ನಂದಿಕೂರದಲ್ಲಿ ಕಡಕೋಳ ಮಡಿವಾಳೇಶ್ವರ ಪುರಾಣ
ಕಲಬುರಗಿ,ಮೇ 19: ತಾಲೂಕಿನ ನಂದಿಕೂರ ಗ್ರಾಮದಲ್ಲಿ ಆರಾಧ್ಯ ದೇವತೆ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವದ ಅಂಗವಾಗಿ ಮೇ 17 ರಿಂದ ಆರಂಭವಾದ ಕಡಕೋಳ ಮಡಿವಾಳೇಶ್ವರರ ಪುರಾಣವು ಮೇ 27 ರವರೆಗೆ ಪ್ರತಿದಿನ ಸಂಜೆ 7.30 ರಿಂದ 10.30 ರವರೆಗೆ ಚಿನ್ಮಯಗಿರಿಯ ಕಾಯಕ ಯೋಗಿ ಸಿದ್ಧರಾಮ ಶಿವಾಚಾರ್ಯರ ಸಾನಿಧ್ಯದಲ್ಲಿ ಮಹಾತಪಸ್ವಿ ಗುರು ಮಹಾಂತೇಶ್ವರ ಮಠದ ನೂತನ ಪೀಠಾಧಿಪತಿ ವೀರಮಹಾಂತೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ನಡೆಯಲಿದೆ.
ಗೊಬ್ಬುರ ಶಂಭುಲಿಂಗಯ್ಯ ಶಾಸ್ತ್ರೀಗಳು ಪುರಾಣ ನಡೆಸಿಕೊಡುವರು.ಗವಾಯಿ ಸಂತೋಷಕುಮಾರ ಸಿಂದಗಿ, ಯೋಗಿರಾಜ ಜಿ. ಮಠ ಕಡಣಿ,ಸುರೇಶ ಅಳಂದ ಅವರು ಸಂಗೀತ ಸೇವೆ ನೀಡುವರು.ಮೇ. 27 ರಂದು ಬೆಳಗ್ಗೆ 11.30 ಕ್ಕೆ ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಅವರಿಂದ ಮುತ್ತೈದಿಯರಿಗೆ ಉಡಿತುಂಬುವ ಕಾರ್ಯಕ್ರಮ ನೆರವೇರುವದು ಎಂದು ಸುಕ್ಷೇತ್ರ ನಂದಿಕೂರ ಸಮಸ್ತ ಸದ್ಭಕ್ತ ಮಂಡಳಿಯವರು ತಿಳಿಸಿದ್ದಾರೆ.