ನಾಲ್ಕು ಗೇಟನಿಂದ ಬಿಟ್ಟ ಕಾರಂಜಾ ಜಲಾಶಯ ನೀರು; ರೈತರ ಬೆಳೆ ಸಂಪೂರ್ಣ ಜಲಾವೃತ
ಭಾಲ್ಕಿ ಸೆ 23: ಜಿಲ್ಲೆಯ ಜೀವ ನಾಡಿ ಅದರಲ್ಲೂ ಭಾಲ್ಕಿ ತಾಲೂಕಿನ ಕಟ್ಟಿ ತುಗಾವ್, ಕಣಜಿ
ಹುಣಜಿ, ನೆಲವಾಲ,ಗೋಧಿಹಿಪ್ಪರ್ಗ ಸುಮಾರು ಗ್ರಾಮಗಳು ಕಾರಂಜಾ ಜಲಾಶಯದ ನೀರು ಈಗಾಗಲೇ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ಒಂದು ವಾರ ಹಿಂದೆ ಮಳೆ ಬಿದ್ದು ಬೆಳೆಯನ್ನು ಆಹುತಿ ಪಡೆದಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇದರ ಬೆನ್ನಲ್ಲೆ ಈಗ ಕಾರಂಜಾ ಡ್ಯಾಂನಿಂದ ಕಾಲುವೆಗೆ ನಾಲ್ಕು ಗೇಟ್ನಿಂದ ನೀರು ಹರಿಸಲಾಗುತ್ತಿದೆ. ಇದರಿಂದ ನೂರಾರು ಹೆಟ್ಟರು ಬೆಳೆದಿರುವ ತೊಗರಿ, ಸೋಯಾ ಬೆಳೆಯಲ್ಲಿ ನೀರು ನಿಂತು ಕೊಂಡಿದೆ. ಇದರಿಂದ ಬೆಳೆ ಕೈಗೆ ಬಾರದಷ್ಟು ಹಾಳಾಗಿದೆ.
ಮೊದಲೇ ಒಂದು ವಾರ ಹಿಂದಷ್ಟೇ ಐದರಿಂದ ಆರು ದಿನ ಮಳೆ ಸುರಿದು ಬೆಳೆ ನಾಶವಾಗಿದ್ದು.
ರೈತರು ಈಗ ಮತ್ತಷ್ಟು ಸಮಸ್ಯೆ ಅನುಭವಿಸುವಂತೆ ಆಗಿದೆ. ಈ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಈಗ ಕಾರಂಜಾ ಡ್ಯಾಂನಿಂದ ಕಾಲುವೆಗೆ ನೀರು ಬಿಟ್ಟಿದ್ದು, ಮಳ್ಳೆಗಾಲದ ಮುಂಗಾರದ ಬೆಳೆಗಳು ಹಾಳಾಗಿದೆ. ಇದರಿಂದ ರೈತರು ಮತ್ತಷ್ಟು ನಷ್ಟಕ್ಕೆ ಒಳಗಾಗಿದ್ದು, ಈ ನಷ್ಟ ಭರಿಸುವವರು ಯಾರು ಎಂದು ರೈತರು ಪ್ರಶ್ನಿಸಿದ್ದಾರೆ.
ಅದರಲ್ಲಿಯೂ ವಿಶೇಷವಾಗಿ ಕಟಾವಿಗೆ ಬಂದಿರುವ ಸೋಯಾ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಯಾಗಿದೆ ಎಂದು ಕಣಜಿ ಗ್ರಾಮದ ರೈತರಾದ ಮಲಶೆಟ್ಟಿ ಶರಣಪ್ಪ ಚೆನ್ನಬಟ್ಟಿ, ಗುರಪ್ಪ ಚೆನ್ನಬಟ್ಟಿ, ವಿನೋದ್ ರೇಚಟ್ಟಿ,ರಾಜಕುಮಾರ್, ವಿಜಯಕುಮಾರ, ಸಂತೋಷ್ ಇನ್ನು ಹಲವರು ರೈತರು ಇಲ್ಲಿವರೆಗೂ ಯಾವುದೇ ಅಧಿಕಾರಿ ಕೂಡ ಹಾಗೂ ಜಿಲ್ಲೆಯ ಸಚಿವರು ಕೂಡ ಈ ಕಡೆ ಗಮನಹರಿಸಿ ನಮ್ಮ ಸಮಸ್ಯೆಗೆ ಯಾರು ಸ್ಪಂದಿಸುತ್ತಿಲ್ಲ ಎಂಬುದು ರೈತರ ಅಳಲು ತೋಡಿಕೊಂಡಿದರು.