ಬಿಎಲ್ಡಿಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೇ 22ರಿಂದ 25ರವರೆಗೆ ತಾಂತ್ರಿಕ ಸಪ್ತಾಹ
ವಿಜಯಪುರ,ಮೇ.19: ಇಲ್ಲಿನ ಪ್ರತಿಷ್ಠಿತ ಬಿಎಲ್‍ಡಿಇ ಸಂಸ್ಥೆಯ ವಚನ ಪಿತಾಮಹ ಡಾ .ಫ.ಗು. ಹಳಕಟ್ಟಿ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಮೇ.22 ರಿಂದ 25 ರವರೆಗೆ ತಾಂತ್ರಿಕ ಸಪ್ತಾಹ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ. ವಿ.ಜಿ. ಸಂಗಮ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಾಂತ್ರಿಕ ಸಪ್ತಾಹ ಕುರಿತು ಮಾಹಿತಿ ನೀಡಿದ ಅವರು, ನಮ್ಮ ಸಂಸ್ಥೆಯು ಓಪನ್ ಡೇ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಂಡು ಬರುತ್ತಿದೆ. ಈ ಓಪನ್ ಡೇ ಕಾರ್ಯಕ್ರಮದಲ್ಲಿ ಕೆಎಸ್‍ಸಿಎಸ್‍ಟಿ ಪ್ರಾಯೋಜಕತ್ವ ಪಡೆದ 14 ಪ್ರಾತ್ಯಕ್ಷಿಕೆಗಳ ಜೊತೆಗೆ ಇತರ 187 ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಗುವುದು. ಇದರಲ್ಲಿ ವಿವಿಧ ವಿಭಾಗಗಳ ಪದವಿಪೂರ್ವ ಸ್ನಾತಕೋತ್ತರ, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಠ್ಯಕ್ರಮದ ಭಾಗವಾಗಿ ಪ್ರಾತ್ಯಕ್ಷಿಕೆಗಳನ್ನು ತಯಾರಿಸಿರುತ್ತಾರೆ. ಈ ಪ್ರಾತ್ಯಕ್ಷಿಕೆಗಳನ್ನು ವಿಜಯಪುರ ನಗರದ ಪ್ರೌಢಶಾಲೆ, ಪಿ.ಯು. ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರು ಮತ್ತು ಸಾರ್ವಜನಿಕರಿಗೆ ಪ್ರದರ್ಶಿಸಲಾಗುವದು ಎಂದರು.
ಈ ಕಾರ್ಯಕ್ರಮಕ್ಕೆ ಬೆಳಗಾವಿಯ ಕ್ವಿಸ್ಟ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಪ್ರಶಾಂತ ಮರಿಕಟ್ಟಿ ಚಾಲನೆ ನೀಡಲಾಗಿದ್ದು, ಈ ಪ್ರಾತ್ಯಕ್ಷಿಕೆಯಲ್ಲಿ ನಮ್ಮ ಮಹಾವಿದ್ಯಾಲಯದಲ್ಲಿ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರೂಪಿಸಿದ 201 ಪ್ರಾತ್ಯಕ್ಷಿಕೆಗಳು ಪ್ರದರ್ಶನಗೊಳ್ಳಲಿವೆ ಎಂದರು.
ಪ್ರಾತ್ಯಕ್ಷಿಕೆಗಳನ್ನು ನಾವಿನ್ಯತೆ, ಸಾಮಾಜಿಕ ಕಾಳಜಿ, ಪರಿಸರ, ಅಪ್ಲಿಕೇಷನ್ ವಿಭಾಗಗಳಾಗಿ ವಿಂಗಡಿಸಲಾಗಿದೆ. ಬÉೈಸಿಕಲ್ ಚಾಲಿತ ನೀರಿನ ಶುದ್ಧೀಕರಣ ವ್ಯವಸ್ಥೆಯ ಅಭಿವೃದ್ದಿ ಮತ್ತು ತಯಾರಿಕೆ, ಎಲೆಕ್ಟ್ರಿಕ್ ವಾಹನಗಳಲ್ಲಿ ಬ್ಯಾಟರಿ ಮಾನಿಟರಿಂಗ್, ಭೂಕಂಪ ನಿರೋಧಕ ರಚನೆ ಮೊದಲಾದ ಬಗೆಯ ಪ್ರಾತ್ಯಕ್ಷಿತೆಗಳು ಪ್ರದರ್ಶನಗೊಳ್ಳಲಿವೆ ಎಂದರು.
ಈ ತಾಂತ್ರಿಕ ಕಾರ್ಯಕ್ರಮದ ಅಂಗವಾಗಿ ಒಟ್ಟು 22 ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ವಿನ್ಯಾಸ, ನಾವಿನ್ಯತೆ, ತಾಂತ್ರಿಕ ಪೇಪರ್ ಪ್ರಸ್ತುತಿಗಳು, ಕ್ವಿಜ್, ಕೋಡಿಂಗ್ ಡೀಬಗ್ಗ್ ಮಾಡುವಿಕೆ, ಪೆÇೀಸ್ಟರ್ ಪ್ರಸ್ತುತಿಗಳು, ಐಡಿಯಾಥಾನ್ ಹಾಗೂ ಮುಂತಾದ ತಾಂತ್ರಿಕ ಸ್ಪಧರ್Éಗಳನ್ನು ಒಳಗೊಂಡಿರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳು ವಿದ್ಯಾರ್ಥಿಗಳ ತಾಂತ್ರಿಕ ಸಾಮಥ್ರ್ಯ ಮತ್ತು ಇತರೆ ಕೌಶಲ್ಯಗಳನ್ನು ಹೆಚ್ಚಿಸುತ್ತವೆ. ಈ ಕಾರ್ಯಕ್ರಮವು ಇತರ ಕಾಲೇಜಿಗಳ ಮಿತ್ರರೊಂದಿಗೆ ಸ್ಪರ್ಧಿಸಲು ವೇದಿಕೆಯನ್ನು ಒದಗಿಸುತ್ತದೆ ಎಂದರು.
ಇದೇ ಕಾರ್ಯಕ್ರಮದ ಅಡಿಯಲ್ಲಿ ರಂಗಮಂಚ ಎಂಬ ಶೀರ್ಷಿಕೆಯಡಿಯಲ್ಲಿ ಮೇ.24 ರಂದು ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಕಲಾತ್ಮಕ ಪರಾಕ್ರಮವನ್ನು ಪ್ರದರ್ಶಿಸುತ್ತಾರೆ. ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಡಾ.ಆರ್.ಬಿ.ಕೊಟ್ನಾಳ ಉದ್ಘಾಟಿಸಲಿದ್ದಾರೆ, ಅದೇ ತೆರನಾಗಿ ಮೇ.25 ರಂದು ಸಂಭ್ರಮ ಎನ್ನುವ ವಿಶಿಷ್ಟ ಕಾರ್ಯಕ್ರಮ ಸಹ ಆಯೋಜಿಸಲಾಗಿದೆ ಎಂದರು.
ಉಪಪ್ರಾಚಾರ್ಯ ಡಾ.ಜಿ.ವಿ. ಪಾಟೀಲ, ಡಾ.ಪಿ.ವಿ. ಮಾಳಜಿ, ಡಾ.ರಮೇಶ ಜೀರಗಾಳ, ಡಾ.ಉಣಕಿ, ಡಾ.ರವಿ ಹೊಸೂರ, ಶ್ರೀಕಾಂತ ಚೋಳಕೆ, ಡಾ.ಉಮೇಶ ದಿಕ್ಷೀತ, ಪ್ರೊ.ವೈ.ಎ. ಕುಲಕರ್ಣಿ ಉಪಸ್ಥಿತರಿದ್ದರು.