ಆಕ್ಸಪರ್ಡ ಪಾಟೀಲ್ ಶಾಲೆಯಲ್ಲಿ ಜೂನಿಯರ್‍ಜೀನಿಯಸ್ ಅವಾರ್ಡ ಕಾರ್ಯಕ್ರಮ
ಮುದ್ದೇಬಿಹಾಳ.ಮೇ 19: ತಾಲೂಕಿನ ಬಿದರಕುಂದಿ ಸಮೀಪವಿರುವ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ 5,6,7 ಹಾಗೂ 10 ನೇ ತರಗತಿ ಪ್ರವೇಶಾತಿಗಾಗಿ ವಿದ್ಯಾರ್ಥಿಗಳ ಜ್ಯೂನಿಯರ್ ಜೀನಿಯಸ್ ಅವಾರ್ಡ್ ಪರೀಕ್ಷೆಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ, ಆಕ್ಸ್‍ಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಅಮಿತಗೌಡ ಪಾಟೀಲ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಆಕ್ಸ್‍ಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಸದಾ ಮುಂದೆ ಇದೆ. ಆದರಿಂದಲೇ ವಿವಿಧ ಜಿಲ್ಲೆಗಳಿಂದ ನಾಗರಬೆಟ್ಟದಂತಹ ಕುಗ್ರಾಮವನ್ನು ನಮ್ಮ ಶಿಕ್ಷಣ ಸಂಸ್ಥೆ ನೋಡುವಂತೆ ಮಾಡಿದ್ದು ನಮ್ಮ ಭಾಗದ ಹೆಮ್ಮೆ ಇಂತಹ ಉತ್ತಮ ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆಗೆ ಬಂದು ಪ್ರವೇಶಾತಿ ಪಡೆಯುತ್ತಿರುವುದು ನಮ್ಮ ಹೇಮ್ಮೆಯ ವಿಷಯ ಎಂದ ಅವರು ನಾನಾ ಜಿಲ್ಲೆಗಳಿಂದ ಬಂದು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿರುವುದು ಸಂತಸ ತಂದಿದೆ. ಧಾರವಾಡ ಬಿಟ್ಟರೆ ಉತ್ತರ ಕರ್ನಾಟಕದಲ್ಲಿ ಮತ್ತೊಂದು ವಿದ್ಯಾಕಾಶಿ ಎನ್ನುವಂತೆ ನಾಗರಬೆಟ್ಟದ ಆಕ್ಸ್‍ಫರ್ಡ್ ಪಾಟೀಲ್ಸ್ ಶಾಲೆ ಎಂಬುವಂತೆ ನಮ್ಮ ಸಂಸ್ಥೆ ಮಾಡಿದೆ. ಕಳೆದ ವರ್ಷ ಹೇಳಿದಂತೆ ನಮ್ಮ ಶಿಕ್ಷಣ ಸಂಸ್ಥೆ 180 ಕ್ಕೂ ಅಧಿಕ ವಿದ್ಯಾರ್ಥಿಗಳು ನೀಟ್ ನಲ್ಲಿ ಸಾಧನೆ ಮಾಡಿದ್ದಾರೆ ಇದು ನಮ್ಮ ಎಲ್ಲಾ ಶಿಕ್ಷಕ ವೃಂದದ ಫಲ ಎಂದರು.ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ನೀಟ್ ನಲ್ಲಿ ಸಹಾಯ ಆಗುವ ನಿಟ್ಟಿನಲ್ಲಿ 5 ನೇ ತರಗತಿಯಿಂದಲೇ ಅದರ ಬಗ್ಗೆ ತಿಳುವಳಿಕೆ ನಿಡಲಾಗುತ್ತಿದೆ. ಇಡೀ ಕರ್ನಾಟವೇ ನಮ್ಮ ಶಾಲೆಯತ್ತ ತಿರುಗುವಂತೆ ಇಲ್ಲಿನ ಶಿಕ್ಷಕರು ಮಾಡಿದ್ದಾರೆ. ಈ ವರ್ಷ ಕೂಡ ಈ ಶಿಕ್ಷಣ ಸಂಸ್ಥೆಯಿಂದ 180 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ಗೆ ಆಯ್ಕೆಯಾಗುವಂತಹ ಉತ್ಕರ್ಷ ಶಿಕ್ಷಣ ಮಾಡಿದೆ ಇದು ನಮ್ಮ ಸಂಸ್ಥೆಯ ಸಾಧನೆಯಾಗಿದೆ.
ಶಿಕ್ಷಣಕ್ಕಾಗಿ ಮುದ್ದೇಬಿಹಾಳ ಪಟ್ಟಣದಿಂದ ನಾಗರಬೆಟ್ಟ ಗ್ರಾಮಕ್ಕೆ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು. ತಮ್ಮ ಮಕ್ಕಳ ಶಾಲೆಗೆ ಕಲಿಸಲು ದಿನಂಪ್ರತಿ ಪಾಲಕರಿಗೆ ಸಮಯದ ಸಮಸ್ಯೆ ಆಗುತ್ತಿತ್ತು. ಇದನ್ನರಿತು ನಮ್ಮ ಶಿಕ್ಷಣ ಸಂಸ್ಥೆ ಈ ವರ್ಷದಿಂದ ಪಟ್ಟಣದಲ್ಲಿಯೇ ಆಕ್ಸ್‍ಫರ್ಡ್ ಪಾಟೀಲ್ಸ್ ಸಂಸ್ಥೆ 10 ನೇ ತರಗತಿವರೆಗೂ ಶಾಲೆ ಆರಂಭ ಮಾಡಿದೆ ಎಂದು ವಿವರಣೆ ನೀಡಿದರು.ಈ ಸಂಧರ್ಭದಲ್ಲಿ ಜ್ಯೂನಿಯರ್ ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಸ್ಪರ್ಧೆಯಲ್ಲಿ 350 ಕ್ಕೂ ಅಧಿಕ 5,6,7 ಹಾಗೂ 10 ತರಗತಿ ಪ್ರವೇಶಾತಿಗಾಗಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. 10 ತರಗತಿ ಪ್ರವೇಶಕ್ಕೆ ಪ್ರಥಮ ಸ್ಥಾನವನ್ನು ಜೆ.ಎನ್.ವಿ ವಿಜಯಪುರ ಶಾಲೆಯ ಭರತ್ ಮಡಿಕೇಶ್ವರ, ದ್ವೀತಿಯ ಸ್ಥಾನವನ್ನು ಜಯಾ ಸಜ್ಜನ್, ತೃತೀಯ ಸ್ಥಾನವನ್ನು ಪವಿತ್ರಾ ಕೊಣ್ಣೂರ ತೆಗೆದುಕೊಂಡು ನಗದು ಹಣದ ಜತೆಗೆ ಶಿಷ್ಯವೇತನಕ್ಕೆ ಭಾಜನರಾದರು.
5 ತರಗತಿ ಪ್ರವೇಶಕ್ಕೆ 5 ವಿದ್ಯಾರ್ಥಿಗಳು, 6 ತರಗತಿ ಪ್ರವೇಶಕ್ಕೆ 6 ವಿದ್ಯಾರ್ಥಿಗಳು, 7 ತರಗತಿ ಪ್ರವೇಶಾತಿಗೆ 3 ವಿದ್ಯಾರ್ಥಿಗಳು ಶಿಷ್ಯವೇತನದ ಹಾಗೂ ನಗದು ಬಹುಮಾನವನ್ನು ಗಿಟ್ಟಿಸಿಕೊಂಡರು.
ಶಿಕ್ಷಕ ಎಸ್.ಬಿ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಡಿ.ಮುಲ್ಲಾ, ಶಿವಾನಂದ ಮೇಟಿ, ಮಲ್ಲು ಸಿದರೆಡ್ಡಿ ಸಿಂಧನೂರ, ಮಹಾಂತೇಶ ಸಿದರೆಡ್ಡಿ, ಪಾಟೀಲ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳಾದ ರಾಜಶೇಖರ ಹಿರೇಮಠ, ಶಿವರಾಜ ಗುರುರಾಜ್ ಕನ್ನೂರ , ಇಸ್ಮಾಯಿಲ್ ಮನಿಯಾರ, ದರ್ಶನಗೌಡ ಪಾಟೀಲ್, ಸಂದೀಪ ಘೋರ್ಪಡೆ, ಆನಂದ ನಾವಿ, ಸುನೀಲ ನಾಯಕ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗಿಯಾದರು.