ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಕಮಲಾಪೂರ:ಸೆ.23:ಶಿಕ್ಷಕರು ನಿರಂತರ ಅಧ್ಯಯನ ಶೀಲರಾಗಿದ್ದಾಗ ಮಾತ್ರ ಮಕ್ಕಳಿಗೆ ಪ್ರಾಚೀನ ಮತ್ತು ಪ್ರಸ್ತುತ ಸಮಾಜದ ಆಗುಹೋಗುಗಳ ಕುರಿತು ಭೋದನೆ ಮಾಡಬಹುದು, ವಿದ್ಯಾರ್ಥಿಗಳ ಸಾಮಥ್ರ್ಯಕ್ಕೆ ಅನುಗುಣವಾಗಿ ಪಾಠಬೋಧನೆ ಮಾಡಿದರೆ ಮಾತ್ರ ನೀವು ಮಕ್ಕಳ ಗಮನ ಸೆಳೆಯಬಹುದು ಎಂದು ಮಹಾಗಾಂ ವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಶರಣಪ್ಪಾ ಮಾಳಗೆ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ, ಕಮಲಾಪುರ ವತಿಯಿಂದ ಕಮಲಾಪುರದಲ್ಲಿ ರವಿವಾರ ಹಮ್ಮಿಕೊಂಡ
ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ಇಂದಿನ ಯುವ ಸಮೂಹದಲ್ಲಿ ಸಂಸ್ಕಾರಗಳು ಕಣ್ಮರೆಯಾಗುತ್ತಿವೆ ಎಂದು ಕಳವಳ ವ್ಯಕ್ತಡಿಸಿದರು.
ಮಾಜಿ ಜಿಲ್ಲಾ ಪಂಚಯತ್ ಸದಸ್ಯ ಶಿವಶೆಟ್ಟಿ ಪಾಟೀಲ ಮಾತನಾಡಿ ಗುರುವಿನ ಮಾರ್ಗದಲ್ಲಿ ಸಾಗಿದರೆ ಅಂದುಕೊಂಡ ಗುರಿ ಸಾಧಿಸಬಹುದು ಎಂದುರು.
ಕಾಂಗ್ರೆಸ್ ಮುಖಂಡ ಗುರು ಮಾಟೂರ ಮಾತನಾಡಿ ಶಿಕ್ಷಕ ವೃತ್ತಿ ಪವಿತ್ರವಾದದ್ದು, ಹಿಂದೆ ಗುರು ಮುಂದೆ ಗುರು ಇದ್ದಾಗ ಮಾತ್ರ ವಿದ್ಯಾರ್ಥಿಗಳು ಗುರಿ ಸಾಧಿಸಬಹುದು ಎಂದರು.
ಪಿಜಿ ರಾಜ್ಯಶಾಸ್ತ್ರ ವಿಭಾಗದಲ್ಲಿ
ಕಲಬುರ್ಗಿ ವಿವಿಗೆ ಟಾಪರ್ ಬಂದ ಪಲ್ಲವಿ ತಂದೆ ರಮೇಶ್ ಅವರನ್ನು ಸತ್ಕರಿಸಲಾಯಿತು .
ಸರಕಾರಿ ಪ್ರೌಡಶಾಲಾ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷ ಸೋಮನಗೌಡ ವಿಟಲಾಪುರ, ಸರಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷ ಪರಮೇಶ್ವರ ಓಕಳಿ, ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೆಂಗಟಿ
ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಅಧ್ಯಕ್ಷೆ ಅಂಜನಾ ಶಿರವಾಳ ಮಾತನಾಡಿದರು.
ಕಸ್ತೂರಬಾಯಿ ಪ್ರಾಥ9ನಾ ಗೀತೆ ಹಾಡಿದರು, , ರವೀಂದ್ರ ಬಿಕೆ ನಿರೂಪಿಸಿದರು, ಅಂಬಾರಾಯ ಮಾಡ್ದೆ ಸ್ವಾಗತಿಸಿದರು.
ಕನ್ನಡ ನಾಡು ನುಡಿ ಉಳಿಸಿ ಬೆಳೆಸುವುದರ ಜೊತೆಗೆ ತಮ್ಮ ವೃತ್ತಿಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಪ್ರವೃತ್ತಿಯನ್ನಗಿಸಿಕೊಂಡು ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಪೆÇ್ರೀತ್ಸಾಹಿಸುವ ಕಾ??9 ಕಮಲಾಪುರ ಕಸಾಪ ಮಾಡುತ್ತಿದೆ, ನಿಮ್ಮೆಲ್ಲರ ಸಹಕಾರ ನಮ್ಮೊಂದಿ ಗಿರಲಿ ……ಸುರೇಶ್ ಲೆಂಗಟಿ, ತಾಲೂಕಾ ಅಧ್ಯಕ್ಷ ಕಸಾಪ