ಒಳ ಚರಂಡಿ ಚೇಂಬರ್ ನಿರ್ವಹಣೆ ಈರೀತಿ ಸರಿಯೇ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,19- ಈ ಚಿತ್ರದಲ್ಲಿರುವ ಒಳ ಚರಂಡಿಯ ಚೇಂಬರ್ ನ ಚಿತ್ರ ಗಾಂಧಿನಗರ ಪಸ್ಟ್ ಕ್ರಾಸ್ ನದು.  ಇಲ್ಲಷ್ಟೇ ಈ ರೀತಿ ಇದೆ ಎಂದು ಭಾವಿಸಿದರೆ ತಪ್ಪಾಗುತ್ತದೆ. ನಗರದ ಅನೇಕ ರಸ್ತೆಗಳಲ್ಲಿ ಈ ರೀತಿ ಯುಜಿಡಿ ಚೇಂಬರ್ ಗಳ ಕ್ಯಾಪನ್ನು ಸರಿಯಾಗಿ ಮುಚ್ಚಿದೇ ಇರುವುದನ್ನು ಕಾಣಬಹುದು.
ಈವರೆಗೆ ಹೀಗೆ ಇದ್ದರು ಚೇಂಬರ್ ನಿಂದ ಒಳಚರಂಡಿಯ ವಾಸನೆ ಹೊರಗೆ ಬರುತ್ತಿತ್ತು. ಆದರೆ ಇಗ ಮಳೆಗಾಲ ಆರಂಭವಾಗಿರುವುದರಿಂದ ಸರಿಯಾಗಿ ಮುಚ್ಚದ ಕ್ಯಾಪ್ ನಿಂದ ಮಳೆ ಬಂದಾಗ ಮಳೆ ನೀರಿನ ಜೊತೆ ಕಸ, ಮಣ್ಣು ಒಳ ಚರಂಡಿ ಸೇರಿ. ಚೇಂಬರ್ ಗಳು ಬ್ಲಾಕ್ ಆಗಲಿವೆ.
ಕೂಡಲೇ ಪಾಲಿಕೆ ಈ ರೀತಿ ಅರ್ಧಂಭರ್ದ ಮುಚ್ಚಿರುವ ಯುಜಿಡಿ ಚೇಂಬರ್ ಗಳ ಕ್ಯಾಪನ್ನು ಪ್ರಾಫರ್ ಆಗಿ ಮುಚ್ಚಿ ಆಗುವ ಸಮಸ್ಯೆ ನಿವಾರಿಸುವ ಕೆಲಸ ಮಾಡಬೇಕಿದೆ.