ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ
ವಿಜಯಪುರ,ಮೇ.19:ಕಲ್ಲಿನಿಂದ ಜಜ್ಜಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಎಪಿಎಂಸಿ ಮೇಕೆ ಮಾರುಕಟ್ಟೆಯ ಬಳಿ ನಡೆದಿದೆ.
ರೋಹಿತ್ ಸುಭಾಷ ಪವಾರ (22) ಕೊಲೆಯಾದ ಯುವಕ. ವಿಜಯಪುರ ನಗರದ ಕಂವಾರ ಓಣಿಯ ನಿವಾಸಿ ರೋಹಿತ್ ನನ್ನುಕೊಲೆ ಮಾಡಿ ಮುಳ್ಳುಕಂಟಿಯಲ್ಲಿ ಶವ ಬಿಸಾಡಲಾಗಿದೆ.
ಸ್ಥಳದಲ್ಲಿ ಬಿಯರ್ ಬಾಟಲ್ ಚಿಪ್ಸ್ ಪ್ಯಾಕೇಟ್ ಪತ್ತೆಯಾಗಿದ್ದು, ಕುಡಿದ ಮತ್ತಿನಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಆತನ ಪರಿಚಯಸ್ಥರೇ ಈ ಕೊಲೆ ಮಾಡಿರಬಹುದು ಎಂಬ ಸಂಶಯ ಕೂಡಾ ವ್ಯಕ್ತವಾಗಿದೆ.
ಕೊಲೆಯಾದ ರೋಹಿತ್ ನ ಸ್ನೇಹಿತ ಖಾಲಿದ್ ಇನಾಂದಾರ್ ರೋಹಿತ್ ಪೆÇೀಷಕರಿಗೆ ನಿನ್ನೆ ತಡರಾತ್ರಿ 2.21 ಕ್ಕೆ ಕರೆ ಮಾಡಿ ರೋಹಿತ್ ಕೊಲೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕರೆ ಅನ್ವಯ ರೋಹಿತ್ ಮನೆಯವರು ಆತನಿಗಾಗಿ ಹುಡುಕಾಡಿದ್ದರು.
ಖಾಲೀದ್ ಮನೆಗೆ ಹೋದರೂ ಅಲ್ಲಿರಲಿಲ್ಲ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ನಂತರ ರೋಹಿತ್ ಗಾಗಿ ಪೆÇೀಷಕರು ಹುಡುಕಾಡಿದಾಗ ಆತನ ಶವ ಎಪಿಎಂಸಿ ಆವರಣದಲ್ಲಿ ಕಂಡು ಬಂದಿದೆ.
ಕುಟುಂಬಸ್ಥರಿಂದ ಎಪಿಎಂಸಿ ಪೆÇಲೀಸರಿಗೆ ಮಾಹಿತಿ ನೀಡಲಾಯಿತು. ಆಗ ತಕ್ಷಣ ಕಾರ್ಯ ಪ್ರವೃತ್ತರಾದ ಪೆÇಲೀಸರು ಸ್ಥಳಕ್ಕೆ ಧಾವಿಸಿದರು.
ವಿಜಯಪುರ ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರೆ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ್ದಾರೆ.
ಎಪಿಎಂಸಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.