ವೇಮಗಲ್‌ನಲ್ಲಿ ಪೌರ ಕಾರ್ಮಿಕರ ಕ್ರೀಡಾಕೂಟ
ಕೋಲಾರ,ಸೆ.೨೩-ತಾಲೂಕಿನ ವೇಮಗಲ್-ಕುರುಗಲ್ ಪಟ್ಟಣ ಪಂಚಾಯತಿ ವತಿಯಿಂದ ಪೌರ ಕಾರ್ಮಿಕ ದಿನಾಚರಣೆಯ ಅಂಗವಾಗಿ ಪಟ್ಟಣದ ಸೀತಿ ರಸ್ತೆಯ ತಾಲೂಕು ಮಟ್ಟದ ಕ್ರೀಡಾಂಗಣದಲ್ಲಿ ೨೦೨೪-೨೦೨೫ ನೇ ಸಾಲಿನ ಕ್ರೀಡಾಕೂಟ ಏರ್ಪಡಿಸಲಾಗಿತ್ತು.
ವೇಮಗಲ್ ಪಟ್ಟಣದ ತಾಲೂಕು ಮಟ್ಟದ ಕ್ರೀಡಾಂಗಣದಲ್ಲಿ ಪೌರ ಕಾರ್ಮಿಕ ಕ್ರೀಡಾಕೂಟವನ್ನು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎಸ್.ಎಂ.ವೆಂಕಟೇಶ್ ಉದ್ಘಾಟಿಸಿದರು.
ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕ ಕ್ರೀಡಾಕೂಟದಲ್ಲಿ ೨೦೦ ಮೀಟರ್ ಓಟ, ಗೋಣಿಚಿಲ ಜಿಗಿತ, ನಿಂಬೆಹಣ್ಣು ಚಮಚದಾಟ, ಗುಂಡು ಎಸೆತ, ಮಡಿಕೆ ಹೊಡೆಯುವುದು, ಮ್ಯೂಸಿಕಲ್ ಚೇರ್, ಕ್ರಿಕೆಟ್ ಇನ್ನೂ ಹಲವು ಕ್ರೀಡಾ ಕೂಟಗಳನ್ನು ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನವಾಗಿ ಏರ್ಪಡಿಸಲಾಗಿತ್ತು.
ಹೆಲ್ತ್ ಇನ್ಸ್ಪೆಕ್ಟರ್ ಎನ್.ದೀಪ, ಅಕೌಂಟೆಂಟ್ ಶಿವಕುಮಾರ್, ಆರ್.ಐ.ಪ್ರಶಾಂತ್, ಮೈಲಾರ ಸ್ವಾಮಿ, ಜಾನಕಿರಾಮ್, ಧನಂಜಯ್, ಬಾಬು, ನಾಗರಾಜ್, ಹರೀಶ್ ಇದ್ದರು.