ಉದ್ಯಾನವನ ಅಭಿವೃದ್ಧಿ ಸಮಿತಿಯಿಂದ ಸನ್ಮಾನ
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೧೯; ಭಾರತೀಯ ಭೂದಳದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿ ಬಳಿಕ ಕರ್ನಾಟಕಕ್ಕೆ ಹಿಂದಿರುಗಿ ಕೃಷಿ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯಲ್ಲಿ  ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಯಾದ ಸರಸ್ವತಿ ಬಡಾವಣೆಯ ನಿವಾಸಿ ಎನ್ ಶ್ಯಾಮ್ ಅವರನ್ನು ದಾವಣಗೆರೆ ಉದ್ಯಾನವನ ಅಭಿವೃದ್ಧಿ ಸಮಿತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.ಈ ವೇಳೆ ಸಮಿತಿಯ ಅಧ್ಯಕ್ಷರಾದ ಕೆ ಜಿ ಯಲ್ಲಪ್ಪ ಮಾತನಾಡಿ ಶ್ಯಾಮ್ ಅವರು ದಾವಣಗೆರೆ ತುಮಕೂರು ಹಾಗು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಕೃಷಿ ಮಾರಾಟ ಇಲಾಖೆಯ ಜಿಲ್ಲಾ ಉಪ ನಿರ್ದೇಕರಾಗಿ ಸೇವೆಗೈದು ನಿವೃತ್ತರಾಗಿದ್ದಾರೆ. ಎನ್ ಶ್ಯಾಮ್ ಅವರು ನಮ್ಮ ಪಂಚಮುಖಿ ಉದ್ಯಾನವನಕ್ಕೆ  ಗಿಡಗಳನ್ನು ಸಂರಕ್ಷಿಸಲು ಟ್ರೀ ಗಾಡ್೯ಗಳನ್ನು ಕೊಡಿಸುವ ಮೂಲಕ ಪರಿಸರ ಉಳಿಸುವ ಕೆಲಸ ಮಾಡಿದ್ದಾರೆ ಜೊತೆಗೆ ತಮ್ಮ ಸೇವಾವಧಿಯಲ್ಲಿ ವಯಸ್ಸಾದವರಿಗೆ, ಅಶಕ್ತರಿಗೆ ಊರುಗೋಲು ಮತ್ತಿತರ ಕೊಡುಗೆಗಳನ್ನು ಕೊಡುವ ಮೂಲಕ ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದು ಶ್ಲಾಘನೀಯ ಎಂದರು. ಸಮಿತಿಯ ಗೌರವಾಧ್ಯಕ್ಚರಾದ ಎಂ ಸೋಮಶೇಖರಪ್ಪ, ಹಿರಿಯ ಉಪಾಧ್ಯಕ್ಷರಾದ ಜಿ ಚೌಡಪ್ಪ, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಪರಮೇಶ್ವರಪ್ಪ, ಶೇಖರಪ್ಪ, ವಿರೂಪಾಕ್ಷಪ್ಪ, ಜಯಾನಾಯ್ಕ, ದೇವೇಂದ್ರಪ್ಪ, ಚಂದ್ರಣ್ಣ, ನಾರಾಯಣ್, ಡಾ ಮಂಜುನಾಥ್ , ಕುಬೇರಪ್ಪ, ವಿಶ್ವನಾಥ ಕುಲಕರ್ಣಿ,  ಕೃಷ್ಣ ಮೂರ್ತಿ ಇದ್ದರು.