ ಪಾತಾಳ ಸೇರಿ ಹೋಗಿತ್ತು ಕೊರೋನದಿಂದ ತತ್ತರಿಸಿ ಹೋಗಿದ್ದ ತಾಲೂಕಿನ ಜನತೆಗೆ ಬರಗಾಲ  ಗಾಯದ ಮೇಲೆ ಬರೆ ಎಳೆದಂತಾಗಿತ್ತು ಕಳೆದ ಜನವರಿಯಲ್ಲಿ ಜಗಳೂರು ತಾಲೂಕಿನ ರೈತರಿಗೆ (ಫ್ರೂಟ್ಸ್ ಐ.ಡಿ) ಉಳ್ಳ ಎಲ್ಲಾ ರೈತರಿಗೆ ತಲಾ ಎರಡೆರಡು ಸಾವಿರ ರೂಪಾಯಿಗಳನ್ನು ರೈತರ ಖಾತೆಗಳಿಗೆ ನೇರ ಜಮಾ ಮಾಡಿದ್ದು ಇದೀಗ ರೈತರ ಖಾತೆಗೆ ಜಮೀನಿನಲ್ಲಾದ ನಷ್ಟ ಪರಿಹಾರವನ್ನು ಬಿಡುಗಡೆಗೊಳಿಸಿರುವುದು ರೈತರಲ್ಲಿ ಹೊಸ ಭರವಸೆಯನ್ನು ಉಂಟು ಮಾಡಿದೆ ಕಳೆದೆರಡು ವಾರಗಳಿಂದ ಸುರಿಯುತ್ತಿರುವ ಮಳೆಗೆ ಭೂಮಿ ತಂಪಾಗಿದೆ ರೈತರ ಚಿತ್ತ ಜಮೀನಿನತ್ತ ನೆಟ್ಟಿದೆ ಜಮೀನುಗಳಲ್ಲಿ ರಂಟೆ ಕುಂಟೆ ದೇಸಾಯಿಯ ಸಮರೋಪಾದಿ ಯಲ್ಲಿ ಸಾಗುತ್ತಿದೆ ಇನ್ಪುಟ್ ಸಬ್ಸಿಡಿ ಬರ ಪರಿಹಾರದ ಹಣ ಬೀಜ ಗೊಬ್ಬರಕ್ಕೆ ಅನುಕೂಲವಾಗಿರುವುದರಿಂದ ತಾಲೂಕಿನ ರೈತರು ಪುಳಕಿತರಾಗಿದ್ದಾರೆ ಕೆಲವರಿಗೆ ಬರ ಪರಿಹಾರ ಹಣ ಪಾವತಿ ಆಗಿಲ್ಲ ಎಂಬ ದೂರು ಕೇಳಿ ಬಂದಿದೆ ಆದರೆ ತಾಂತ್ರಿಕ ದೋಷ ಇರುವ ರೈತರಿಗೆ ಹಣ ಬಿದ್ದಿಲ್ಲ ಅದನ್ನು ಸರಿಪಡಿಸುತ್ತೇವೆ ಎನ್ನುತ್ತಾರೆ ಕಂದಾಯ ಇಲಾಖೆ ಅಧಿಕಾರಿಗಳು ಪಹಣಿ ಆಧಾರ್ ಕಾರ್ಡ್ ಲಿಂಕ್ ಇಲ್ಲದೆ ಇರುವುದರಿಂದ ಎಫ್.ಐ.ಡಿ ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಎನ್ ಪಿಸಿಐ ಮ್ಯಾಪಿಂಗ್ ಆಗದ ಕಾರಣ ಕೆಲವರ ಖಾತೆಗೆ ಹಣ ಜಮಾವಾಗಿಲ್ಲ ಇದರಿಂದಾಗಿ ರೈತರು ಇಲ್ಲಿನ ತಾಲೂಕು ಕಚೇರಿ ಮತ್ತು ಕೃಷಿ ಇಲಾಖೆಗೆ ದಾಂಗುಡಿ ಇಟ್ಟಿದ್ದಾರೆ ರಾಜ್ಯ ಸರ್ಕಾರ ಮೊದಲ ಕಂತಿನಲ್ಲಿ ಗರಿಷ್ಠ ರೂ.2000 ವರೆಗೆ ಮಾರ್ಗಸೂಚಿ ನ್ವಯ ಜಗಳೂರು ತಾಲೂಕಿನಲ್ಲಿ ರಾಜ್ಯ ಸರ್ಕಾರದ ಜಗಳೂರು 27263 ರೈತರಿಗೆ ರೂ.5,36,64,034, ಮೊದಲ ಕಂತಾಗಿ ಪಾವತಿಸಲಾಗಿದೆ.ಎರಡನೇ ಕಂತಿನಲ್ಲಿ ಎನ್‍ಡಿಆರ್‍ಎಫ್ ಮಾರ್ಗಸೂಚಿನ್ವಯ ಅರ್ಹರ ರೈತರಿಗೆ ಎರಡನೇ ಕಂತಾಗಿ ಇನ್ಪುಟ್ ಸಬ್ಸಿಡಿ ಜಗಳೂರು 24493 ರೈತರಿಗೆ ರೂ.19,29, 18,592,ಗಳನ್ನು ಪರಿಹಾರವನ್ನು ನೇರವಾಗಿ ರೈತರ ಖಾತೆಗೆ ಈಗ ಪಾವತಿಸಲಾಗಿದೆ. ಇನ್ನುಳಿದಂತೆ ತಾಂತ್ರಿಕ ಕಾರಣದಿಂದ ಪರಿಹಾರ ಬಾರದೆ ಇರುವ ರೈತರ ಎಫ್.ಐ.ಡಿ ನಂಬರ್ ಮತ್ತು ಪಹಣಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲಾಗುತ್ತಿದೆ ಬ್ಯಾಂಕ್ ಅಕೌಂಟ್ ಐಎಫ್‌ ಎಸ್‌ಸಿ ನಂಬರ್ ಎನ್ ಪಿಸಿಐ ಮ್ಯಾಪಿಂಗ್ ದೋಷವಿರುವ ರೈತರ ಮಾಹಿತಿಯನ್ನು ನಮ್ಮ ಗ್ರಾಮಲೆಕ್ಕಾಧಿಕಾರಿಗಳು ಮಾಹಿತಿಯನ್ನು ಸಂಗ್ರಹಿಸಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ವರದಿ ಕಳಿಸಿಕೊಡಲಾಗುತ್ತದೆ ಮೂರನೇ ಕಂತಿನಲ್ಲಿ ಇವರೆಲ್ಲರಿಗೂ ಹಣ ಸಂದಾಯವಾಗುತ್ತದೆ ಎಂದು ತಹಶೀಲ್ದಾರ್ ಚಂದ್ರ ಶೇಖರ್ ನಾಯ್ಕ್ ಸಂಜೆ ವಾಣಿ ದಿನಪತ್ರಿಕೆಗೆ ತಿಳಿಸಿದ್ದಾರೆ ಜಗಳೂರು ತಾಲೂಕಿನಲ್ಲಿ 52,000 ಹೆಕ್ಟರ್ ರೈತರು ಕೃಷಿಭೂಮಿ ಹೊಂದಿದ್ದು ಮುಂಗಾರು ಹಂಗಾಮಿಗೆ ಮೆಕ್ಕೆಜೋಳ.ಹತ್ತಿ. ತೊಗರಿ.ಸೂರ್ಯಕಾಂತಿ.ಜೋಳ.ರಾಗಿ ಸೇರಿದಂತೆ ಬಿತ್ತನೆ ಮಾಡಲು ರೈತರು ಈಗಾಗಲೇ ತಮ್ಮ ಜಮೀನನ್ನು ಸಿದ್ಧಪಡಿಸಿ ಕೊಂಡಿದ್ದಾರೆ ಕಸಬಾ ಬಿಳಿಚೋಡು ಸೊಕ್ಕೆ ಹೋಬಳಿಗಳಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದ ತಕ್ಷಣ ರೈತರಿಗೆ ವಿತರಣೆ ಸಕಲ ಸಿದ್ಧ ತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ತಿಳಿಸಿದ್ದಾರೆ.ತಾಲೂಕು ಕಚೇರಿ ಸಿಬ್ಬಂದಿಗಳು ಕೂಡ ರೈತರಿಗೆ ಅಷ್ಟೇ ರೀತಿ ಯಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಫ್.ಐ.ಡಿ ಹೊಂದಿರುವ ಎಲ್ಲಾ ರೈತರಿಗೆ ಪರಿಹಾರದ ಹಣ ಪಾವತಿಯಾ ದರೆ ಈ ವರ್ಷದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ರೈತರು.!