ಪ್ರಗತಿ ಶೀಲತೆ ಹಿಂದಿ ಪುಸ್ತಕ ಬಿಡುಗಡೆ
ಕೋಲಾರ,ಸೆ.೨೨-: ನಗರದ ಸರ್ಕಾರಿ ಮಹಿಳಾ ಕಾಲೇಜು ಹಿಂದಿ ವಿಭಾಗದ ಮುಖ್ಯಸ್ಥೆ ಲೇಖಕಿ ಡಾ.ಲಕ್ಷ್ಮೀದೇವಿ ಡಿ ಇವರು ರಚಿಸಿದ “ಉದಯ್ ಪ್ರಕಾಶರವರ ಕಾವ್ಯದಲ್ಲಿ ಪ್ರಗತಿ ಶೀಲತೆ” ಎಂಬ ಪುಸ್ತಕವನ್ನು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಲೇಜು ಹಿಂದಿ ಪ್ರಾಧ್ಯಾಪಕರ ಸಂಘ ಮತ್ತು ಆಗ್ರಾದ ಹಿಂದಿ ಸಂಸ್ಥಾನ ಇವರ ಜಂಟಿ ಆಶ್ರಯದಲ್ಲಿ ೨೮ ಆಗಸ್ಟ್ ೨೦೨೪ ರಂದು ಕೆ.ಜಿ.ಎಫ್‌ನ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ಹಿಂದಿ ವಿಚಾರ ಸಂಕಿರಣದ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಲೇಜು ಹಿಂದಿ ಪ್ರಾಧ್ಯಾಪಕ ಸಂಘದ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಂಗಳೂರಿನ ಐಕಳದ ಪೊಂಪೈ ಕಾಲೇಜಿನ ಹಿಂದಿ ಪ್ರೊ.ಡಾ. ಎಸ್.ಎ.ಮಂಜುನಾಥ ಗೌಡ ರವರು ಲೇಖಕಿ ಡಾ.ಲಕ್ಷ್ಮಿ ದೇವಿ ಡಿ. ರವರ ವೈಚಾರಿಕ ಪ್ರಜ್ಞೆ ಮತ್ತು ಪ್ರಗತಿಪರ ಚಿಂತನೆ ಇಂದಿನ ಯುವ ಬರಹಗಾರರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.